flight ನಲ್ಲಿ ಅಶ್ಲೀಲ ವೀಡಿಯೋ ತೋರಿಸಿದ ಸ್ಟೀಲ್ ಸಂಸ್ಥೆ ಸಿಇಒ ವಿರುದ್ಧ ಕೇಸು
Team Udayavani, Jul 22, 2024, 6:45 AM IST
ಹೊಸದಿಲ್ಲಿ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸ್ಟೀಲ್ ಕಂಪೆನಿಯೊಂದರ ಸಿಇಒ ದಿನೇಶ್ ಕುಮಾರ್ ಸರೋಗಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಯಡಿ ಪ್ರಕರಣ ದಾಖಲಿಸಲಾಗಿದೆ.
ಅಬುಧಾಬಿಯಿಂದ ಕೋಲ್ಕತಾಗೆ ಬರುವ ವೇಳೆ ದಿನೇಶ್, ವಿಮಾನದಲ್ಲಿದ್ದ ಮಹಿಳೆ ಜತೆ ಸಂಭಾಷಣೆ ಆರಂಭಿಸಿ ಅವರಿಗೆ ಅಶ್ಲೀಲ ವೀಡಿಯೋ ತೋರಿಸಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
X ನಲ್ಲಿನ ಪೋಸ್ಟ್ನಲ್ಲಿ, ಕೋಲ್ಕತಾದಿಂದ ಅಬುಧಾಬಿಗೆ ಬರುತ್ತಿದ್ದ ವಿಮಾನದಲ್ಲಿ ಸರೋಗಿ ತನ್ನೊಂದಿಗೆ ಹೇಗೆ ಸಂಭಾಷಣೆಯನ್ನು ಪ್ರಾರಂಭಿಸಿದರು ಎಂಬುದನ್ನು ಮಹಿಳೆ ವಿವರಿಸಿದ್ದಾರೆ. ಸರೋಗಿ ತನ್ನ “ಕೆಲವು ವಿಡಿಯೋ ತುಣುಕುಗಳನ್ನು” ತೋರಿಸುವ ಮೊದಲು ಅವರು ತಮ್ಮ ಹಿನ್ನೆಲೆ, ಹವ್ಯಾಸಗಳು ಮತ್ತು ಕುಟುಂಬಗಳ ಬಗ್ಗೆ “ಸಾಮಾನ್ಯ ಸಂಭಾಷಣೆ” ಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ.
“ನನಗೆ ಅಶ್ಲೀಲ ವಿಡಿಯೋ ತೋರಿಸಲು ಆರಂಭಿಸಿ ಫೋನ್ ಮತ್ತು ಇಯರ್ಫೋನ್ಗಳನ್ನು ನೀಡಿ ನನ್ನನ್ನು ಹಿಡಿಯಲು ಪ್ರಾರಂಭಿಸಿದ್ದು ನಾನು ಆಘಾತಗೊಂಡು ದಿಕ್ಕು ತೋಚದೆ ವಾಶ್ರೂಮ್ಗೆ ಓಡಿಹೋಗಿ ಸಿಬಂದಿಗೆ ದೂರು ನೀಡಿದೆ. ಸಿಬಂದಿಗಳು ನನ್ನನ್ನು ತಮ್ಮ ಆಸನ ಪ್ರದೇಶದಲ್ಲಿ ಕೂರಿಸಿ ಚಹಾ ಮತ್ತು ಹಣ್ಣುಗಳನ್ನು ನೀಡಿ ಸಮಾಧಾನಪಡಿಸಿದರು ” ಎಂದು X ಪ್ರೊಫೈಲ್ನಲ್ಲಿ ಹಾರ್ವರ್ಡ್ನಲ್ಲಿ ನಡೆದ ಭಾರತ ಸಮ್ಮೇಳನದ ಸಹ ಅಧ್ಯಕ್ಷೆ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.