Uttarakhand: ಪತಿಯನ್ನು ಹೆದರಿಸುವ ನಿಟ್ಟಿನಲ್ಲಿ ಮಗನಿಗೆ ಥಳಿಸಿ ವಿಡಿಯೋ ಮಾಡಿದ ಪತ್ನಿ.!
Team Udayavani, Jul 18, 2024, 4:03 PM IST
ಡೆಹ್ರಾಡೂನ್: ಕೌಟುಂಬಿಕ ಕಲಹದಿಂದ ತನ್ನ ಮಗನನ್ನೇ ಮಹಿಳೆಯೊಬ್ಬರು ಥಳಿಸಿರುವ ವಿಡಿಯೋ ಮಾಡಿ ಅದನ್ನು ಪತಿಗೆ ಕಳಿಸಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿರುವುದು ವರದಿಯಾಗಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಹರಿದ್ವಾರ ಪೊಲೀಸರು ಇದನ್ನು ಪರಿಶೀಲಿಸಿದ್ದು, ಇದು ಎರಡು ತಿಂಗಳ ಹಿಂದಿನ ವಿಡಿಯೋ ಎಂದು ಹೇಳಿದ್ದಾರೆ.
ಮಹಿಳೆಯ ಪತಿ ಉತ್ತರ ಪ್ರದೇಶದಲ್ಲಿ ನೆಲೆಸಿದ್ದಾನೆ. ಈತ ಮದ್ಯವ್ಯಸನಿಯಾಗಿದ್ದು, ಮನೆ ಖರ್ಚಿಗೆ ಒಂದು ರೂಪಾಯಿಯನ್ನು ನೀಡುತ್ತಿರಲಿಲ್ಲ. ಇದರಿಂದ ಬೇಸತ್ತು ಹೋದ ಮಹಿಳೆ ತನ್ನ ಪತಿಯನ್ನು ಹೆದರಿಸುವ ನಿಟ್ಟಿನಲ್ಲಿ 11 ವರ್ಷದ ಮಗನನ್ನು ಥಳಿಸಿದ್ದಾಳೆ.
ಥಳಿಸುತ್ತಿರುವ ವಿಡಿಯೋವನ್ನು ಹಿರಿಯ ಮಗ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. ಈ ವಿಡಿಯೋವನ್ನು ಮಹಿಳೆ ಪತಿಗೆ ಕಳುಹಿಸಿದ್ದಾಳೆ. ವಿಡಿಯೋ ಸಿಕ್ಕ ಬಳಿಕ ಪತಿ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.
ವೀಡಿಯೊ ವೈರಲ್ ಆಗುತ್ತಿದ್ದಂತೆ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ಮಾಹಿತಿ ನೀಡಿ ,ನಂತರ ಮಹಿಳೆಯನ್ನು ವಿಚಾರಣೆಗೆ ಕರೆಯಲಾಗಿದೆ. ಆಕೆಯನ್ನು ಹಲವು ಸುತ್ತಿನ ಕೌನ್ಸೆಲಿಂಗ್ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 10 ವರ್ಷದಿಂದ ಪತಿಯ ಕುಡಿತದ ಚಟದಿಂದ ಸಂಸಾರದಲ್ಲಿ ಅನೇಕ ಬಾರಿ ಕಲಹ ಉಂಟಾಗಿದೆ. ಕೆಲವು ತಿಂಗಳುಗಳಿಂದ ಮನೆಗೆ ಬಾರದೆ ಉತ್ತರಪ್ರದೇಶದಲ್ಲಿ ಅಂಗಡಿಯೊಂದನ್ನು ನಿರ್ವಹಿಸುತ್ತಿದ್ದಾನೆ. ನಾನು ದೊಡ್ಡ ಮಗನ ಬಳಿ ಮತ್ತೊಂದು ಮಗುವಿಗೆ ಹೊಡೆಯುತ್ತಿರುವ ವಿಡಿಯೋ ಮಾಡಲು ಹೇಳಿ, ಪತಿಯನ್ನು ಹೆದರಿಸುವುದಕ್ಕಾಗಿ ವಿಡಿಯೋ ಕಳಿಸಿದೆ ಎಂದು ಪೊಲೀಸರ ಮುಂದೆ ಮಹಿಳೆ ಹೇಳಿದ್ದಾಳೆ.
ಪೊಲೀಸರು ಮಹಿಳೆ ಬಗ್ಗೆ ಅಕ್ಕಪಕ್ಕದವರ ಬಳಿ ವಿಚಾರಿಸಿದ್ದಾರೆ. ಆಗ ಮಹಿಳೆ ತನ್ನ ಮಕ್ಕಳ ಜೊತೆ ಒಳ್ಳೆಯ ರೀತಿಯಲ್ಲೇ ಇದ್ದಾರೆ ಎನ್ನುವುದು ಗೊತ್ತಾಗಿದೆ.
ಪತಿ ವಿರುದ್ಧ ಮಹಿಳೆ ಮಾಡಿರುವ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.