TharunSonalTAKEOK; ನಿರ್ದೇಶಕನಿಗೆ ಜೀವನದ ನಾಯಕಿ ಸಿಕ್ಕಳು
Team Udayavani, Jul 22, 2024, 11:54 AM IST
ನಿರ್ದೇಶಕ ತರುಣ್ ಹಾಗೂ ನಟಿ ಸೋನಾಲ್ ಮೊಂತೆರೋ ಮದುವೆಯಾಗುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದಿನಿಂದ ಅಂತೆ ಕಂತೆಗಳು ನಡೆಯುತ್ತಿದೆ. ಈ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇದೀಗ ಸ್ವತಃ ತರುಣ್ ಅವರೇ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
ಸೋಮವಾರ (ಜುಲೈ 22) ತರುಣ್ ಸುಧೀರ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತರುಣ್ ಮತ್ತು ಸೋನಾಲ್ ಅವರ ಮುದ್ದಾದ ವಿಡಿಯೋದ ಜೊತೆಗೆ “ನಾನು ತರುಣ್, ನನ್ನ ನಾಯಕಿ ಸೋನಾಲ್ ಜೊತೆಗಿನ ನನ್ನ ಶ್ರೇಷ್ಠ ಪ್ರೇಮಕಥೆಯನ್ನು ನಿರ್ದೇಶಿಸುತ್ತಿದ್ದೇನೆ” ಎಂದು ಒಕ್ಕಣೆ ಬರೆದಿದ್ದಾರೆ.
#TharunSonalTAKEOK ಎಂದು ಹ್ಯಾಷ್ ಟ್ಯಾಗ್ ನೀಡಿದ್ದಾರೆ. ಅಂದಹಾಗೆ ತರುಣ್ ಮತ್ತು ಸೋನಾಲ್ ಮೊಂತೆರೋ ಅವರ ವಿವಾಹ ಆಗಸ್ಟ್ 11ರಂದು ನಡೆಯಲಿದೆ.
Tharun here, directing my greatest love story yet, with my leading lady, Sonal ♥️
ನಮ್ಮ ಕಥೆಯ ಶುಭಾರಂಭಕ್ಕೆ ನಿಮ್ಮ ಆಶೀರ್ವಾದವಿರಲಿ 🙏
11.08.2024 ✨#TharunSonalTAKEOK pic.twitter.com/04x8RU3VC2— Tharun Sudhir (@TharunSudhir) July 22, 2024
ರವಿವಾರ ಇವರಿಬ್ಬರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಮೊದಲ ಬಾರಿಗೆ ಊಹಾಪೋಹಗಳನ್ನು ತಣಿಸುವ ಕೆಲಸ ಮಾಡಿದ್ದರು. ತರುಣ್, “ಕೊನೆಗೂ ನಿರ್ದೇಶಕ ತನ್ನ ಜೀವನದ ನಾಯಕಿಯನ್ನು ಕಂಡು ಕೊಂಡರು’ ಎಂದು ಪೋಸ್ಟ್ ಮಾಡಿದ್ದಾರೆ. ಸೋನಾಲ್ ಕೂಡಾ “ಕೊನೆಗೂ ನಾಯಕಿ ತನ್ನ ಜೀವನದ ನಿರ್ದೇಶಕನನ್ನು ಕಂಡುಕೊಂಡಳು’ ಎಂದು ಪೋಸ್ಟ್ ಮಾಡಿದ್ದರು.
ತರುಣ್ ನಿರ್ದೇಶನ ಮಾಡಿದ್ದ ರಾಬರ್ಟ್ ಸಿನಿಮಾದಲ್ಲಿ ಸೋನಾಲ್ ಮೊಂತೆರೋ ನಟಿಸಿದ್ದರು. ಮಂಗಳೂರು ಮೂಲದ ನಟಿ ಸೋನಾಲ್ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಮೊದಲು ತುಳು ಸಿನಿಮಾಗಳಲ್ಲಿ ನಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.