Microsoft ತಾಂತ್ರಿಕ ಸಮಸ್ಯೆ: ಸಾಫ್ಟ್ ವೇರ್ ಅಪ್‌ಡೇಟ್ ಮಾಡಲು ಕೇಂದ್ರ ಸಲಹೆ
Team Udayavani, Jul 20, 2024, 6:55 AM IST
ಹೊಸದಿಲ್ಲಿ: ಮೈಕ್ರೋಸಾಫ್ಟ್ ನ ತಾಂತ್ರಿಕ ಸಮಸ್ಯೆ ಬೆನ್ನಲ್ಲೇ ಭಾರತದ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಮ್(ಸಿಇಆರ್‌ಟಿ) ಮಾರ್ಗಸೂಚಿ ಬಿಡುಗಡೆ ಮಾಡಿದೆ. ಫಾಲ್ಕನ್ ಸೆನ್ಸಾರ್‌ನ ವಿಂಡೋಸ್ ಸಿಸ್ಟಂ ಗಳಿಗೆ ಅಪ್‌ಡೇಟ್ ಪರಿಚಯಿಸಿದ್ದರಿಂದ ಸಮಸ್ಯೆ ಸೃಷ್ಟಿ ಯಾಗಿದೆ. ಹಾಗಾಗಿ, ಕ್ರೌಡ್ ಸ್ಟ್ರೈಕ್ ಪೋರ್ಟಲ್‌ಗೆ ಹೋಗಿ, ಹೊಸ ಅಪ್‌ಡೇಟ್ ಡೌನ್‌ಲೋಡ್ ಮಾಡ ಬೇಕು. ಸಿಸ್ಟಂ ಸಮಸ್ಯೆ ಮುಂದುವರಿದಿದ್ದಲ್ಲಿ ಈ ಕೆಳಗಿನ ಕ್ರಮಗಳಿಂದ ಬಗೆಹರಿಸಬಹುದು ಎಂದಿದೆ.
1. ವಿಂಡೋಸ್ ಅನ್ನು ಸೇಫ್ ಮೋಡ್‌ನಲ್ಲಿ ಅಥವಾ ವಿಂಡೋಸ್ ರಿಕವರಿ ಎನ್ವಿರಾನ್‌ಮೆಂಟ್‌ನನಲ್ಲಿ ಬೂಟ್ ಮಾಡಿ
2. C:\Windowsystem32\drivers\CrowdStrike directory ಗೆ ಭೇಟಿ ನೀಡಿ
3. C-00000291*.sys. ಫೈಲ್ ಡಿಲೀಟ್ ಮಾಡಿ
4. ಮಾಮೂಲಿಯಂತೆ ಸಿಸ್ಟಂ ಅನ್ನು ಒಮ್ಮೆ ರೀಬೂಟ್ ಮಾಡಿದರೆ ಸಾಕು.
ಮೈಕ್ರೋಸಾಫ್ಟ್ ಗೆ 1.90 ಲಕ್ಷ ಕೋಟಿ ರೂ. ನಷ್ಟ
ಟೈಕ್ ದೈತ್ಯ ಮೈಕ್ರೋಸಾಫ್ಟ್ ಕಂಪನಿ ಭಾರೀ ನಷ್ಟವಾಗಿದೆ. ಮೈಕ್ರೋಸಾಫ್ಟ್ ತಾಂತ್ರಿಕ ತೊಂದರೆಯು ವಿವಿಧ ವಲಯಗಳ ವ್ಯವಹಾರ ಮೇಲೆ ಪ್ರತಿಕೂಲ ಪರಿಣಾಮ ಬೀರು ತ್ತಿದ್ದಂತೆ ಷೇರುಪೇಟೆಯಲ್ಲಿ ಮೈಕ್ರೋ ಸಾಫ್ಟ್ ಷೇರುಗಳೂ ಕುಸಿತ ಕಂಡವು. ಪರಿಣಾಮ 23 ಬಿಲಿಯನ್ ಡಾಲರ್(ಅಂದಾಜು 1.90 ಲಕ್ಷ ಕೋಟಿ ರೂ.) ನಷ್ಟವಾಗಿದೆ. ಷೇರುಪೇಟೆ ಆರಂಭ ವಾಗುತ್ತಿದ್ದಂತೆ ಮೈಕ್ರೋಸಾಫ್ಟ್ ನ ಷೇರು ಗಳ ಮೌಲ್ಯ 37,087 ರೂ.ನಿಂದ(443 ಡಾಲರ್) 36,836 ರೂ.ಗೆ (440 ಡಾಲರ್) ಇಳಿಕೆಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.