Chikkamagaluru; ಮಲೆನಾಡಿನಲ್ಲಿ ಆರ್ಭಟಿಸಿದ ವರುಣ; ಮತ್ತೆ ಮುಳುಗಿದ ಹೆಬ್ಬಾಳೆ ಸೇತುವೆ


Team Udayavani, Jul 18, 2024, 3:27 PM IST

Chikkamagaluru; ಮಲೆನಾಡಿನಲ್ಲಿ ಆರ್ಭಟಿಸಿದ ವರುಣ; ಮತ್ತೆ ಮುಳುಗಿದ ಹೆಬ್ಬಾಳೆ ಸೇತುವೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಲ್ಪ ವಿರಾಮ ನೀಡಿದ ಪುನರ್ವಸು ಮಳೆ‌ ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಭದ್ರಾ ನದಿ ನೀರಿನ‌ ಮಟ್ಟ ಏರಿಕೆಯಾಗಿದ್ದು ಮುಳುಗು ಸೇತುವೆ ಎಂದು ಖ್ಯಾತಿ ಪಡೆದಿರುವ ಹೆಬ್ಬಾಳೆ ಸೇತುವೆ ಭದ್ರಾ ನದಿ ನೀರಿನಲ್ಲಿ ಎರಡನೇ ಬಾರಿ ಮುಳುಗಿದೆ.

ಸೇತುವೆ ಮುಳುಗಿರುವ ಪರಿಣಾಮ ಕಳಸ-ಹೊರನಾಡು ಸಂಪರ್ಕ ಮತ್ತೊಮ್ಮೆ ಕಡಿತ ಗೊಂಡಿದೆ. ಕಳಸ ಹೊರನಾಡು ಸೇರಿ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಕುದುರೆಮುಖ ಘಟ್ಟ ಪ್ರದೇಶದಲ್ಲಿ ಬಾರೀ ಮಳೆಯಾದ ಹಿನ್ನಲೆ ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕೊಪ್ಪ ಭಾಗದಲ್ಲಿ ಮಳೆಯಾಗುತ್ತಿದ್ದು, ಗುಡ್ಡೇತೋಟ ಸಮೀಪದ ಶಾಂತಿ ಗ್ರಾಮದಲ್ಲಿ ಮನೆಯೊಂದು ನೋಡನೋಡುತ್ತಿದ್ದಂತೆ ಉರುಳಿ ಬಿದ್ದಿದೆ. ಮನೆ ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಮನೆಯಲ್ಲಿ ಯಾರು ಇಲ್ಲದ ಹಿನ್ನೆಲೆ ಅನಾಹುತ ತಪ್ಪಿದೆ. ಶೃಂಗೇರಿ ತಾಲೂಕಿನ ನೆಮ್ಮಾರ್ ಎಸ್ಟೇಟ್ ಬಳಿ ರಾಷ್ತ್ರೀಯ ಹೆದ್ದಾರಿ ಬಿರುಕು ಬಿಟ್ಟಿದೆ. ಶೃಂಗೇರಿ ಕಾರ್ಕಳ ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ತುಂಗಾನದಿ ಸಮೀಪದಲ್ಲೇ ರಸ್ತೆ ಬಿರುಕು ಕಾಣಿಸಿಕೊಂಡಿದ್ದು ವಾಹನ ಸವಾರರು ಆತಂಕದಲ್ಲಿ ಚಲಿಸುವಂತಾಗಿದೆ. ಕಳಪೆ ಕಾಮಗಾರಿಯಿಂದ ರಸ್ತೆ ಬಿರುಕು ಬಿಟ್ಟಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಮಳೆ ಅಬ್ಬರಿಸುತ್ತಿದ್ದು ಮೀನು ಬೇಟೆಯೂ ಜೋರಾಗಿ ನಡೆಯುತ್ತಿದೆ. ಭದ್ರಾ ಹಿನ್ನೀರಿನಲ್ಲಿ ಭಾರೀ ಗಾತ್ರದ ಮೀನುಗಳು ಕಾಣಿಸಿಕೊಳ್ಳುತ್ತಿದ್ದು ನರಸಿಂಹರಾಜಪುರ ಮೀನು ಮಾರುಕಟ್ಟೆಯಲ್ಲಿ ಮೀನು ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದಾರೆ.

ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ತುಂಗಾನದಿ ನೆರೆ ಬಂದಿದ್ದು, ನದಿಪಾತ್ರದ ತೋಟಗಳಿಗೆ ನದಿನೀರು ನುಗ್ಗಿದೆ. ನದಿಯ ಪ್ರವಾಹ ಕಡಿಮೆಯಾಗುವಂತೆ‌ ಸ್ಥಳೀಯರು ನದಿಗೆ‌ ಪೂಜೆ ಸಲ್ಲಿದ್ದಾರೆ.

ಮಲೆನಾಡಿನಲ್ಲಿ ಹರಿಯುವ ಸಣ್ಣ ಸಣ್ಣ ಹಳ್ಳಗಳು ಜಲಪಾತದಂತೆ ಭೋರ್ಗರೆಯುತ್ತಿವೆ. ಮೂಡಿಗೆರೆ ತಾಲೂಕಿನ ಹಬ್ಬಿಹಳ್ಳ ಜಲಪಾತದ ರೂಪ ಪಡೆದುಕೊಂಡು ಹಾಲ್ನೋರೆಯಂತೆ ಧುಮ್ಮಿಕ್ಕುತ್ತಿದೆ.‌

ಗುರುವಾರ ರಾತ್ರಿಯಿಂದ ಬಿಡುವು ನೀಡಿದ್ದ ವರುಣ ಚಿಕ್ಕಮಗಳೂರು ಸುತ್ತಮುತ್ತ ಮತ್ತೆ ಆರ್ಭಟಿಸಲು ಶುರುಮಾಡಿದ್ದಾನೆ. ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲೂ ಮಳೆಯಾಗುತ್ತಿದೆ. ಒಟ್ಟಾರೆ ಆರ್ಭಟಿಸುತ್ತಿರುವ ಮಳೆಗೆ ಜಿಲ್ಲೆಯ ಜನರು ಸುಸ್ತಾಗಿದ್ದಾರೆ.

ಟಾಪ್ ನ್ಯೂಸ್

KN-Rajanna

Price Hike: ಹಾಲಿನ ದರ ಹೆಚ್ಚಿಸಿದರೆ ರೈತರಿಗೆ ನೇರ ಲಾಭ : ಸಹಕಾರ ಸಚಿವ ಕೆ.ಎನ್‌.ರಾಜಣ್ಣ

Udupi: ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ನದಿಗೆ ಹಾರಿದ ಯುವಕ?

Udupi: ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ನದಿಗೆ ಹಾರಿದ ಯುವಕ?

9

Imran Khan: ದಂಗೆ ಏಳಲು ಪ್ರಚೋದನೆ; ಇಮ್ರಾನ್‌ ವಿರುದ್ಧ ಕೇಸು

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

1-mmm

Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ

1-ddsadsa

Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ct-ravi

Chikkamagaluru: ರಾಹುಲ್ ಗಾಂಧಿ ಭಾರತ ವಿರೋಧಿ ನಾಯಕರೆಂಬ ಅನುಮಾನ ಕಾಡುತ್ತಿದೆ: ಸಿ.ಟಿ ರವಿ

18-ct-ravi

Chikkamagaluru: ಈ ಹೇಡಿ ಸರ್ಕಾರ ಗಣಪತಿ ಕೂರಿಸದವರನ್ನೇ A1 ಮಾಡಿದೆ: ಸಿ.ಟಿ.ರವಿ

Chikkamagaluru: ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಖಾಸಗಿ ಬಸ್… ಇಬ್ಬರು ಮೃತ್ಯು

Chikkamagaluru: ಖಾಸಗಿ ಬಸ್ – ರಿಕ್ಷಾ ನಡುವೆ ಭೀಕರ ಅಪಘಾತ… ಇಬ್ಬರು ಸ್ಥಳದಲ್ಲೇ ಮೃತ್ಯು

1mmmm

Chikkamagaluru:ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಚಾಕು ಇ*ರಿತ

Charmadi-Ghat

Highway Department: ಚಾರ್ಮಾಡಿ ಘಾಟಿ: ತಡೆಗೋಡೆ ದುರಸ್ತಿಗೆ ಕ್ರಮ

MUST WATCH

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

ಹೊಸ ಸೇರ್ಪಡೆ

Davis Cup: ಬಾಲಾಜಿಗೆ ಸೋಲು

Davis Cup: ಬಾಲಾಜಿಗೆ ಸೋಲು

Hockey India: ವನಿತಾ ಹಾಕಿ ಶಿಬಿರಕ್ಕೆ 33 ಆಟಗಾರ್ತಿಯರು

Hockey India: ವನಿತಾ ಹಾಕಿ ಶಿಬಿರಕ್ಕೆ 33 ಆಟಗಾರ್ತಿಯರು

Diamond League: ಸ್ಟೀಪಲ್‌ ಚೇಸರ್‌ ಸಾಬ್ಲೆಗೆ 9ನೇ ಸ್ಥಾನ

Diamond League: ಸ್ಟೀಪಲ್‌ ಚೇಸರ್‌ ಸಾಬ್ಲೆಗೆ 9ನೇ ಸ್ಥಾನ

India vs Bangladesh: ನೆಟ್ಸ್‌ನಲ್ಲಿ ಭಾರತಕ್ಕೆ ಗುರ್ನೂರ್‌ ನೆರವು

India vs Bangladesh: ನೆಟ್ಸ್‌ನಲ್ಲಿ ಭಾರತಕ್ಕೆ ಗುರ್ನೂರ್‌ ನೆರವು

21

Subramanya: ನಿಯಂತ್ರಣ ತಪ್ಪಿದ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.