Hejjaru; ಕನ್ನಡದ ಮೊದಲ ಪ್ಯಾರಲಲ್ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ
Team Udayavani, Jul 19, 2024, 10:42 AM IST
ನವಪ್ರತಿಭೆಗಳ “ಹೆಜ್ಜಾರು’ ಚಿತ್ರ ಇಂದು ತೆರೆಕಾಣುತ್ತಿದೆ. “ಹೆಜ್ಜಾರು’ ಬಗ್ಗೆ ಹೇಳುವುದಾದರೆ, ಇದುಕನ್ನಡದ ಮೊಟ್ಟ ಮೊದಲ ಪ್ಯಾರಲಲ್ ಲೈಫ್ ಸಿನಿಮಾ.
ಹರ್ಷಪ್ರಿಯ ಈ ಸಿನಿಮಾದ ನಿರ್ದೇಶಕರು. ಪುಟ್ಟಗೌರಿ ಮದುವೆ, ಕಿನ್ನರಿ, ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು, ಮಹಾನಾಯಕ ಅಂಬೇಡ್ಕರ್ ಹಾಗೂ ಹೆಬ್ಬುಲಿಯ ದೇವರೆ ನೀನು ಇರೊ, ವಿಳಾಸವು ಬೇಕಾಗಿದೆ ಹೀಗೆ ಸಾಹಿತಿಯಾಗಿ, ಕಥೆಗಾರನಾಗಿ, ಸಂಭಾಷಣೆಕಾರನಾಗಿ ಹಾಗೂ ಆಗಿ ಹಲವಾರು ಹಿಟ್ ಧಾರಾವಾಹಿಗಳಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ ಹರ್ಷಪ್ರಿಯ ಅವರು ಹೆಜ್ಜಾರು ಮೂಲಕ ಸಿನಿಮಾ ನಿರ್ದೇಶಕಕ್ಕೆ ಇಳಿದಿದ್ದಾರೆ.
ಕಿರುತೆರೆಯಲ್ಲಿ ಹಲವಾರು ಹಿಟ್ ಧಾರಾವಾಹಿಗಳನ್ನು ನೀಡಿರುವ ಕೆ.ಎಸ್. ರಾಮ್ಜಿ ತಮ್ಮ ಗಗನ ಎಂಟರ್ಪ್ರೈಸಸ್ ಅಡಿಯಲ್ಲಿ “ಹೆಜ್ಜಾರು’ ನಿರ್ಮಾಣ ಮಾಡಿದ್ದಾರೆ. ಭಗತ್ ಆಳ್ವ ಈ ಚಿತ್ರದ ನಾಯಕರು.
ಗೋಪಾಲಕೃಷ್ಣ ದೇಶಪಾಂಡೆ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮೊದಲ ಬಾರಿಗೆ ನವೀನ್ ಕೃಷ್ಣ ಅವರು ವಿಲನ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅರುಣಾ ಬಾಲರಾಜ್, ಮುನಿರಾಜ್, ವಿನೋದ್ ಭಾರತಿ ಒಳಗೊಂಡಂತೆ ಬಹುತೇಕ ರಂಗಭೂಮಿಯ ಹೊಸ ಪ್ರತಿಭೆಗಳು ಹೆಜ್ಜಾರಿನ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.