ಪ್ರವಾಸ ಕಥನ 5:ಪರೀಕ To ಅಬುಧಾಬಿ ಪಯಣ….ಸಂಸ್ಕೃತಿಯ ರಾಯಭಾರಿ ಸರ್ವೋತ್ತಮ ಶೆಟ್ಟಿ ಯಶೋಗಾಥೆ


Team Udayavani, Jul 20, 2024, 6:00 PM IST

ಪ್ರವಾಸ ಕಥನ 5:ಕನ್ನಡ ತುಳು, ನಾಡು-ನುಡಿ ಸಂಸ್ಕೃತಿಯ ರಾಯಭಾರಿ ಸರ್ವೋತ್ತಮ ಶೆಟ್ಟಿ

ಉಡುಪಿ ಮಣಿಪಾಲ ಹತ್ತಿರ ಪುಟ್ಟದೊಂದು ಊರು ಅದುವೇ ಪರೀಕ. ಇಲ್ಲಿನ ಚೆನ್ನಿಬೆಟ್ಟು ಕೃಷಿ ಕುಟುಂಬದ ದಿ. ಮಟ್ಟಾರು ಸೂರಪ್ಪ ಹೆಗ್ಡೆ ಮತ್ತು ಶ್ರೀಮತಿ ಸರಸ್ವತಿ ಸೂರಪ್ಪ ಹೆಗ್ಡೆ ದಂಪತಿಯ ಹಿರಿಯ ಪುತ್ರನಾಗಿ ಹುಟ್ಟಿದ ಸರ್ವೋತ್ತಮ ಶೆಟ್ಟಿಯವರು ಇಂದು ಯುನೈಟೆಡ್ ಅರಬಿಕ್ ಎಮಿರೇಟ್ಸ್ ರಾಷ್ಟ್ರದಲ್ಲಿ ಕನಾ೯ಟಕ ಸಂಘ; ಬಂಟರ ಸಂಘದ ಅಧ್ಯಕ್ಷರಾಗಿ ತುಳು ಕೂಟದ ಪ್ರಧಾನ ಸಂಯೇೂಜಕರಾಗಿ ಮಾಡಿದ ವಿಶೇಷ ಸಾಧನೆಯ ಫಲವಾಗಿ ಸರ್ವ ರಿಂದಲೂ ಗೌರವ ಮನ್ನಣೆಗೆ ಪಾತ್ರರಾಗಿದ್ದು ಮಾತ್ರವಲ್ಲ ಅವರ ಹೆಸರಿಗೆ ಅನ್ವರ್ಥವೆಂಬಂತೆ “ಸವ೯ರಿಂದಲೂ ಉತ್ತಮ”ರೆನ್ನಿಸಿಕೊಂಡು ನಿಜವಾದ ಅಥ೯ದಲ್ಲಿ “ಸರ್ವೋತ್ತಮ” ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇಂತಹ ಸವ೯ಗುಣ ಸಂಪನ್ನ ಮಾನವೀಯ ಸ್ನೇಹ ಹೃದಯದ ಸಾಧಕ ಪ್ರತಿಭೆಯನ್ನು ನಮ್ಮೂರಿಗೂ ಪರಿಚಯಿಸ ಬೇಕು ಅರಬಿಕ್ ಎಮಿರೇಟ್ಸ್ ನೆಲದ ಕನ್ನಡ ತುಳು ಪ್ರೀತಿಯ ಮನಸ್ಸುಗಳಿಗೂ ಮತ್ತೊಮ್ಮೆ ಪರಿಚಯಿಸಬೇಕು ತನ್ಮೂಲಕ ನಮ್ಮ ನಾಡಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು ಅನ್ನುವ ಉದ್ದೇಶದಿಂದಲೇ ಹೊರನಾಡಿನ ವಿಶೇಷ ಸಾಧಕ ಪುರುಷ ಸರ್ವೋ ತ್ತಮ ಶೆಟ್ಟಿಯವರ ಜೊತೆ ಸುಮಾರು ಒಂದು ಗಂಟೆಗಳ ಹೊತ್ತು ಮಾತನಾಡುವ ಸದಾವಕಾಶ ನನ್ನ ಪ್ರವಾಸದ ಕಾಲದಲ್ಲಿ ಅಬುಧಾಬಿಯ ಅತ್ಯಂತ ಹಳೆಯ ಪ್ರಸಿದ್ಧ ಪ್ಯಾಲೇಸ್ ಎಲಿನ್ ಹೇೂಟೆಲ್ ನಲ್ಲಿ ಕೂಡಿ ಬಂತು.

ಈ ಮಾತುಕತೆಯ ಸಂದರ್ಭದಲ್ಲಿ ಅವರು ಪರೀಕಾದಿಂದ ಅಬುಧಾಬಿಗೆ ಸಾಗಿ ಬಂದ ತಮ್ಮ ಬದುಕಿನ ಸುಖ ಕಷ್ಟಗಳ ಸಾಧನೆಯ ಪುಟಗಳನ್ನು ನನ್ನ ಮುಂದೆ ತೆರೆದು ಬಿಟ್ಟರು. ಅವರ ಬದುಕಿನ ಯಶೇೂಗಾಥೆ ನಿಜಕ್ಕೂ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಬಲ್ಲದು ಅನ್ನುವ ಕಾರಣಕ್ಕಾಗಿಯೇ ಪ್ರವಾಸದ ಅನುಭವದ ಲೇಖನದ ರೂಪದಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. .

ಪರೀಕ ಎಂಬ ಸಣ್ಣ ಊರಿನಲ್ಲಿ ಹುಟ್ಟಿ ಹತ್ತಿರದ ಪೆಡೂ೯ರು ಮತ್ತು ಹಿರಿಯಡಕದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಪಿಯುಸಿ. ಶಿಕ್ಷಣ ಮುಗಿಸಿ ಮುಂದಿನ ಬದುಕಿನ ದಾರಿಗಾಗಿ ಸುಮಾರು ಐದೂವರೆ ದಶಕಗಳ ಹಿಂದೆ ಮುಂಬೈಯತ್ತ ಮುಖ ಮಾಡಿದ ಸರ್ವೋತ್ತಮ ಶೆಟ್ಟಿಯವರು ಉನ್ನತ ಶಿಕ್ಷಣ ಪಡೆಯ ಬೇಕೆಂಬ ತುಡಿತ ಅವರಲ್ಲಿದ್ದ ಕಾರಣ ಹಗಲಿನಲ್ಲಿ ಹೇೂಟೆಲ್ ಕೆಲಸ ರಾತ್ರಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ” Earn & Learn” ಅನ್ನುವ ಬದುಕುವ ದಾರಿಯನ್ನು ಮೈಗೂಡಿಸಿಕೊಂಡು ಅಲ್ಲಿನ ಪ್ರತಿಷ್ಠಿತ R.A.Podar Commerce & Economics ಕಾಲೇಜಿನಿಂದ ಬಿ.ಕಾಂ. ಪದವಿಗಳಿಸಿಕೊಂಡರು. ಅವರು ತಮ್ಮ ವಿದ್ಯಾರ್ಥಿ ದಿಸೆಯಲ್ಲಿ ಕೂಡಾ ನಾಯಕತ್ವದ ಗುಣವನ್ನು ಬೆಳೆಸಿಕೊಂಡಿದ್ದರು ಅನ್ನುವುದಕ್ಕೆ ಸಾಕ್ಷಿ ಅನ್ನುವಂತೆ ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಸೆನೆಟ್ ಸದಸ್ಯರಾಗಿ ತಮ್ಮ ನಾಯಕತ್ವದ ಛಾಪನ್ನು ಒತ್ತಿದವರು.
.
ಉತ್ತಮ ವಾಗ್ಮಿ ನಟ; ಕ್ರೀಡಾ ಪಟು ಅಪ್ರತಿಮ ಸಂಘಟನಾ ಚತುರ ..ಈ ರೀತಿಯಲ್ಲಿ ಸರ್ವ ಪ್ರತಿಭೆಯನ್ನು ಮೈಗೂಡಿಸಿಕೊಂಡ ಸರ್ವೋತ್ತಮರು ಮೊದಲಲ್ಲಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ಅನಂತರದಲ್ಲಿ ಮುಂಬಯಿಯಲ್ಲಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿದ ಇವರು ಇಂದಿಗೂ ಅಂದಿನ ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಕೆ.ಕೆ.ಪೈಯವರು ನೀಡಿದ ಸಹಕಾರವನ್ನು ನೆನಪಿಸಿಕೊಳ್ಳುತ್ತಾರೆ. ಅನಂತರದಲ್ಲಿ ತಮ್ಮ ಬ್ಯಾಂಕ್ ಹುದ್ದೆಗೆ ರಾಜೀನಾಮೆ ನೀಡಿ ಯು.ಎ.ಇ ಮೂಲದ ಬಹು ಪ್ರತಿಷ್ಟಿತ ಅಂತರರಾಷ್ಟ್ರೀಯ ವಿತರಣಾ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ಸುಮಾರು 25 ವರುಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ತದ ನಂತರದಲ್ಲಿ ಯುನೈಟೆಡ್ ಅರಬಿಕ್ ಎಮಿರೇಟ್ಸ್ ರಾಜಧಾನಿಯಾದ ಅಬುಧಾಬಿಯಲ್ಲಿ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ ಯು.ಎ.ಇ.ನಲ್ಲಿ ವ್ಯವಹಾರ ವಿಸ್ತರಿಸುವುದರ ಜೊತೆಗೆ ಹೊರ ನಾಡಿನಲ್ಲಿ ತಮ್ಮ ಮಾತೃ ಭಾಷೆ ಕನ್ನಡ ತುಳು ಭಾಷಾ ಸಂಪ್ರೀತಿಯನ್ನು ಒಡಲಿಗೆ ತುಂಬಿಕೊಂಡು ಅದರ ರುಚಿಯನ್ನು ಹೊರನಾಡಿನಲ್ಲೂ ಕಟ್ಟಿ ಬೆಳಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ತನ್ನ ನಾಡಿನಿಂದ ಬಂದ ಎಲ್ಲರ ಜೊತೆಗೂ ಅನ್ಯೇೂನ್ಯವಾದ ಬಾಂಧವ್ಯವನ್ನು ಬೆಳೆಸಿಕೊಂಡು ಅವರ ಆಶೇೂತ್ತರಗಳಿಗೆ ಸ್ಪಂದಿಸಿ ಸವ೯ರಲ್ಲೂ ಒಂದಾಂದವರು ಸರ್ವೋತ್ತಮರು. ಇಂದು ಸರ್ವೋತ್ತಮ ಶೆಟ್ಟಿ ಯವರು ಅಬುಧಾಬಿ ಎಂಬ ಮರಳು ನಾಡಿಗೆ ಬಂದು ನಾಲ್ಕುವರೆ ದಶಕಗಳೇ ಕಳೆದುಹೇೂಗಿದೆ. ಭಾರತ ವಿವಿಧ ರಾಜ್ಯಗಳಿಂದ ಬಂದು ಯು.ಎ.ಇ.ಯ ವಿವಿಧ ಕಡೆ ನೆಲೆಸಿರುವ ಅದೇಷ್ಟೊ ಮಂದಿ ಇವರ ಆತ್ಮೀಯ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ.

ಭಾರತದಿಂದ ಮಾತ್ರವಲ್ಲ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದು ಇಲ್ಲಿ ನೆಲಸಿರುವವರಿಗೂ ಇವರ ಹತ್ತಿರದ ಪರಿಚಯವಿರಲೇ ಬೇಕು ಯಾಕೆಂದರೆ ಕನ್ನಡ ನಾಡು ನುಡಿ ಸಂಸ್ಕೃತಿಯ ಕಂಪನ್ನು ಎಮಿರೇಟ್ಸ್ ನೆಲದಲ್ಲಿ ಪಸರಿಸಲು ಕಾರಣಿಕರ್ತರಲ್ಲಿ ಸರ್ವೋತ್ತಮ ಶೆಟ್ಟಿಯವರು ಮೇಲ್ ಪಂಕ್ತಿಯಲ್ಲಿ ನಿಲ್ಲುತ್ತಾರೆ ಅಂದರೂ ಅತೀಶಯೋಕ್ತಿಯ ಮಾತಲ್ಲ.

ಇಂದಿನ ಜಾಗತೀಕರಣ ಯುಗದಲ್ಲಿ ಅದೆಷ್ಟೋ ಮಂದಿ ಪರದೇಶಗಳಿಗೆ ಹೇೂಗಿ ನೆಲೆಯೂರುತ್ತಾರೆ ಆದರೆ ಅವರ ಮುಖ್ಯ ಉದ್ದೇಶ ತಮ್ಮ ಬದುಕನ್ನು ಸಂಪನ್ನಗೊಳಿಸಿಕೊಳ್ಳುವುದೆ ಮುಖ್ಯ ಗುರಿ. ಆದರೆ ನಮ್ಮ ಸವೇೂ೯ತ್ತಮ ಶೆಟ್ಟಿಯವರದು ಸ್ವಲ್ಪ ಭಿನ್ನವಾದ ಅಭಿರುಚಿ ಮತ್ತು ಉದ್ದೇಶ. ಇವರಿಗೆ ಮನುಷ್ಯ ಸಂಬಂಧವೇ ಪ್ರಧಾನವೇ ಹೊರತು ಹಣಕಾಸಿನ ವ್ಯವಹಾರದ ಸಂಬಂಧವಲ್ಲ ಅನ್ನುವುದು ಅವರ ಮೊದಲ ನೇೂಟದಲ್ಲಿ ವ್ಯಕ್ತವಾಗುವ ಮಾನವೀಯ ಸಂಬಂಧದ ಗುಣ. ತನ್ನ ನಾಡಿನಿಂದ ಯಾರೇ ಬಂದರು ಅವರ ಸುಖ. ಕಷ್ಟಗಳನ್ನು ವಿಚಾರಿಸಿ ತನ್ನ ಕೈಯಿಂದ ಆದಷ್ಟು ಸಹಕರಿಸುವುದು ಅವರ ಜಾಯಮಾನ.

ಅಬುಧಾಬಿಯ ಕನ್ನಡಿಗರು ಸವೇೂ೯ತ್ತಮ ಶೆಟ್ಟಿಯವರನ್ನು ಅವರು ಸ್ವೀಕರಿಸಿದ ಹುದ್ದೆ ಸಂಪತ್ತಿನಿಂದ ಗುರುತಿಸುವುದಿಲ್ಲ ಬದಲಾಗಿ ಅವರಲ್ಲಿರುವ ಮಾನವೀಯ ಸಂಪನ್ನತೆಯ ಗುಣ ಪರರ ಸುಖ ಕಷ್ಟಗಳಿಗೆ ಸ್ಪಂದಿಸುವ ಹೃದಯ ವೈಶಾಲ್ಯ ಗುಣದಿಂದಲೇ ಗುರುತಿಸಿಕೊಂಡಿದ್ದಾರೆ ಅನ್ನುವುದನ್ನು ನಾನು ನನ್ನ ಪ್ರವಾಸ ಕಾಲದಲ್ಲಿ ಗುರುತಿಸಿದ ಅವರ ವ್ಯಕ್ತಿತ್ವದ ಗುಣ. ಈ ಎಲ್ಲಾ ಉದಾತ್ತ ಗುಣಗಳು ಇರುವುದರಿಂದಲೇ ನಮ್ಮೂರ ಹೆಮ್ಮೆಯ ಸುಪುತ್ರ ಸವೇೂ೯ತ್ತಮರಿಗೆ 1998ರಲ್ಲಿ ಕನಾ೯ಟಕ ಸರ್ಕಾರ ಕೊಡ ಮಾಡಿದ ರಾಜ್ಯ ರಾಜ್ಯೇೂತ್ಸವ ಪ್ರಶಸ್ತಿ; ಅಂತರರಾಷ್ಟ್ರೀಯ ಆಯ೯ಭಟಾ ಪ್ರಶಸ್ತಿ 2008; ಗ್ಲೇೂಬಲ್ ಮ್ಯಾನ್ ಎವಾಡ೯2009; ಸುಂದರಾಂ ಶೆಟ್ಟಿ ಪ್ರಶಸ್ತಿ 2016; ಮಯೂರ ಬಂಟರ ಪ್ರಶಸ್ತಿ ಹೀಗೆ ಹತ್ತಾರು ರಾಷ್ಟ್ರೀಯ ಅಂತರರಾಷ್ಟ್ರೀಯ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಹತ್ತು ಹಲವು ಸಂಸ್ಥೆಗಳ ಜವಾಬ್ದಾರಿಯನ್ನು ನಿವ೯ಹಿಸ ಬೇಕಾದ ಸ್ಥಾನವೂ ಅವರಿಗೆ ಒಲಿದು ಬಂದಿದೆ.

ಪ್ರಸ್ತುತ ಸವೇೂ೯ತ್ತಮ ಶೆಟ್ಟಿಯವರು ಹೊರನಾಡಿನಲ್ಲಿ ಬಹು ಪ್ರತಿಷ್ಠಿತ ಯು.ಎ.ಇ. ಬಂಟರ ಸಂಘದ ಅಧ್ಯಕ್ಷರಾಗಿ ; ಕನಾ೯ಟಕ ಸಂಘದ ಅಧ್ಯಕ್ಷ ರಾಗಿ ಕಾರ್ಯ ನಿವ೯ಹಿಸುತ್ತಿದ್ದಾರೆ; ತುಳುಕೂಟದ ಸ್ಥಾಪನೆಯಲು ಇವರ ಶ್ರಮವಿದೆ ಅದರ ಪೂರ್ವಾ ಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇವರು ಪ್ರಸ್ತುತ ಪ್ರಧಾನ ಸಂಯೇೂಜಕರಾಗಿ ಕಾರ್ಯ ನಿವ೯ಹಿಸಿದ್ದಾರೆ. ಅಬುಧಾಬಿಯ ಬಹು ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಅಬಿಧಾಬಿ ಇಂಡಿಯನ್ ಸ್ಕೂಲ್‌ ಇದರ ಆಡಳಿತ ಮಂಡಳಿಯ ಶೈಕ್ಷಣಿಕ ಮತ್ತು ಕ್ರೀಡಾ ವಿಭಾಗದ ನಿದೇ೯ಶಕರಾಗಿ ತಮ್ಮ ಶೈಕ್ಷಣಿಕ ಜವಾಬ್ದಾರಿಯನ್ನು ನಿರ್ವ ಹಿಸುತ್ತಿದ್ದಾರೆ. ಯು.ಎ.ಇ. ರಾಜಧಾನಿ ಅಬುಧಾಬಿಯ ಕೇಂದ್ರ ಸ್ಥಾನದಲ್ಲಿರುವ ಇಂಡಿಯನ್ ಸೇೂಶಿಯಲ್ ಕಲ್ಚರಲ್ ಸೆಂಟರ್ ಗೆ ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವ ಹಿಸಿದ್ದು ಮಾತ್ರವಲ್ಲ ಬಹು ಪ್ರತಿಷ್ಠಿತ ಈ ಸಂಸ್ಥೆಗೆ ಪ್ರಥಮ ಬಾರಿಗೆ ಅಧ್ಯಕ್ಷರಾಗಿ ಅವಿರೇೂಧವಾಗಿ ಕನಾ೯ಟಕದಿಂದ ಆಯ್ಕೆಯಾದ ಮೊದಲ ಸಾಧಕ ಎಂಬ ಹೆಗ್ಗಳಿಕೆಗೆ ಇವರದ್ದಾಗಿದೆ.

ಪ್ರಪ್ರಥಮ ಬಾರಿಗೆ ಕನಾ೯ಟಕ ಮಹಿಳೆಯರು ಪುರುಷರಿಗಾಗಿ ವಾಲಿಬಾಲ್ ಪಂದ್ಯಗಳನ್ನು ನಡೆಸುವುದರ ಮೂಲಕ ಗಲ್ಫ್ ಪ್ರಾಂತ್ಯದಲ್ಲಿ ವಾಲಿಬಾಲ್ ಕ್ರೀಡೆಯಲ್ಲಿ ನಮ್ಮವರಿಗೆ ಭಾಗವಹಿಸುವಂತೆ ಪ್ರೇರೇಪಿಸಿದ ಕೀರ್ತಿಇವರಿಗೆ ಇದೆ. ಕನಾ೯ಟಕ ಸಂಘ ತುಳುಕೂಟ ಇನ್ನಿತರ ಸಂಘ ಸಂಸ್ಥೆಗಳಮೂಲಕ ತಮ್ಮ ಕನ್ನಡ ನಾಡಿನ ಕಲಾ ಪುರುಷರನ್ನು ಕಲಾ ಪ್ರತಿಭೆಯನ್ನು ಯುನೈಟೆಡ್ ಅರಬಿಕ್ ಎಮಿರೇಟ್ಸ್ ನೆಲದಲ್ಲಿ ಪರಿಚಯಿಸಿದ ಸಾಧನೆ ಇವರಿಗೆ ಸಂದಿದೆ. ವಿಶ್ವ ತುಳು ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಕೀರ್ತಿ ಇವರಿಗಿದೆ.

ಇಷ್ಟೆಲ್ಲಾ ಸುಖ ಕಷ್ಟಗಳ ನಡುವೆ ನಡುವೆ ಸಾಗಿಬಂದ ಸವೇೂತ್ತಮ ಶೆಟ್ಟಿಯವರು ಯುನೈಟೆಡ್ ಅರಬಿಕ್ ಎಮಿರೇಟ್ಸ್ ನೆಲೆಸಿರುವ ಕನ್ನಡಿಗರ ದು:ಖ ದುಮ್ಮಾನಗಳಿಗೆ ತಕ್ಷಣವೇ ಸ್ಪಂದಿಸುವ ಮಾನವೀಯತೆಯ ಗುಣದಿಂದಲೇ ಈ ನೆಲದಲ್ಲಿ ಸವ೯ರಿಂದಲೂ ಸವ೯ರಲ್ಲಿ ಉತ್ತಮ “ಸವೇೂ೯ತ್ತಮ”ಅನ್ನುವ ಹೃದಯ ಸ್ಪರ್ಶಿ ಬಿರುದಿಗೆ ಭಾಜನರಾಗಿದ್ದಾರೆ.

ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ. (ಅಬುಧಾಬಿಯಿಂದ)

ಟಾಪ್ ನ್ಯೂಸ್

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

Private Job Quota:ಖಾಸಗಿ ವಲಯದಲ್ಲಿ ಮೀಸಲಾತಿ ವಿಧೇಯಕ ಜಾರಿಯಾದರೆ…ಮುಂದಿನ ಪರಿಣಾಮವೇನು?

Private Job Quota:ಖಾಸಗಿ ವಲಯದಲ್ಲಿ ಮೀಸಲಾತಿ ವಿಧೇಯಕ ಜಾರಿಯಾದರೆ…ಮುಂದಿನ ಪರಿಣಾಮವೇನು?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.