Reality Shows: ಮಕ್ಕಳ ಬೆಳವಣಿಗೆಯಲ್ಲಿ ರಿಯಾಲಿಟಿ ಶೋಗಳ ಪಾತ್ರ


Team Udayavani, Jul 19, 2024, 4:30 PM IST

15-uv-fusion

ಮಕ್ಕಳ ಬೆಳವಣಿಗೆಯ ಮೇಲೆ ರಿಯಾಲಿಟಿ ಶೋಗಳು ಅನುಕೂಲಕರವಾದ ಪರಿಣಾಮ ಬೀರುವುದಕ್ಕಿಂತ ಅನನುಕೂಲ ಪರಿಣಾಮ ಬೀರುವುದೇ ಹೆಚ್ಚು. ಈ ಶೋಗಳು ಮಕ್ಕಳ ಪ್ರತಿಭೆಯನ್ನು ಅನಾವರಣ ಮಾಡಲು ಉತ್ತಮ ವೇದಿಕೆ ಒದಗಿಸಿವೆ.ಆದರೆ ಅವಲೋಕಿಸಿದರೆ ಮಕ್ಕಳ ಮೇಲೆ ಇದರ ಸಾಧಕಗಳಿಗಿಂತ ಬಾಧಕಗಳೇ ಹೆಚ್ಚು.

ಹದಿನಾಲ್ಕು ವರ್ಷದ ಒಳಗಿನ ಮಕ್ಕಳು, ದೈಹಿಕ ಸ್ವರೂಪದಲ್ಲಿ ಅಥವಾ ಮಾನಸಿಕ ಸ್ವರೂಪ ದಲ್ಲಿ ದುಡಿದರೆ ಅದು ಬಾಲಾಪರಾಧವೇ ಸರಿ. ಅದೇ ರೀತಿ ಪ್ರತಿಭೆಯ ಹೆಸರಿನಲ್ಲಿ ಮಕ್ಕಳಿಗೆ ಮಾನಸಿಕವಾಗಿ ಒತ್ತಡ ಹಾಕುವುದು ಸರಿಯಲ್ಲ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಆಟವಾಡಿಸುತ್ತಾ ಪಾಠವನ್ನು ಕಲಿಸಬೇಕು, ಅದನ್ನು ಬಿಟ್ಟು ಪ್ರತಿಭೆ ಅನಾವರಣ ಹೆಸರಿನಲ್ಲಿ ಚಿಕ್ಕ ವಯಸ್ಸಿನಿಂದಲೇ ಹಲವು ತರಗತಿಗಳಿಗೆ ಸೇರಿಸಿ ಅವರ ಬಾಲ್ಯವನ್ನು ಕಸಿದುಕೊಳ್ಳುವುದು ಸರಿಯಲ್ಲ.

ಮಕ್ಕಳ ಪ್ರತಿಭೆಯನ್ನು ಪರಿಚಯಸುತ್ತೇವೆ ಎಂದು ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಬಹುತೇಕ ವಾಹಿನಿಗಳಲ್ಲಿ ಪ್ರತ್ಯೇಕವಾಗಿ ಮಕ್ಕಳಿಗಾಗಿಯೇ ರಿಯಾಲಿಟಿ ಶೋಗಳನ್ನು ಆಯೋಜಿಸುತ್ತಿದೆ. ಈ ರೀತಿ ರಿಯಾಲಿಟಿ ಶೋಗಳ ನಟನೆಯಲ್ಲಿ ತೊಡಗಿಕೊಳ್ಳುವ ಮಕ್ಕಳಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಒತ್ತಡ ಹೆಚ್ಚಿರುತ್ತದೆ. ಇದು ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.

ಈ ವಯಸ್ಸಿನಲ್ಲಿ ಮಕ್ಕಳು ಸೋಲು – ಗೆಲುವನ್ನು ಒಂದೇ ರೀತಿಯಲ್ಲಿ ಸ್ವೀಕರಿಸುವಷ್ಟು ಪ್ರಭುದ್ಧರಾಗಿರುವುದಿಲ್ಲ. ಆಯ್ಕೆ ಆಗದ ಮಗುವಿಗೆ ಹತಾಶೆ ಕಾಡುತ್ತದೆ. ಕೆಲವು ಬಾರಿ ಬಹುಮಾನದ ಆಸೆಗೆ ಪೋಷಕರೇ ನೀನು ಗೆಲ್ಲಲೇ ಬೇಕು ಎಂದು ಒತ್ತಡ ಹಾಕುತ್ತಾರೆ. ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಹಣ, ಪ್ರಚಾರದ ಮೋಹಕ್ಕೆ ಸಿಕ್ಕಿಬಿಡುತ್ತಿವೆ. ಒಂದು ರೀತಿಯ ಅವರಲ್ಲಿ ಐಡೆಂಟಿಟಿ ಕ್ರೆ„ಸಿಸ್‌ ಶುರುವಾಗುತ್ತದೆ.

ಹಾಸ್ಯವೆಂದು ಕೆಲವೊಂದು ಶೋಗಳಲ್ಲಿ ಮಕ್ಕಳ ಬಳಿ ವಯಸ್ಸಿಗೆ ಮೀರಿದ ಮಾತುಗಳನ್ನು ಆಡಿಸಲಾಗುತ್ತದೆ. ಇದನ್ನು ನೋಡಿದ ಇತರ ಮಕ್ಕಳು ಅದನ್ನೇ ಕಲಿಯುತ್ತವೆ. ಅವುಗಳ ಆಟ ಪಾಠ ನೋಟ ಎಲ್ಲದರ ಮೇಲೆ ಇದರ ಪರಿಣಾಮ ಬೀರುತ್ತದೆ. ವಾಹಿನಿಗಳಲ್ಲಿ ತಮಾಷೆಗೆ ಎಂದು ಮಕ್ಕಳ ಪೋಷಕರನ್ನು ಅಪಹಸ್ಯ ಮಾಡಿದರೆ, ಈ ಮಕ್ಕಳು ತಮ್ಮ ಪೋಷಕರಿಗೆ ಗೌರವವನ್ನು ನೀಡುವುದಿಲ್ಲ.

ಮಕ್ಕಳು ಹೆತ್ತವರ ವಿರುದ್ಧ ಮಾತನಾಡುವುದೇ ಹಾಸ್ಯವೆಂದು ತಿಳಿದುಬಿಡುತ್ತಾರೆ. ನಿರೂಪಕರು ಮಕ್ಕಳೊಂದಿಗೆ ಅವರ ತಂದೆ ತಾಯಿಯ ನಡುವಿನ ತೀರಾ ವೈಯುಕ್ತಿಕ ಪ್ರಶ್ನೆಗಳನ್ನು, ಅಸಂಬದ್ಧ ಪ್ರಶ್ನೆಗಳನ್ನು ತಮ್ಮ ವಾಹಿನಿಯ ಟಿಆರ್‌ಪಿ ಗಳಿಸುವ ದೃಷ್ಟಿಯಿಂದ ಕೇಳುವುದು ಮಗುವಿನ ಯೋಚನಾ ಲಹರಿಯ ದಿಕ್ಕನ್ನು ತಪ್ಪಿಸಿದ ಹಾಗಾಗುತ್ತದೆ. ಮಕ್ಕಳನ್ನು ಮಕ್ಕಳ ಹಾಗೆಯೇ ಇರಲು ಬಿಡಬೇಕು. ಅದನ್ನು ತಮ್ಮ ವಾಹಿನಿಯ ಅಭಿಲಾಷೆಗೆ ತಿದ್ದುವುದು ಹಣದಾಸೆಗೆ ಬಳಸಿಕೊಳ್ಳುವುದು ಸಲ್ಲದು.

ಜಗತ್ತಿನಲ್ಲಿರುವ ಪ್ರತಿಯೊಂದು ಮಗುವಿಗೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ಪ್ರತಿಭೆ ನೈಜವಾಗಿದ್ದರೆ ಅದು ತನ್ನಿಂದ ತಾನೇ ಹೊರಬರುತ್ತದೆ. ಶಾಲಾ ಮಟ್ಟದಲ್ಲಿ ಹಲವಾರು ಸಾಂಸ್ಕೃತಿಕ ಸ್ಪರ್ಧೆ, ಪ್ರತಿಭಾ ಕಾರಂಜಿ ನಡೆಯುತ್ತವೆ. ಆದರೆ ಆ ಪ್ರತಿಭೆಯನ್ನು ಮುಂದಿಟ್ಟುಕೊಂಡು ಮನೋರಂಜನೆಯ ಹೆಸರಿನಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ತರವಲ್ಲ. ಮಕ್ಕಳು ಬೆಳೆಯುತ್ತಾ ಹೋದಂತೆ ಅವರನ್ನು ಗುರುತಿಸುವುದು ಕಡಿಮೆಯಾಗುತ್ತದೆ. ಅವಕಾಶಗಳು ಕ್ಷೀಣಿಸುತ್ತದೆ.  ಅವಕಾಶ ಸಿಗದೆ ಖನ್ನತೆಗೆ ಒಳಗಾಗುವುದೂ ಇದೆ. ಬಾಲ ಕಲಾವಿದರಾಗಿ ಮೆರೆದ ಅದೆಷ್ಟೋ ಮಕ್ಕಳು ತಮ್ಮ ವಯಸ್ಸಿಗೆ ಬಂದಾಗ ಹಾಗೂ ಜೀವನದಲ್ಲಿ ಏನೂ ಆಗದೆ ಹತಾಶರಾದ

ಹಲವು ಕಥೆಗಳು ನಮಗೆ ಸಿಗುತ್ತವೆ. ಹೀಗೆ ವಾಹಿನಿಗಳು ಪ್ರತಿಭೆಯನ್ನು ಬಳಸಿಕೊಂಡು ಮಕ್ಕಳ ಬಾಲ್ಯವನ್ನು ಮುಗ್ಧತೆ ಯನ್ನು ಹಾಳು ಮಾಡುವಂತಹ ಕೆಲಸಗಳಿಗೆ ಕೈ ಹಾಕ ಬಾರದು. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿ ಸೋಣ ಅದನ್ನು ವ್ಯಾಪಾರಿಕರಣ ಗೊಳಿಸುವುದು ಸರಿಯಲ್ಲ.

ಚೇತನ ಭಾರ್ಗವ

ಬೆಂಗಳೂರು

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.