flights ಸಹಿತ ಹಲವು ಸೇವೆಗಳಲ್ಲಿ ವ್ಯತ್ಯಯ; ಕರಾವಳಿಯಲ್ಲೂ ಸಾಫ್ಟ್‌ವೇರ್ ದೋಷ ಪರಿಣಾಮ
Team Udayavani, Jul 20, 2024, 1:18 AM IST
ಮಂಗಳೂರು/ಉಡುಪಿ: ಮೈಕ್ರೋಸಾಫ್ಟ್‌ನಲ್ಲಿ ಉಂಟಾಗಿರುವ ದೋಷದಿಂದಾಗಿ ಕರಾವಳಿಯಲ್ಲೂ ವಿಮಾನ, ಬ್ಯಾಂಕಿಂಗ್, ಕಾಲ್‌ಸೆಂಟರ್ ಸೇವೆಗಳಲ್ಲಿ ವ್ಯತ್ಯಯವಾಗಿದೆ.
ಕ್ಲೌಡ್ ಆಧರಿತ ಸೇವೆಗಳನ್ನು ಅವಲಂಬಿಸಿರುವವರಿಗೆ ಮಾತ್ರವೇ ಈ ಸಮಸ್ಯೆಯಾಗಿದ್ದು, ಉಳಿದಂತೆ ಇತರೆಲ್ಲ ಸೇವೆಗಳು ಎಂದಿನಂತೆ ಇದ್ದವು. ನಗರದಲ್ಲಿರುವ ಕೆಲವು ಕಾಲ್‌ಸೆಂಟರ್‌ಗಳು ಕ್ಲೌಡ್ ಸೇವೆಯನ್ನು ಬಳಸುತ್ತಿದ್ದು, ಅವರಿಗೆ ದಿನವಿಡೀ ಕಾರ್ಯನಿರ್ವಹಿಸಲು ಆಗಲಿಲ್ಲ. ಕೆಲವು ಬ್ಯಾಂಕ್‌ಗಳ ಆನ್‌ಲೈನ್ ಸೇವೆಗಳು ಸ್ವಲ್ಪ ಕಾಲ ಸ್ಥಗಿತಗೊಂಡಿ ದ್ದವು. ಕೆಲವು ಸ್ಟಾಕ್‌ಬ್ರೋಕಿಂಗ್ ಆ್ಯಪ್‌ಗ್ಳೂ ಸಮಸ್ಯೆಗೊಳಗಾದವು.
ಮಂಗಳೂರು: 3 ವಿಮಾನ ರದ್ದು
ಮಂಗಳೂರು ವಿಮಾನ ನಿಲ್ದಾಣದ ಮೂರು ದೇಶೀಯ ವಿಮಾನ ಹಾರಾಟಗಳು ರದ್ದುಗೊಂಡಿವೆ. ಮೂರು ಅಂತಾರಾಷ್ಟ್ರೀಯ ವಿಮಾನ ಹಾರಾಟ ವಿಳಂಬಗೊಂಡಿದ್ದು, ಮಂಗಳೂರು ನಿಲ್ದಾಣಕ್ಕೆ ಕೆಲವು ತಾಸುಗಳಷ್ಟು ತಡವಾಗಿ ಆಗಮಿಸಿವೆ. ಏರ್ ಇಂಡಿಗೋದ 3 ಬೆಂಗಳೂರು, ದಿಲ್ಲಿ ಹಾಗೂ ಹೈದರಾಬಾದ್ ದೇಶೀಯ ವಿಮಾನ ಹಾರಾಟಗಳು ರದ್ದುಗೊಂಡಿವೆ.
ಹಲವು ವಿಮಾನ ಕಂಪೆನಿಗಳ ಸರ್ವರ್‌ಗಳು ಮೈಕ್ರೋಸಾಫ್ಟ್ ಆಧಾರಿತವಾದ್ದರಿಂದ ಅಂತಾರಾ ಷ್ಟ್ರೀಯ ವಾಗಿಯೇ ಎಲ್ಲ ಕಡೆಗಳಲ್ಲೂ ಚೆಕ್-ಇನ್, ಬೋರ್ಡಿಂಗ್ ಪಾಸ್ ನೀಡಿಕೆ ಇತ್ಯಾದಿಗಳಲ್ಲಿ ತೊಂದರೆ ಉಂಟಾಗಿದೆ. ಕೆಲವೆಡೆ ಮ್ಯಾನ್ಯುವಲ್ ಆಗಿ ಬೋರ್ಡಿಂಗ್ ಪಾಸ್ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಉಡುಪಿಯಲ್ಲೂ ವಿವಿಧ ಕ್ಷೇತ್ರ ಗಳಲ್ಲಿ ದುಡಿಯುವವರಿಗೆ ಈ ಸಮಸ್ಯೆ ಅನುಭವಕ್ಕೆ ಬಂದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.