Release of funds; ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ, ಮನೆ: ಸಚಿವ ಕೃಷ್ಣ ಬೈರೇಗೌಡ
Team Udayavani, Jul 20, 2024, 7:30 AM IST
ಬೆಂಗಳೂರು: ಅತಿವೃಷ್ಟಿಯಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳನ್ನು ಸರಕಾರದಿಂದಲೇ ಮಂಜೂರು ಮಾಡಲು ನಿರ್ಧರಿಸಿದ್ದು ರಸ್ತೆ, ಶಾಲಾ ಕಟ್ಟಡ, ಅಂಗನವಾಡಿಗಳ ದುರಸ್ತಿಗೆ ಸೋಮವಾರದೊಳಗೆ ಹಣ ಬಿಡುಗಡೆ ಮಾಡಲು ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಭರವಸೆ ನೀಡಿದರು.
ವಿಪಕ್ಷಗಳ ಧರಣಿ ನಡುವೆಯೇ ಅತಿವೃಷ್ಟಿ ಕುರಿತು ಕಾಂಗ್ರೆಸ್‌ನ ಎ.ಎಸ್. ಬೋಪಣ್ಣ ಸಲ್ಲಿಸಿದ್ದ ಪ್ರಸ್ತಾವನೆ ಮೇಲೆ ಆಡಳಿತ ಪಕ್ಷದ ಸದಸ್ಯರು ಬೆಳಕು ಚೆಲ್ಲಿದರು. ಬಳಿಕ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಸಂಪೂರ್ಣ ಹಾನಿಯಾದ ಮನೆಗೆ ಪರಿಹಾರ ಕೊಡುವುದಷ್ಟೇ ಅಲ್ಲದೆ ಸರಕಾರದಿಂದಲೇ ಮನೆ ಮಂಜೂರು ಮಾಡಿಕೊಡಲು ನಿರ್ಧರಿಸಿದ್ದೇವೆ ಎಂದರು.
ಕಳೆದ ವರ್ಷ ಭೀಕರ ಬರಗಾಲವಿತ್ತು. ಈ ಬಾರಿ ಒಳ್ಳೆಯ ಮಳೆ ಬರುತ್ತಿದೆ. ವಾಡಿಕೆಗಿಂತ ಹೆಚ್ಚು ಮಳೆ ಬರುತ್ತದೆ ಎಂಬ ಮಾಹಿತಿ ಜನವರಿಯಲ್ಲಿತ್ತು. ಹೀಗಾಗಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಆದರೂ ಕೆಲವೆಡೆ ಭೂಕುಸಿತ ಸೇರಿ ಮತ್ತಿತರ ತೊಂದರೆ ಆಗಿದೆ. ಅವರ ಬಗ್ಗೆ ಸಹಾನುಭೂತಿ ಇದೆ. ಒಟ್ಟಾರೆ 2,450 ಮನೆಗಳು ಹಾನಿಯಾಗಿದ್ದು ಈ ಪೈಕಿ ಕೆಲವು ಭಾಗಶಃ ಹಾನಿಗೊಳಗಾಗಿದ್ದು ಕೆಲವು ಸಂಪೂರ್ಣ ನಾಶವಾಗಿವೆ. ಅಂತಹ ಮನೆಗಳಿಗೆ ಪರಿಹಾರದ ಜತೆಗೆ ಸರಕಾರದಿಂದಲೇ ಮನೆ ಮಂಜೂರಾತಿಯನ್ನೂ ನೀಡಲಾಗುತ್ತದೆ ಎಂದರು.
ಅಂಕೋಲಾ ಹೆದ್ದಾರಿ ಕುಸಿತಕ್ಕೆ ಅವೈಜ್ಞಾನಿಕ ವಿನ್ಯಾಸ ಕಾರಣ
ಅಂಕೋಲಾ-ಶಿರೂರು ಸಮೀಪ ಹೆದ್ದಾರಿ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ವಿನ್ಯಾಸವೇ ಕಾರಣ ಎಂಬ ವರದಿ ಇದೆ. ಹೆದ್ದಾರಿ ನಿರ್ಮಾಣಕ್ಕೆ ಅಡ್ಡಲಾಗಿದ್ದ ಗುಡ್ಡವನ್ನು ಹಂತ-ಹಂತವಾಗಿ ಇಳಿಜಾರಿನಂತೆ ಮಾಡುವ ಬದಲು ಕಡಿದಾಗಿ 90 ಡಿಗ್ರಿ ಕೋನದಲ್ಲಿ ಕತ್ತರಿಸಿದ್ದಾರೆ. ಇದರಿಂದ ಕುಸಿತ ಉಂಟಾಗಿದೆ ಎಂದರು.
ಕಡಲ್ಕೊರೆತ ತಡೆಗೆ ವಿಶೇಷ ಯೋಜನೆ’
ನಾಪೋಕ್ಲು-ಮೂರ್ನಾಡು, ಮಡಿಕೇರಿ-ಕಗ್ಗೊàಡ್ಲು ಸೇರಿ ಹಲವೆಡೆ ಮಣ್ಣು ಕುಸಿದಿದ್ದು ಕಳಸ-ಹೊರನಾಡು ದಾರಿ ಬಂದ್ ಆಗಿದೆ. ಸಕಲೇಶಪುರ, ಮಡಿಕೇರಿಯ ಕೆಲವೆಡೆ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಕಡಲ್ಕೊರೆತ ತಡೆಗೆ ಮೀನುಗಾರಿಕಾ ಸಚಿವರಿಂದ ವಿಶೇಷ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಸಚಿವರು ಹೇಳಿದರು.
722 ಹೆಕ್ಟೇರ್ ಬೆಳೆ ನಷ್ಟ: ಕೃಷ್ಣಬೈರೇಗೌಡ
ನೇತ್ರಾವತಿ, ಫಲ್ಗುಣಿ, ಕುಮಾರಾಧಾರಾ ನದಿಗಳು ಪ್ರವಾಹ ಸ್ಥಿತಿಯಲ್ಲಿವೆ. ಅತಿವೃಷ್ಟಿಯಿಂದ 371 ಹೆಕ್ಟೇರ್ ಕೃಷಿ ಮತ್ತು 351 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿ ಆಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಬಹುದು. ತತ್‌ಕ್ಷಣ ಪರಿಹಾರ ಕೊಡಲು ಸೂಚಿಸಿದ್ದು, ಪೋರ್ಟಲ್ ಕೂಡ ತೆರೆಯುತ್ತೇವೆ ಎಂದು ಕೃಷ್ಣಬೈರೇಗೌಡ ಹೇಳಿದರು.
“ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಮಳೆ ಬರುತ್ತಿದೆ. ಅಂದಿನಿಂದ ಸರಕಾರ ಏನು ಮಾಡುತ್ತಿದೆ. ಯಾವ ಮಂತ್ರಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ? ಎಷ್ಟು ಸಭೆ ಮಾಡಿದ್ದಾರೆ? ಎಷ್ಟು ಪರಿಹಾರ ಕೊಟ್ಟಿದ್ದಾರೆ. ಈ ಸರಕಾರದಿಂದ ಏನೂ ಆಗುತ್ತಿಲ್ಲ.” -ಆರ್.ಅಶೋಕ್, ವಿಪಕ್ಷ ನಾಯಕ
“ಪೂರ್ಣ ಮನೆ ಹಾಳಾಗಿದ್ದಕ್ಕೆ 1.25 ಲಕ್ಷ ರೂ. ಪರಿಹಾರ ಕೊಡಲಾಗುತ್ತಿದೆ. ಇದನ್ನು ಕನಿಷ್ಠ 5 ಲಕ್ಷ ರೂ.ಗೆ ಏರಿಸಬೇಕು. ಅಡಿಕೆ ಬೆಳೆಗಾರರಿಗೆ ಹೊರೆಯಾಗಿರುವ ಮೈಲುತುತ್ತವನ್ನು ಸರಕಾರ ಉಚಿತವಾಗಿ ಕೊಡಬೇಕು. ಕಡಲಬದಿಯ ಮನೆಯಲ್ಲಿರುವವರಿಗೆ ಪುನರ್ವಸತಿ ಕಲ್ಪಿಸಿ, ಕಡಲಕೊರೆತದಿಂದ ರಕ್ಷಣೆ ನೀಡಿ.”-ಅಶೋಕ್ ರೈ, ಪುತ್ತೂರು ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.