Olympic: ಒಲಿಂಪಿಕ್ಸ್ ಹುಟ್ಟಿದ್ದು ಹೇಗೆ…ಭಾರತ ಮೊದಲು ಪಾಲ್ಗೊಂಡಿದ್ದು ಯಾವಾಗ?
ಕ್ರಿಸ್ತಪೂರ್ವ 776ರಲ್ಲಿ ಒಲಿಂಪಿಕ್ಸ್ ಆರಂಭವಾಯಿತು...
Team Udayavani, Jul 19, 2024, 3:28 PM IST
ಒಲಿಂಪಿಕ್ಸ್ ಆರಂಭಕ್ಕಿನ್ನು 6 ದಿನಗಳು ಬಾಕಿ ಉಳಿದಿವೆ. ಈಗ ನಾವೆಲ್ಲಾ ವಿಜೃಂಭಿಸುವ ಈ ಕ್ರೀಡಾ ಹಬ್ಬ ಹುಟ್ಟಿದ ಬಗೆಯೇ ಒಂದು ಕೌತುಕ. ಸುದೀರ್ಘ ಇತಿಹಾಸವಿರುವ ಒಲಿಂಪಿಕ್ಸ್‌ನ ಹುಟ್ಟನ್ನು ಕೆದಕುತ್ತಾ ಹೋದರೆ ಅಚ್ಚರಿಯ ಮಜಲುಗಳೇ ತೆರೆದುಕೊಳ್ಳುತ್ತವೆ. ಬನ್ನಿ, ಒಲಿಂಪಿಕ್ಸ್ ಹುಟ್ಟಿನ ಜಾಡು ಹಿಡಿದು ಒಂದು ಸುತ್ತು ಹಾಕೋಣ.
ಕ್ರಿ.ಪೂ. 776ರಲ್ಲೇ ಒಲಿಂಪಿಕ್ಸ್!
ಒಲಿಂಪಿಕ್ಸ್ ಗೇಮ್ಸ್ ಹುಟ್ಟಿನ ಜಾಡು ಹಿಡಿದು ಹೊರಟರೆ ಬಹುಶಃ 3000 ವರ್ಷಗಳ ಹಿಂದಕ್ಕೆ, ಪ್ರಾಚೀನ ಗ್ರೀಕಿನ ಪೆಲೊಪೊನೀಸ್‌ಗೆ ಹೋಗಿ ನಿಲ್ಲುತ್ತೇವೆ ನಾವು. ಏಕೆಂದರೆ ಒಲಿಂಪಿಕ್ಸ್ ಹುಟ್ಟಿದ್ದು ಇಲ್ಲಿ ಎಂದು ಕೆಲವು ದಾಖಲೆಗಳು ಹೇಳುತ್ತವೆ. ಆರಂಭದಲ್ಲಿ ಒಲಿಂಪಿಯಾದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು.ಮುಂದೆ ಇದೇ ಒಲಿಂಪಿಕ್ಸ್ ಗೇಮ್ಸ್ ಆಯಿತು.
ಒಲಿಂಪಿಕ್ಸ್ ಆರಂಭವಾದ ನಿಜವಾದ ದಿನ ಯಾವುದೆಂದು ಗೊತ್ತಾಗದಿದ್ದರೂ ಕ್ರಿಸ್ತಪೂರ್ವ 776ರಲ್ಲಿ ಒಲಿಂಪಿಕ್ಸ್ ಆರಂಭವಾಯಿತೆಂದು ಕೆಲವು ಬರಹದ ಮೂಲಗಳಿಂದ ತಿಳಿದುಕೊಳ್ಳಲಾಗಿದೆ. ಒಲಿಂಪಿಕ್ಸ್‌ನ ಹುಟ್ಟಿಗೆ ಅಸಲಿ ಕಾರಣ ಇಂದಿಗೂ ರಹಸ್ಯವಾಗೇ ಉಳಿದುಕೊಂಡಿದೆ. ಏಕೆಂದರೆ ಒಲಿಂಪಿಕ್ಸ್ ಇತಿಹಾಸ ಪುರಾಣಗಳೊಂದಿಗೆ ಬೆರೆತು ಹೋಗಿದೆ. ಆದರೆ “ಮನರಂಜನೆ’ ಒಲಿಂಪಿಕ್ಸ್ ಹುಟ್ಟಿಗೆ ಒಂದು ಕಾರಣವೆನ್ನಬಹುದು. 4 ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಪ್ರಾಚೀನ ಗೇಮ್ಸ್ ಆವೃತ್ತಿಗಳನ್ನು ಕ್ರಿಸ್ತಶಕ 4ನೇ ಶತಮಾನದವರೆಗೆ ಒಲಿಂಪಿಯಾಡ್ ಎಂದು ಕರೆಯಲಾಗುತ್ತಿತ್ತು. ಬಹಳ ಕಾಲ ಇದೇ ಹೆಸರಿನಲ್ಲಿ ಗೇಮ್ಸ್ ಮುಂದುವರಿದಿತ್ತು. ಬಳಿಕ ಚಕ್ರವರ್ತಿ ಥಿಯೋಡೋಸಿಸ್ ಎಲ್ಲಾ ಹಬ್ಬಗಳ ಸಹಿತ ಒಲಿಂಪಿಕ್ಸ್ ಕೂಡ ನಿಷೇಧಿಸಿದರು.
ಅಥೆನ್ಸ್‌ನಲ್ಲಿ ಆಧುನಿಕ ಗೇಮ್
ಹಾಗೆ ನಿಲುಗಡೆಯಾಗಿದ್ದ ಸಾಂಪ್ರದಾಯಿಕ ಅಥ್ಲೆಟಿಕ್ಸ್ ಕ್ರೀಡಾಕೂಟ 1500 ವರ್ಷಗಳ ಬಳಿಕ ಮತ್ತೆ ಆರಂಭಿಸಲಾಯಿತು. 1894ಲ್ಲಿ ಫ್ರಾನ್ಸ್‌ನ ಪಿಯರೆ ಡಿ ಕ್ಯೂಬರ್ತಿನ್ ಎಂಬವರು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯನ್ನು ಹುಟ್ಟುಹಾಕಿದರು. ಹೀಗಾಗಿ ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಲ್ಲಿ 1896ರಲ್ಲಿ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲಾಯಿತು. ಇದು ಮೊದಲ ಆಧುನಿಕ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ.
10 ಕ್ರೀಡೆಗಳು, 43 ಸ್ಪರ್ಧೆಗಳು
ಮೊದಲ ಒಲಿಂಪಿಕ್ಸ್‌ನಲ್ಲಿ ಟೆನಿಸ್, ಈಜು, ಶೂಟಿಂಗ್, ಮ್ಯಾರಥಾನ್, ಸೈಕ್ಲಿಂಗ್ (ವೈಯಕ್ತಿಕ ರೋಡ್ ರೇಸ್, ಟ್ರ್ಯಾಕ್), ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ಸ್, ವೇಟ್ ಲಿಫ್ಟಿಂಗ್, ಕುಸ್ತಿ, ಫೆನ್ಸಿಂಗ್ ಹೀಗೆ 10 ಕ್ರೀಡೆಗಳಲ್ಲಿ ಒಟ್ಟು 43 ಸ್ಪರ್ಧೆಗಳನ್ನು ನಡೆಸಲಾಗಿತ್ತು.
ಒಲಿಂಪಿಕ್ಸ್‌ಗೆ ಮಹಿಳೆಯರ ಪ್ರವೇಶ
1896ರಲ್ಲಿ ಆಧುನಿಕ ಒಲಿಂಪಿಕ್ಸ್ ಆರಂಭವಾಯಿತಾದರೂ ಆಗ ಮಹಿಳೆಯರು ಸ್ಪರ್ಧಿಸಲು ಅವಕಾಶವಿರಲಿಲ್ಲ. ಆದರೆ 1900ರ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಒಲಿಂಪಿಕ್ಸ್ ಪ್ರವೇಶ ನೀಡಲಾಯಿತು. 5 ಬಾರಿ ವಿಂಬಲ್ಡನ್ ಗೆದ್ದಿರುವ
ಬ್ರಿಟನ್‌ನ ಮಾಜಿ ಟೆನಿಸ್ ತಾರೆ ಶಾರ್ಲೊಟ್ ಕೂಪರ್, ಒಲಿಂಪಿಕ್ಸ್‌ನ ಮೊದಲ ಮಹಿಳಾ ಚಾಂಪಿಯನ್. ಅಂದಿನ ಕೂಟದಲ್ಲಿ ಪಾಲ್ಗೊಂಡಿದ್ದ ಒಟ್ಟು 997 ಅಥ್ಲೀಟ್‌ಗಳಲ್ಲಿ ಕೇವಲ 22 ಮಂದಿ ಮಾತ್ರ ಮಹಿಳೆಯರಿದ್ದರು. 5 ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಿದ್ದರು.
11 ಚಿನ್ನ ಗೆದ್ದಿದ್ದ ಅಮೆರಿಕ
ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ 14 ದೇಶಗಳಿಂದ ಒಟ್ಟಾರೆ 214 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ವಿಶೇಷವೆಂದರೆ ಇವರೆಲ್ಲಾ ಪುರುಷ ಅಥ್ಲೀಟ್‌ಗಳೇ. ಆರಂಭದಲ್ಲಿ ವಿನ್ನರ್‌ಗೆ ಬೆಳ್ಳಿ ಮತ್ತು ರನ್ನರ್‌ಗೆ ತಾಮ್ರದ ಪದಕ ನೀಡಲಾಗುತ್ತಿತ್ತು. ಆದರೆ ಒಲಿಂಪಿಕ್ಸ್ ಸಮಿತಿ, ಅಗ್ರ 3 ಸ್ಥಾನಗಳನ್ನು ಪರಿಗಣಿಸಿ ಪದಕಗಳನ್ನು ಚಿನ್ನ, ಬೆಳ್ಳಿ, ಕಂಚಿಗೆ ಬದಲಾಯಿಸಿತು. ಈ ಕೂಟದಲ್ಲಿ ಪಾಲ್ಗೊಂಡಿದ್ದ 14 ರಾಷ್ಟ್ರಗಳಲ್ಲಿ 10 ರಾಷ್ಟ್ರಗಳು ಪದಕ ಗೆದ್ದಿದ್ದವು. ಇವುಗಳಲ್ಲಿ ಅಮೆರಿಕ ಬರೋಬ್ಬರಿ 11 ಚಿನ್ನ ಗೆದ್ದು ಗರಿಷ್ಠ ಚಿನ್ನದ ಸಾಧನೆ ಮೆರೆದಿತ್ತು. ಇನ್ನುಳಿದಂತೆ 7 ಬೆಳ್ಳಿ, 2 ಕಂಚು ಅಮೆರಿಕ ಪಾಲಾಗಿತ್ತು. ಆದರೆ ಕೂಟದಲ್ಲಿ ಗರಿಷ್ಠ ಪದಕಗಳನ್ನು ಗೆದ್ದಿದ್ದು ಆತಿಥೇಯ ಗ್ರೀಸ್. 10 ಚಿನ್ನ, 18 ಬೆಳ್ಳಿ, 19 ಕಂಚಿನ ಪದಕಗಳು ಸೇರಿ ಅದು ಒಟ್ಟಾರೆ 47 ಪದಕಗಳನ್ನು ಬಾಚಿಕೊಂಡಿತ್ತು.
ಮೊದಲು 14 ದೇಶಗಳು ಭಾಗಿ
1896ರ ಏಪ್ರಿಲ್ 6-15ರ ವರೆಗೆ ನಡೆದಿದ್ದ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೆಲಿಯಾ, ಆಸ್ಟ್ರಿಯಾ, ಬಲ್ಗೇರಿಯಾ, ಚಿಲಿ, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಬ್ರಿಟನ್-ಐರ್ಲೆಂಡ್, ಗ್ರೀಸ್, ಹಂಗೆರಿ, ಇಟಲಿ, ಸ್ವೀಡನ್, ಸ್ವಿಜರ್ಲೆಂಡ್, ಅಮೆರಿಕ ಹೀಗೆ ಒಟ್ಟು 14 ದೇಶಗಳು ಪಾಲ್ಗೊಂಡಿದ್ದವು.
ಆಲಿವ್ ಎಲೆಯ ಕಿರೀಟವೇ ಪ್ರಶಸ್ತಿ
ಈ ದಿನಗಳ ಒಲಿಂಪಿಕ್ಸ್‌ನಂತೆ ಪ್ರಾಚೀನಾ ಒಲಿಂಪಿಕ್ಸ್ ದಿನಗಳಲ್ಲಿ ಚಿನ್ನ ಬೆಳ್ಳಿ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ನೀಡುತ್ತಿರಲಿಲ್ಲ. ಆಗ ಒಬ್ಬರನ್ನಷ್ಟೇ ವಿಜೇತರೆಂದು ಪರಿಗಣಿಸಲಾಗುತ್ತಿತ್ತು. ಗೆದ್ದವರಿಗೆ ಶಾಂತಿಯ ಸಂಕೇತವಾಗಿ ಆಲಿವ್ ಎಲೆಯ ಕಿರೀಟ, ಲಾರೆಲ್ ಮಾಲೆ, ಪೈನ್ ಎಲೆ, ಕಾಡು ಸೆಲರಿ ಕಿರೀಟಗಳನ್ನು ನೀಡುತ್ತಿದ್ದರು.
ಭಾರತ ಮೊದಲು ಪಾಲ್ಗೊಂಡಿದ್ದು 1900ರಲ್ಲಿ
ಮೊದಲ ಆಧುನಿಕ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ಭಾರತ ಪಾಲ್ಗೊಂಡಿರಲಿಲ್ಲ. ಭಾರತ ಮೊದಲು ಪಾಲ್ಗೊಂಡಿದ್ದು 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ. ಅಂದು ನಾರ್ಮನ್ ಪಿಚರ್ಡ್ ಮೊದಲ ಬಾರಿಗೆ ಭಾರತವನ್ನು ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಿದ್ದರು. ಈ ವೇಳೆ 200 ಮೀ. ಓಟದಲ್ಲಿ ಪಿಚರ್ಡ್ ಗೆದ್ದ ಬೆಳ್ಳಿ ಪದಕ, ಭಾರತಕ್ಕೆ ಲಭಿಸಿದ ಚೊಚ್ಚಲ ಒಲಿಂಪಿಕ್ಸ್ ಪದಕವಾಗಿದೆ.
ಪ್ರಾಚೀನ ಒಲಿಂಪಿಕ್ಸ್‌ನ ಸ್ಪರ್ಧೆಗಳು
ಪಂಕ್ರೇಶನ್ (ನಿರಾಯುಧ ಬಾಕ್ಸಿಂಗ್ ರೀತಿಯ ಸ್ಪರ್ಧೆ), ಪೆಂಟಾಥ್ಲಾನ್ (5 ಈವೆಂಟ್‌ಗಳನ್ನೊಳಗೊಂಡ ಸ್ಪರ್ಧೆ), ಕುದುರೆ
ಸವಾರಿ, ಓಟ, ಲಾಂಗ್ ಜಂಪ್, ಶಾಟ್‌ಪುಟ್, ಜಾವೆಲಿನ್, ಲಾಂಗ್‌ಜಂಪ್, ಬಾಕ್ಸಿಂಗ್ ಡಿಸ್ಕಸ್ ಥ್ರೋ, ಕುಸ್ತಿ ಮೊದಲಾದ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು. ಆದರೆ ಆಗಿನ ಸ್ಪರ್ಧೆಗಳು ಕೊಂಚ ಭಿನ್ನವಾಗಿದ್ದವು. ಓಟದ ಸ್ಪರ್ಧೆಗಳು ಬರಿಗಾಲಿನಲ್ಲಿ ನಡೆಯುತ್ತಿದ್ದವು. ಜಿಗಿತದ ವೇಳೆ ಹೆಚ್ಚು ದೂರಕ್ಕೆ ಜಿಗಿಯಲು ಸ್ಪರ್ಧಿಗಳು ಕಲ್ಲುಗಳನ್ನು ಬಳಸುತ್ತಿದ್ದರು ಕಲ್ಲುಗಳನ್ನೇ ಡಿಸ್ಕಸ್ ಥ್ರೋನಲ್ಲಿ ಬಳಸಲಾಗುತ್ತಿತ್ತು.
ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿ ಮೊದಲ ಬಾರಿ ಬೆಳಗಿತು ಆಧುನಿಕ ಒಲಿಂಪಿಕ್ಸ್‌ನ ಜ್ಯೋತಿ
ಒಲಿಂಪಿಕ್ಸ್ ಗೇಮ್ಸ್ ವೇಳೆ ಒಲಿಂಪಿಕ್ಸ್ ಜ್ಯೋತಿ ಬೆಳಗಲಾಗುತ್ತದೆ. ಪ್ರಾಚೀನ ಮತ್ತು ಆಧುನಿಕ ಗೇಮ್‌ಗಳ ನಿರಂತರತೆಯ ಪ್ರತೀಕವಾಗಿ ಹೀಗೆ ಜ್ಯೋತಿ ಬೆಳಗಲಾಗುತ್ತಿದೆ. ಗ್ರೀಸ್ ಸಂಪ್ರದಾಯದಂತೆ ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸುವ ಪ್ಯಾರಾಬೋಲಿಕ್ ಕನ್ನಡಿಯ ಸಹಾಯದಿಂದ ಜ್ಯೋತಿ ಬೆಳಗಲಾಗುತ್ತದೆ. 1928ರಲ್ಲಿ ಆ್ಯಂಮ್ಸ್‌ಟರ್ ಡ್ಯಾಮ್ ಒಲಿಂಪಿಕ್ಸ್ ವೇಳೆ ಅಲ್ಲಿ ಅಥ್ಲೆಟಿಕ್ಸ್ ಈವೆಂಟ್‌ಗಳ ಸ್ಥಳವಾದ ಒಲಿಂಪಿಕ್ಸ್ ಸ್ಟೇಡಿಯಂ ಅನ್ನು ನೋಡುವ ಗೋಪುರದ ಮೇಲೆ ಇದನ್ನು ಮೊದಲ ಬಾರಿ ಬೆಳಗಲಾಯಿತು. 1936ರ ಬರ್ಲಿನ್ ಒಲಿಂಪಿಕ್ಸ್‌ನಿಂದ ಟಾರ್ಚ್ ರಿಲೇ ಆರಂಭಿಸಲಾಯಿತು. ರಿಲೇ ವೇಳೆ ಜ್ಯೋತಿಯನ್ನು ಹಿಡಿದು ಓಡಿಕೊಂಡು ನಗರಕ್ಕೆ ಸಾಗಿಸಲಾಗುತ್ತದೆ.
ಮಾಹಿತಿ: ಸದಾಶಿವ ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.