Rabkavi Banhatti ನವಜಾತ ಶಿಶುವಿಗೆ 12 ಕಾಲ್ಬೆರಳು, 13 ಕೈ ಬೆರಳುಗಳು..!
ಅತ್ಯಂತ ಅಸಾಮಾನ್ಯ ಪ್ರಕರಣ ಇದಾಗಿದೆ
Team Udayavani, Jul 19, 2024, 10:01 PM IST
ರಬಕವಿ-ಬನಹಟ್ಟಿ: 12 ಕಾಲ್ಬೆರಳುಗಳು ಮತ್ತು 13 ಕೈ ಬೆರಳುಗಳ ನವಜಾತ ಶಿಶುವೊಂದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಸನ್ಶೈನ್ ಮಲ್ಪಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಜನಿಸಿದೆ.
ಮಗುವಿಗೆ ಬಲಗೈಗೆ 6, ಎಡಗೈಗೆ 7 ಮತ್ತು ಪ್ರತಿ ಕಾಲಿನಲ್ಲಿ 6 ಬೆರಳುಗಳಿವೆ. ತಾಯಿ ಭಾರತಿ ಮತ್ತು ಮಗು ಆರೋಗ್ಯವಾಗಿದ್ದಾರೆ. ನನ್ನ ಪತ್ನಿ ಪ್ರತಿ ವಾರ ಬೀಳಗಿ ತಾಲೂಕಿನ ಕುಂದರಗಿಯ ಭುವನೇಶ್ವರಿ ದೇವಿಗೆ ತೆರಳಿ ಮಕ್ಕಳಾಗುವಂತೆ ಬೇಡಿಕೊಂಡಿದ್ದಳು. ದೇವಿಯ ಕೃಪಾಶೀರ್ವಾದದಿಂದ ನಮಗೆ ಗಂಡು ಮಗು ಜನಿಸಿದೆ ಎಂದು ತಂದೆ ಗುರಪ್ಪ ಕೊಣ್ಣೂರ ಸಂತಸ ವ್ಯಕ್ತಪಡಿಸಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ಪ್ರಸೂತಿ ತಜ್ಞೆ ಡಾ|ಪಾರ್ವತಿ ಹಿರೇಮಠ ಮಾತನಾಡಿ, ಕ್ರೋಮೋಸೋಮ್ಗಳಿಂದ ಇಂತಹ ಮಗುವಿನ ಜನನವಾಗುತ್ತದೆ. 25 ಬೆರಳು ಹೊಂದಿದ ಗಂಡು ಮಗುವಿನೊಂದಿಗೆ ತಾಯಿಯೂ ಕ್ಷೇಮವಾಗಿದ್ದಾಳೆಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.