Shiroor Hill Slide: ಸಂತ್ರಸ್ತರ ಅಳಲು ಆಲಿಸಿದ ಬಿ.ವೈ.ವಿಜಯೇಂದ್ರ
Team Udayavani, Jul 22, 2024, 6:35 AM IST
ಅಂಕೋಲಾ: ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಿಂದಾಗಿ ಸಂಪೂರ್ಣ ನೆಲಸಮಗೊಂಡಿದ್ದ ಉಳುವರೆ ಗ್ರಾಮಕ್ಕೆ ರವಿವಾರ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಲ್ಲಿನ ಸ್ಥಿತಿಗತಿ ಪರಿಶೀಲಿಸಿ ಸಂತ್ರಸ್ತರ ಅಳಲು ಆಲಿಸಿದರು.
ಗುಡ್ಡ ಕುಸಿತ ಹಾಗೂ ಅದರಿಂದಾದ ನೋವು, ಸಾವು, ನಷ್ಟಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಬಿ.ವೈ. ವಿಜಯೇಂದ್ರ, ಇದೊಂದು ದುರದೃಷ್ಟಕರ ಘಟನೆ. ಗುಡ್ಡ ಕುಸಿತದ ಪರಿಣಾಮವಾಗಿ ಗಂಗಾವಳಿ ನದಿ ದಡದ ಅನೇಕ ಮನೆಗಳು ನೆಲಕಚ್ಚಿವೆ. ಕುಟುಂಬಗಳು ಬೀದಿಗೆ ಬಂದಿವೆ. ಅವರ ರಕ್ಷಣೆ ಮಾಡಬೇಕಿದೆ ಎಂದರು.
ಗುಡ್ಡ ಕುಸಿತದಿಂದಾಗಿರುವ ಮಣ್ಣು ತೆರುವ ಕಾರ್ಯಾಚರಣೆ ಇನ್ನಷ್ಟು ವೇಗದಿಂದ ನಡೆಯುವಂತಾಗಬೇಕು. ಮಣ್ಣಿನಡಿ ಸಿಲುಕಿರುವ ಜನರಿಗಾಗಿ ಶೋಧ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ನಡೆಸಬೇಕು. ಆದಷ್ಟು ಬೇಗ ಕಾರ್ಯಾಚರಣೆ ನಡೆಸಿ ಕಣ್ಮರೆಯಾದವರ ಪತ್ತೆ ಮಾಡಲು ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ಸಿಎಂ ಸರಿ ಇದ್ದಿದ್ದರೆ ಅಧಿಕಾರಿಗಳಿಂದ ಹೇಗೆ ತಪ್ಪಾಗುತ್ತದೆ?: ವಿಜಯೇಂದ್ರ
ಯಲ್ಲಾಪುರ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ಬೇಗ ಜನಪ್ರಿಯತೆ ಮತ್ತು ಜನರ ವಿಶ್ವಾಸ ಕಳೆದುಕೊಳ್ಳುತ್ತದೆ ಎಂದು ಊಹಿಸಿರಲಿಲ್ಲ. ಪಕ್ಷದ ಬಣ್ಣದ ಮಾತು ಮತ್ತು ಗ್ಯಾರಂಟಿ ಯೋಜನೆ ಮೂಲಕ ಜನರನ್ನು ಮರುಳು ಮಾಡಿ ಅಧಿಕಾರಕ್ಕೆ ಬಂದಿದ್ದರು. ಜನ ನಿರೀಕ್ಷಿಸಿದ್ದನ್ನು ಇವರ ಬಳಿ ಕೊಡಲಾಗಲಿಲ್ಲ. ಅಭಿವೃದ್ಧಿ ನಿಂತು ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಇತಿಹಾಸದಲ್ಲಿಯೇ ಈವರೆಗೆ ಕಾಣದಂತಹ ಹಗರಣ ಕಂಡಿದ್ದೇವೆ. ಇವರು ಸರಿ ಇದ್ದರೆ ಅಧಿಕಾರಿಗಳಿಂದ ಹೇಗೆ ತಪ್ಪಾಗುತ್ತದೆ. ಆದ ಪ್ರಮಾದಕ್ಕೆ ಅಧಿಕಾರಿಗಳನ್ನು ನೆಪ ಮಾಡಿ ಕೈತೊಳೆದುಕೊಳ್ಳುವ ಪ್ರಯತ್ನ ನಡೆದಿದೆ. ಅಸ್ತಿತ್ವ ಇಲ್ಲದ ಕಂಪನಿ ಹೆಸರಿಗೆ ಹಣ ವರ್ಗಾಯಿಸಿ ಬಟವಾಡೆ ಮಾಡಿಕೊಂಡಿದ್ದಾರೆ. ಇದೊಂದು ಹಣ ಲೂಟಿ ಹೊಡೆಯುವ ಸರ್ಕಾರ ಎಂದರು.
ಹೆಬ್ಟಾರ್ ನಡೆ ಬಗ್ಗೆ ಕಾಲವೇ ಉತ್ತರಿಸಲಿದೆ: ವಿಜಯೇಂದ್ರ
ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಟಾರ್ ನಡೆ ಬಗ್ಗೆ ಕಾಲವೇ ಉತ್ತರಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಬ್ಟಾರ್ ತಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ಸೂ ಅಲ್ಲ ಅಂತಿದ್ದಾರೆ. ಇವರ ನಡಾವಳಿಕೆ ನಮ್ಮ ಗಮನಕ್ಕೆ ಬಂದಿದೆ. ಈ ಶಾಸಕರಿಂದ ಕಾರ್ಯಕರ್ತರಿಗೆ ಅಪಾರ ಅವಮಾನವಾಗುತ್ತಿದೆ. ಈ ಸಂಗತಿಯನ್ನು ಕೇಂದ್ರ ನಾಯಕರ ಗಮನಕ್ಕೆ ತರುತ್ತೇನೆ. ಕಾಲವೇ ಉತ್ತರ ಹೇಳುತ್ತದೆ. ಕಾದು ನೋಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
Grant: ರಸ್ತೆ ಅಭಿವೃದ್ಧಿಗೆ ಪಕ್ಷಾತೀತವಾಗಿ ಶಾಸಕರಿಗೆ 2 ಸಾವಿರ ಕೋ.ರೂ.: ಮುಖ್ಯಮಂತ್ರಿ
MUST WATCH
ಹೊಸ ಸೇರ್ಪಡೆ
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.