Tried our best; 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾರ್ದಿಕ್ ಪಾಂಡ್ಯ-ನತಾಶಾ
ಪುತ್ರ ಅಗಸ್ತ್ಯನನ್ನು ಯಾರು ನೋಡಿಕೊಳ್ಳುತ್ತಾರೆ?
Team Udayavani, Jul 18, 2024, 9:54 PM IST
ಮುಂಬಯಿ: ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಬೇರ್ಪಡುತ್ತಿರುವುದಾಗಿ ಗುರುವಾರ (ಜುಲೈ 18) ಘೋಷಿಸಿದ್ದಾರೆ.
ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿರುವ ಪಾಂಡ್ಯ ಹಲವು ದಿನಗಳ ಊಹಾಪೋಹಗಳ ನಂತರ ತನ್ನ ನಿರ್ಧಾರವನ್ನು ಪ್ರಕಟಿಸಿದರು. Instagram ಮೂಲಕ ಮಾಜಿ ಪತ್ನಿಯೊಂದಿಗೆ ಜಂಟಿ ಹೇಳಿಕೆಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ನಾವು ಪರಸ್ಪರ ಬೇರೆಯಾಗುತ್ತಿದ್ದು ಪುತ್ರನನ್ನು ಅಗಸ್ತ್ಯನನ್ನು ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ ಎಂದು ಬಹಿರಂಗಪಡಿಸಿದ್ದಾರೆ.
“4 ವರ್ಷಗಳ ಕಾಲ ಒಂದಾಗಿ ಇದ್ದ ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಇದು ನಮ್ಮಿಬ್ಬರ ಹಿತಾಸಕ್ತಿಗಾಗಿ ಎಂದು ನಾವು ನಂಬುತ್ತೇವೆ. ಇದು ಕಠಿನ ನಿರ್ಧಾರವಾಗಿದೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಹೊಂದಿದ್ದೇವೆ, ಕುಟುಂಬವನ್ನು ಬೆಳೆಸಿಕೊಂಡಿದ್ದೇವೆ. ನಾವು ಅಗಸ್ತ್ಯನೊಂದಿಗೆ ಆಶೀರ್ವದಿಸಲ್ಪಟ್ಟಿದ್ದೇವೆ, ಅವನು ನಮ್ಮಿಬ್ಬರ ಜೀವನದ ಕೇಂದ್ರದಲ್ಲಿ ಮುಂದುವರಿಯುತ್ತಾನೆ ಮತ್ತು ಅವನ ಸಂತೋಷಕ್ಕಾಗಿ ನಾವು ಅವನಿಗೆ ಸಾಧ್ಯವಿರುವ ಎಲ್ಲವನ್ನೂ ನೀಡುವುದನ್ನು ಖಚಿತಪಡಿಸಿಕೊಳ್ಳಲು ಸಹ-ಪೋಷಕರಾಗಿರುತ್ತೇವೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: Sri Lanka ಪ್ರವಾಸ; ಭಾರತ ತಂಡ ಪ್ರಕಟ: ಹಾರ್ದಿಕ್ ಪಾಂಡ್ಯಗೆ ಸಿಗದ T20 ನಾಯಕತ್ವ
“ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಉಳಿಸಿಕೊಳ್ಳಲು ನಿಮ್ಮ ಬೆಂಬಲ ಮತ್ತು ಸಹಕಾರವನ್ನು ನಾವು ಪ್ರಾಮಾಣಿಕವಾಗಿ ಕೇಳಿಕೊಳ್ಳುತ್ತೇವೆ” ಎಂದು ಹಾರ್ದಿಕ್ ತಮ್ಮ ನೋವಿನ ಬರಹ ಬಹಿರಂಗ ಪಡಿಸಿಕೊಂಡಿದ್ದಾರೆ.
IPL 2024 ರ ಸೀಸನ್ನಿಂದಲೇ ಊಹಾಪೋಹಗಳು ಕೇಳಿಬಂದಿದ್ದವು. ನತಾಶಾ ತನ್ನ ಇನ್ಸ್ಟಾಗ್ರಾಮ್ ಖಾತೆಯ ಪ್ರೊಫೈಲ್ನಿಂದ ಹಾರ್ದಿಕ್ ಹೆಸರನ್ನು ತೆಗೆದುಹಾಕಿ ವೈಯಕ್ತಿಕ ಫೋಟೋಗಳನ್ನು ಡಿಲೀಟ್ ಮಾಡಿದ ಬಳಿಕ ಚರ್ಚೆ ಜೋರಾಗಿತ್ತು.
ಸರ್ಬಿಯನ್ ಮೂಲದ ನರ್ತಕಿ, ರೂಪದರ್ಶಿ ಮತ್ತು ನಟಿ ನತಾಶಾ 2014 ರಲ್ಲಿ ಪ್ರಕಾಶ್ ಝಾ ನಿರ್ದೇಶನದ ‘ಸತ್ಯಾಗ್ರಹ’ ಚಿತ್ರದೊಂದಿಗೆ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದರು. ಬಿಗ್ ಬಾಸ್ 8 ರಲ್ಲಿ ಸ್ಪರ್ಧಿಯಾಗಿದ್ದರು. ನಾಚ್ ಬಲಿಯೆ 9 ರಲ್ಲೂ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.