Olympics 2024 ಆತಿಥ್ಯಕ್ಕೆ ಪ್ಯಾರಿಸ್‌ ಸಜ್ಜು

ಸರಿಯಾಗಿ 100 ವರ್ಷಗಳ ಬಳಿಕ ಇನ್ನೊಂದು ಬೇಸಗೆ ಒಲಿಂಪಿಕ್ಸ್‌ಗೆ ಸಿದ್ಧ

Team Udayavani, Jul 22, 2024, 7:45 AM IST

Paris-olympics

ತನ್ನ ಇತಿಹಾಸದಲ್ಲೇ 3ನೇ ಬಾರಿಗೆ ಬೇಸಗೆ ಒಲಿಂಪಿಕ್ಸ್‌ ಆತಿಥ್ಯಕ್ಕೆ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ ಸಿದ್ಧವಾಗಿದೆ. ಚಳಿಗಾಲದ ಒಲಿಂಪಿಕ್ಸ್‌ಗಳನ್ನೂ ಪರಿಗಣಿಸಿದರೆ ಫ್ರಾನ್ಸ್‌ 6ನೇ ಬಾರಿಗೆ ಒಲಿಂಪಿಕ್ಸ್‌ ಆಯೋಜಿಸುತ್ತಿದೆ. 1924ರಲ್ಲಿ 2ನೇ ಬಾರಿಗೆ ಫ್ರಾನ್ಸ್‌ ಒಲಿಂಪಿಕ್ಸ್‌ ಆಯೋಜಿಸಿತ್ತು. ಅದಾಗಿ ಸರಿಯಾಗಿ 100 ವರ್ಷಗಳ ಬಳಿಕ ಇನ್ನೊಂದು ಬೇಸಗೆ ಒಲಿಂಪಿಕ್ಸ್‌ಗೆ ಸಿದ್ಧವಾಗಿದೆ. ವಿಶ್ವದ ಬೃಹತ್‌ ಕ್ರೀಡಾಕೂಟಕ್ಕೆ ಫ್ರಾನ್ಸ್‌ ಏನೇನು ಸಿದ್ಧತೆ ಮಾಡಿಕೊಂಡಿದೆ ಎಂಬ ವಿವರಗಳು ಇಲ್ಲಿವೆ.

ಎಲ್ಲೆಲ್ಲೂ ಒಲಿಂಪಿಕ್ಸ್‌ ರಿಂಗ್‌ಗಳು
ಪ್ಯಾರಿಸ್‌ ಸೇರಿ ಫ್ರಾನ್ಸ್‌ ದೇಶಾದ್ಯಂತ ಒಲಿಂಪಿಕ್ಸ್‌ನ ರಿಂಗ್‌ಗಳು ಕಾಣುತ್ತಿವೆ. ಎತ್ತರದ ಕಟ್ಟಡಗಳ ಮೇಲಿನಿಂದ ರಿಂಗ್‌ಗಳನ್ನು ತೂಗುಬಿಡಲಾಗಿದೆ. ಒಲಿಂಪಿಕ್ಸ್‌ ಕ್ರೀಡಾಗ್ರಾಮದ ನೋಟ ಅತ್ಯದ್ಭುತವಾಗಿದೆ. ಉದ್ಘಾಟನ ಸಮಾರಂಭ ನಡೆಯುವ ಸ್ಥಳದಲ್ಲಿ 6 ಕಿ.ಮೀ. ಮಾರ್ಗವನ್ನೇ ಬ್ಲಾಕ್‌ ಮಾಡಲಾಗಿದೆ. ಸುತ್ತಮುತ್ತಲ ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಸಂಚಾರ ಕಡಿಮೆಯಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿ ನದಿ ಮೇಲೆ ಉದ್ಘಾಟನೆ
ಈ ಬಾರಿ ಒಲಿಂಪಿಕ್ಸ್‌ ಉದ್ಘಾಟನೆ ಅತ್ಯಂತ ಅಪೂರ್ವವಾಗಿದೆ. ಒಲಿಂಪಿಕ್ಸ್‌ ಕ್ರೀಡಾಕೂಟದ ಇತಿಹಾಸದಲ್ಲೇ ಮೊದಲ ಬಾರಿ ನದಿಯ ಮೇಲೆ ಕ್ರೀಡಾಕೂಟದ ಉದ್ಘಾಟನ ಸಮಾರಂಭ ನಡೆಯಲಿದೆ. ಪ್ಯಾರಿಸ್‌ನ ಹೃದಯ ಭಾಗದಲ್ಲಿರುವ ಸೆನ್‌ ನದಿಯ ಮೇಲೆ ಉದ್ಘಾಟನ ಕಾರ್ಯಕ್ರಮ ನಡೆಯಲಿದೆ. ಇಡೀ ನದಿಯನ್ನೇ ವೇದಿಕೆಯಂತೆ ಪರಿವರ್ತಿಸುವ ಅತ್ಯಪೂರ್ವ ಉದಾಹರಣೆಯೊಂದಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಆ್ಯತ್ಲೀಟ್‌ಗಳು ದೋಣಿಯನ್ನೇರಿ ಪಥಸಂಚಲನ ನಡೆಸಲಿದ್ದಾರೆ. ಈ ದೋಣಿಯಲ್ಲಿ ಟಿವಿ ನೇರಪ್ರಸಾರಕ್ಕೆ ಬೇಕಾದ ಕೆಮರಾಗಳನ್ನು ಅಳವಡಿಸಲಾಗಿರುತ್ತದೆ.

ಪ್ಯಾರಿಸ್‌ಗೆ ಪ್ಯಾರಿಸ್ಸೇ ಪೊಲೀಸ್‌ ಮಯ
ಮಧ್ಯಪ್ರಾಚ್ಯ ದೇಶಗಳಾದ ಇಸ್ರೇಲ್‌, ಇರಾನ್‌ಗಳಲ್ಲಿ ಕೆಲವು ತಿಂಗಳ ಹಿಂದೆ ಪ್ರಕ್ಷುಬ್ಧ ಸ್ಥಿತಿಯಿತ್ತು. ರಷ್ಯಾ-ಉಕ್ರೇನ್‌ ನಡುವೆ ಈಗಲೂ ಬಿಗುವಿನ ಸ್ಥಿತಿಯಿದೆ. ಫ್ರಾನ್ಸ್‌ ನಲ್ಲೂ ಕೆಲವು ತಿಂಗಳ ಹಿಂದೆ ಭಾರೀ ಜನಾಂಗೀಯ ಸಂಘರ್ಷ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ಯಾರಿಸ್‌ನಲ್ಲಿ 45,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಉದ್ಘಾಟನ ಸಮಾರಂಭಕ್ಕೆ 35,000 ಗುಪ್ತಚರರು, ಯೋಧರು ಭದ್ರತೆ ನೀಡಲಿದ್ದಾರೆ. ಸಂಭಾವ್ಯ ಡ್ರೋನ್‌ ದಾಳಿ ಸೇರಿ ಯಾವುದೇ ಸ್ಥಿತಿ ಎದುರಿಸಲು ಫ್ರಾನ್ಸ್‌ ಸಿದ್ಧವಾಗಿದೆ. ಅನ್ಯ ದೇಶಗಳ ಭದ್ರತಾಪಡೆಗಳ ನೆರವನ್ನೂ ಪಡೆಯಲಾಗಿದೆ.

100ನೇ ವರ್ಷದ ಸಂಭ್ರಮ
ಪ್ಯಾರಿಸ್‌ನಲ್ಲಿ ಇದಕ್ಕೂ ಹಿಂದೆ ಒಲಿಂಪಿಕ್ಸ್‌ ನಡೆದಿದ್ದು ಸರಿಯಾಗಿ 100 ವರ್ಷಗಳ ಹಿಂದೆ. 1924, ಜು.5ರಲ್ಲಿ ಆ ಕೂಟದ ಉದ್ಘಾಟನ ಸಮಾರಂಭ ನಡೆದಿತ್ತು. ಈ ಬಾರಿ ಮತ್ತೆ ಆತಿಥೇಯತ್ವ ಪಡೆದಿರುವುದರಿಂದ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ.

3ನೇ ಬಾರಿಗೆ ಪ್ಯಾರಿಸ್‌ಗೆ ಆತಿಥ್ಯ
ಪ್ಯಾರಿಸ್‌ 3ನೇ ಬಾರಿಗೆ ಬೇಸಗೆ ಒಲಿಂಪಿಕ್ಸ್‌ ಆಯೋಜಿಸುತ್ತಿದೆ. ಚಳಿಗಾಲದ ಒಲಿಂಪಿಕ್ಸ್‌ ಸೇರಿದರೆ ಒಟ್ಟು 6ನೇ ಬಾರಿಗೆ ಆಯೋಜಿಸಿದಂತಾ­ಗುತ್ತದೆ. ಇದಕ್ಕೂ ಮುನ್ನ ಅದು 1900, 1924ರಲ್ಲಿ ಆತಿಥೇಯತ್ವ ಪಡೆದು ಯಶಸ್ವಿಯಾಗಿತ್ತು. ಹೀಗಾಗಿ ನಗರದಲ್ಲಿ ಆತಿಥ್ಯಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳೂ ಇವೆ.

ಖಾಸಗಿ ಹೂಡಿಕೆಯಿಂದ ಶೇ.96ರಷ್ಟು ಹಣ
ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಖರ್ಚಾಗುವ ಶೇ.96 ಹಣ ಖಾಸಗಿ ವಲಯದಿಂದಲೇ ಬರುತ್ತದೆ. ಐಒಸಿ (ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ), ಸಹಭಾಗಿ ಕಂಪೆನಿಗಳು, ಟಿಕೆಟ್‌ ಸಂಗ್ರಹ, ಪರವಾನಿಗೆಗಳನ್ನು ಪಡೆದುಕೊಳ್ಳುವ ಕಂಪೆನಿಗಳು ಹಣ ಪೂರೈಸುತ್ತವೆ.

68 ಸಾವಿರ ಕೋಟಿ ರೂ.: ಗರಿಷ್ಠ ವೆಚ್ಚ ಮಾಡಿದ 6ನೇ ನಗರ
ಪ್ಯಾರಿಸ್‌ ಒಲಿಂಪಿಕ್ಸ್‌ ಸಂಘಟಿಸಲು 68.54 ಸಾವಿರ ಕೋಟಿ ರೂ. (8.2 ಬಿಲಿಯನ್‌ ಡಾಲರ್‌) ಖರ್ಚಾಗಲಿದೆ. ಇತಿಹಾಸದಲ್ಲೇ ಒಲಿಂಪಿಕ್ಸ್‌ ಸಂಘಟನೆಗೆ ಮಾಡಲಾದ 6ನೇ ಗರಿಷ್ಠ ವೆಚ್ಚವಿದು. ರಷ್ಯಾದ ಸೋಚಿಯಲ್ಲಿ ನಡೆದ 2014ರ ಚಳಿಗಾಲದ ಒಲಿಂಪಿಕ್ಸ್‌ಗೆ 2 ಲಕ್ಷ ಕೋಟಿ ರೂ. (25 ಬಿಲಿಯನ್‌ ಡಾಲರ್‌) ವೆಚ್ಚವಾಗಿದ್ದೇ ಇದುವರೆಗಿನ ಗರಿಷ್ಠ ಮೊತ್ತ

ಒಲಿಂಪಿಕ್ಸ್‌ಗೆ ಎಐ ಸ್ಪರ್ಶ
ಈ ಬಾರಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ಗೆ ಕೃತಕ ಬುದ್ಧಿಮತ್ತೆಯ ಸ್ಪರ್ಶ ನೀಡಲಾಗಿದೆ. ಈಜು, ಓಟ, ಸರ್ಫಿಂಗ್‌ನಂತಹ ಕ್ರೀಡೆಗಳ ಮೇಲೆ ಇದು ಕಣ್ಣಿಡುವುದಷ್ಟೇ ಅಲ್ಲದೇ, ಇಡೀ ನಗರದ ರಕ್ಷಣೆಯ ಜವಾಬ್ದಾರಿ ಯನ್ನು ಎಐ ಹೊತ್ತು ಕೊಂಡಿದೆ. ಇದು ಮನುಷ್ಯರಿಗಿಂತ ಹೆಚ್ಚು ಕ್ರಿಯಾಶೀಲ ವಾಗಿ ವರ್ತಿಸು ವುದರಿಂದ ತತ್‌ಕ್ಷಣದ ಕ್ರಮ ತೆಗೆದುಕೊ ಳ್ಳಲು ನೆರ ವಾಗಲಿದೆ.

ಪ್ಯಾರಿಸ್‌ಗೆ ಆತಿಥ್ಯ ಸಿಕ್ಕಿದ್ದು ಹೇಗೆ?
2024ರ ಒಲಿಂಪಿಕ್ಸ್‌ ಆತಿಥ್ಯ ಪಡೆಯಲು 6 ನಗರಗಳು ಪೈಪೋಟಿ ನಡೆಸಿದ್ದವು. ಫ್ರಾನ್ಸ್‌ನ ಪ್ಯಾರಿಸ್‌, ಜರ್ಮನಿಯ ಹ್ಯಾಂಬರ್ಗ್‌, ಅಮೆರಿಕದ ಬೋಸ್ಟನ್‌ ಮತ್ತು ಲಾಸ್‌ ಏಂಜಲೀಸ್‌, ಹಂಗೇರಿಯ ಬುಡಾಪೆಸ್ಟ್‌, ಇಟಲಿಯ ರೋಮ್‌ ನಗರಗಳು ಪೈಪೋಟಿಯಲ್ಲಿದ್ದವು.

ಒಂದೊಂದೇ ನಗರಗಳು ಪೈಪೋಟಿಯಿಂದ ಹಿಂದೆ ಸರಿಯುತ್ತ ಹೋದವು. ಕಡೆಯಲ್ಲಿ ಉಳಿದಿದ್ದು ಪ್ಯಾರಿಸ್‌ ಮತ್ತು ಲಾಸ್‌ ಏಂಜಲೀಸ್‌ ಮಾತ್ರ. ಅಮೆರಿಕ ಬೋಸ್ಟನ್‌ ನಗರ ಮೊದಲು ತನ್ನದೇ ದೇಶದ ಲಾಸ್‌ ಏಂಜಲೀಸ್‌, ಸ್ಯಾನ್‌ಫ್ರಾನ್ಸಿಸ್ಕೋ, ವಾಷಿಂಗ್ಟನ್‌ ಡಿಸಿ ನಗರಗಳನ್ನು ಹಿಂದಿಕ್ಕಿತ್ತು. ಆದರೆ ಮಸಾಚುಸೆಟ್ಸ್‌ ರಾಜ್ಯದಲ್ಲೇ ಬೋಸ್ಟನ್‌ ಆತಿಥ್ಯಕ್ಕೆ ವಿರೋಧ ಬಂದಿದ್ದರಿಂದ ಅದು ಬಿಡ್ಡಿಂಗ್‌ನಿಂದ 2015ರಲ್ಲೇ ಹಿಂದೆ ಸರಿಯಿತು. ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಜನಮತಗಣನೆ ನಡೆದಾಗ ಅಲ್ಲಿನ ಜನರೇ ಆತಿಥ್ಯ ಬೇಡವೆಂದು ಹೇಳಿದರು.

2016ರಲ್ಲಿ ರೋಮ್‌ ನಗರ ಹಣವಿಲ್ಲ ಎಂದು ಹಿಂದೆ ಸರಿಯಿತು. ಬುಡಾಪೆಸ್ಟ್‌ ಕೂಡ ಆರ್ಥಿಕ, ರಾಜಕೀಯ ಕಾರಣಗಳಿಗೆ ಹಿಂದೆ ಸರಿಯಿತು. ಅಂತಿಮವಾಗಿ ಕಣದಲ್ಲಿ ಉಳಿದಿದ್ದು ಪ್ಯಾರಿಸ್‌ ಮತ್ತು ಲಾಸ್‌ ಏಂಜಲೀಸ್‌ ಮಾತ್ರ. ಇವೆರಡರ ಪೈಕಿ ಯಾವ ನಗರಕ್ಕೆ ಆತಿಥ್ಯ ನೀಡಬೇಕೆಂಬ ಚರ್ಚೆ ಶುರುವಾಯಿತು. ಆ ಹಂತದಲ್ಲಿ 2024 ಮತ್ತು 2028ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಒಮ್ಮೆಲೇ ಆತಿಥೇಯ ನಗರಗಳನ್ನು ಘೋಷಿಸುವ ನಿರ್ಧಾರ ಮಾಡಲಾಯಿತು.

2017, ಜು.31ರಂದು ಲಾಸ್‌ ಏಂಜಲೀಸ್‌ 2028ರ ಆತಿಥ್ಯಕ್ಕೆ ಏಕೈಕ ಉಮೇದುವಾರ ಎಂದು ಐಒಸಿ (ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ) ಘೋಷಿಸಿತು. ಹೀಗಾಗಿ 2024ರ ಆತಿಥ್ಯ ಪಡೆಯುವ ಹಾದಿ ಪ್ಯಾರಿಸ್‌ಗೆ ಸುಗಮವಾಯಿತು. ಪ್ಯಾರಿಸ್‌ ಮತ್ತು ಲಾಸ್‌ ಏಂಜಲೀಸ್‌ಗಳಿಗೆ ಹಿಂದೆಯೂ ಒಲಿಂಪಿಕ್ಸ್‌ ಆಯೋಜಿಸಿದ ಅನುಭವವಿದೆ. ಮೂಲಸೌ­ಕರ್ಯಗಳೂ ಚೆನ್ನಾಗಿವೆ. ಹೀಗಾಗಿ ಈ ಬಿಡ್ಡಿಂಗ್‌ನಲ್ಲಿ ಅವು ಸುಲಭವಾಗಿ ಯಶಸ್ಸು ಸಾಧಿಸಿದವು.

ಕ್ರೀಡಾಗ್ರಾಮದ ವಿಸ್ತಾರ 112 ಎಕ್ರೆ, 14,000 ಮಂದಿ ವಾಸ್ತವ್ಯಕ್ಕೆ ವ್ಯವಸ್ಥೆ
ಪ್ಯಾರಿಸ್‌ನ ಸೆನ್‌ ನದಿಯ ವ್ಯಾಪ್ತಿಯಲ್ಲಿ 112 ಎಕ್ರೆಗೂ ಹೆಚ್ಚು ವಿಸ್ತಾರದ ಕ್ರೀಡಾಗ್ರಾಮವನ್ನು ನಿರ್ಮಿಸಲಾಗಿದೆ. ಉತ್ತರ ಪ್ಯಾರಿಸ್‌ನ ಉಪನಗರಗಳಾದ ಸೇಂಟ್‌ ಡೆನಿಸ್‌, ಸೇಂಟ್‌ ಕ್ವೆನ್‌, ಲೀಲ್‌ ಸೇಂಟ್‌ ಡೆನಿಸ್‌ನಲ್ಲಿ ಈ ಬೃಹತ್‌ ಕ್ರೀಡಾಗ್ರಾಮ ಹರಡಿಕೊಂಡಿದೆ. ಇದರಲ್ಲಿ ಆ್ಯತ್ಲೀಟ್‌ಗಳೂ ಸೇರಿ 14,000 ಮಂದಿ ಉಳಿದುಕೊಳ್ಳಲಿದ್ದಾರೆ. ಬೃಹತ್‌ ಊಟದ ಹಾಲ್‌, ಬೇರೆ ಬೇರೆ ಆಹಾರ ತಾಣಗಳು, ದೊಡ್ಡ ಜಿಮ್‌, ಹಲವು ಕ್ರೀಡೆಗಳಿಗೆ ತರಬೇತಿ ಮೈದಾನಗಳು, ಪ್ರಾರ್ಥನಾ ಕೇಂದ್ರಗಳು, ಉದ್ದೀಪನ ನಿಗ್ರಹ ಕೇಂದ್ರಗಳಿವೆ.

ಆ್ಯತ್ಲೀಟ್‌ಗಳು ವಿದ್ಯುತ್‌ ಚಾಲಿತ ವಾಹನ ಬಳಸಿ ಸಂಚರಿಸಬಹುದು. ಸೆನ್‌ ನದಿಯ ಭಾಗದಲ್ಲಿ ಕ್ರೀಡಾಪಟುಗಳು ನೆಮ್ಮದಿಯಾಗಿ ಸಂಚರಿಸಲು ಸ್ಥಳಗಳನ್ನು ವ್ಯವಸ್ಥೆ ಮಾಡಲಾಗಿದೆ. ಒಲಿಂಪಿಕ್ಸ್‌ ಮುಗಿದ ಕೂಡಲೇ ಈ ಕಟ್ಟಡಗಳ ರೂಪಾಂತರ ಮಾಡಿ 3,000 ಫ್ಲಾಟ್‌ಗಳನ್ನಾಗಿ ಬದಲಿಸಲಾಗುತ್ತದೆ.

– ಮಾಹಿತಿ: ಪೃಥ್ವಿಜಿತ್‌.ಕೆ

ಟಾಪ್ ನ್ಯೂಸ್

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Test Series: ಟೀಮ್ ಇಂಡಿಯಾ ವೈಟ್ ವಾಶ್… ನ್ಯೂಝಿಲೆಂಡ್ ಗೆ ಸರಣಿ ಗೆಲುವು

Test Series: ಟೀಮ್ ಇಂಡಿಯಾ ವೈಟ್ ವಾಶ್… ನ್ಯೂಝಿಲೆಂಡ್ ಗೆ ಸರಣಿ ಗೆಲುವು

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

Why KKR Dropped IPL Champion Captain Iyer?: CEO Answers

IPL ಚಾಂಪಿಯನ್‌ ಕ್ಯಾಪ್ಟನ್‌ ಅಯ್ಯರ್‌ ನನ್ನು ಕೆಕೆಆರ್‌ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.