Sirsi- Kumta road; ರವಿವಾರದಿಂದ ಸಂಚಾರಕ್ಕೆ ಬಹುತೇಕ ಸಿದ್ದ
Team Udayavani, Jul 20, 2024, 11:11 PM IST
ಶಿರಸಿ: ಕಳೆದ ಸೋಮವಾರ ರಾತ್ರಿಯಿಂದ ಕಡಿತಗೊಂಡಿದ್ದ ಕುಮಟಾ- ಶಿರಸಿ NH 766E ಮಾರ್ಗದ ಸಂಪರ್ಕ ರವಿವಾರದಿಂದ ಬಹುತೇಕ ಆರಂಭವಾಗುವದು ಖಚಿತವಾಗಿದೆ.
ರಾಗಿಹೊಸಳ್ಳಿ ಬಳಿ ಕುಸಿದ ಧರೆಯ ಕಾರಣದಿಂದ ಆರು ದಿನಗಳಿಂದ ಬಂದ್ ಆಗಿತ್ತು. ಸಾಗರ ಮಾಲಾ ಯೋಜನೆಯ ಅಡಿಯಲ್ಲಿ ಗುತ್ತಿಗೆ ಪಡೆದ ಆರ್ ಎನ್ ಎಸ್ ಕಂಪನಿ ಹಾಗೂ ತಾಲೂಕು ಆಡಳಿತ ಬಿದ್ದ ಮಣ್ಣು ಹಾಗೂ ಮರದ ತೆರವು ಮಾಡಿತ್ತು. ಶುಕ್ರವಾರ ಮತ್ತೆ ಮಣ್ಣು ಜರಿದಿದ್ದರಿಂದ ಸಮಸ್ಯೆ ಆಗಿತ್ತು.
ಶನಿವಾರ ಶಾಸಕ ಭೀಮಣ್ಣ ನಾಯ್ಕ ಅವರೂ ಸ್ಥಳ ವೀಕ್ಷಣೆ ಮಾಡಿದರು. ಪೊಲೀಸ್ ಅಧಿಕಾರಿಗಳು, ಗುತ್ತಿಗೆ ಪಡೆದ ಕಂಪನಿ, ತಾಲೂಕು ಆಡಳಿತ ಜೊತೆ ಸಮಾಲೋಚನೆ ನಡೆಸಿ ಹಲವು ಸೂಚನೆ ನೀಡಿದರು.
ಈ ಮಧ್ಯೆ ರವಿವಾರದಿಂದ ವಾಹನ ಓಡಾಟಕ್ಕೆ ತೆರವಾದರೂ ನಿಧಾನವಾಗಿ ಓಡಿಸಬೇಕಾಗಿದೆ. ಮಳೆ ಅಧಿಕವಾದರೆ ಹಲವಡೆ ಇನ್ನೂ ಮಣ್ಣು ಜರಿಯುವ ಸಾಧ್ಯೆತೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.