Budget: ನಮೋ 3.0.1 ಬಜೆಟ್ ಇಂದು; ದಾಖಲೆಯ 7ನೇ ಬಾರಿಗೆ ನಿರ್ಮಲಾ ಸೀತಾರಾಮನ್‌ರಿಂದ ಬಜೆಟ್
ಆದಾಯ ತೆರಿಗೆ, ಮೂಲಕೌರ್ಯ, ಸಬ್ಸಿಡಿ ಬಗ್ಗೆ ಕ್ರಾಂತಿಕಾರಿ ಘೋಷಣೆ ನಿರೀಕ್ಷೆ
Team Udayavani, Jul 23, 2024, 7:15 AM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಗಳವಾರ (ಜು.23) ಮಂಡನೆಯಾಗಲಿದೆ. 7ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆ ಬರೆ ಯಲಿದ್ದಾರೆ. ಲೋಕಸಭೆ ಚುನಾವಣೆ ಪೂರ್ವ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಲಾಗಿತ್ತು.
ಮಂಗಳವಾರ ಮಂಡನೆಯಾಗಲಿರುವ ಬಜೆಟ್ ಬಗ್ಗೆ ಜನಸಾಮಾನ್ಯನಿಂದ ಹಿಡಿದು ಉದ್ಯಮಪತಿಗಳವರೆಗೂ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಪ್ರಧಾನಿ ಮೋದಿ ಅವರು ಈ ಬಜೆಟ್ ತಮ್ಮ ಸರ್ಕಾರದ ಮುಂದಿನ 5 ವರ್ಷಗಳ ದಿಕ್ಸೂಚಿಯಾಗಲಿದೆ. ಅಲ್ಲದೇ, 2047ರ ವಿಕಸಿತ ಭಾರತದ ಗುರಿಗೆ ಅಡಿಪಾಯ ಒದಗಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮೂಲಸೌಕರ್ಯ ಅದರಲ್ಲೂ ರಸ್ತೆ ಮತ್ತು ರೈಲು ಮಾರ್ಗಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡುವ ಸಾಧ್ಯತೆಗಳಿವೆ. ಮಧ್ಯಮವರ್ಗದ ತೆರಿಗೆದಾರರು ತೆರಿಗೆ ವಿನಾಯ್ತಿ ಮಿತಿ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ.
11 ಗಂಟೆಗೆ ಬಜೆಟ್ ಮಂಡನೆ:
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ನಿರ್ಮಲಾ ಸೀತಾರಾಮನ್ ಅವರ ಸತತ 7ನೇ ಬಜೆಟ್ ಮಂಡನೆ ಇದಾಗಿದೆ.
ಈ ಹಿಂದೆ ಸತತವಾಗಿ 6 ಬಾರಿ ಬಜೆಟ್ ಮಂಡಿ ಸುವ ಮೂಲಕ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಮಂಗಳವಾರ ನಿರ್ಮಲಾ ಮುರಿಯಲಿದ್ದಾರೆ. ಇನ್ನು, ಒಟ್ಟಾರೆಯಾಗಿ ಅತಿ ಹೆಚ್ಚು ಬಜೆಟ್ ಮಂಡಿಸಿದವರ ಪಟ್ಟಿಯಲ್ಲೂ ಮೊರಾರ್ಜಿ ದೇಸಾಯಿ ಅವರಿದ್ದು, 10 ಬಾರಿ ಬಜೆಟ್ ಮಂಡಿಸಿದ್ದಾರೆ.
ನಂತರದ ಸ್ಥಾನದಲ್ಲಿ ಪಿ.ಚಿದಂಬರಂ 9, ಪ್ರಣಬ್ ಮುಖರ್ಜಿ 8, ಯಶವಂತ್ ಸಿನ್ಹಾ, ಯಶವಂತರಾವ್ ಚವಾಣ್, ಸಿ.ಡಿ.ದೇಶಮುಖ್ 7 ಬಾರಿ ಬಜೆಟ್ ಮಂಡಿಸಿದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಮಾಜಿ ವಿತ್ತ ಸಚಿವ ಟಿ.ಟಿ. ಕೃಷ್ಣಮಾಚಾರಿ 6 ಬಾರಿ ಬಜೆಟ್ ಮಂಡಿಸಿದ್ದರು.
ಲೋಕಸಭೆಯಲ್ಲಿ ಬಜೆಟ್ ಚರ್ಚೆಗೆ 20 ಗಂಟೆ ಮೀಸಲು:
ಮಂಗಳವಾರ ಮಂಡನೆಯಾಗಲಿರುವ ಬಜೆಟ್ ಚರ್ಚೆಗೆ 20 ಗಂಟೆ ಮೀಸಲಿಡಲು ಲೋಕಸಭೆ ಕಲಾಪ ವ್ಯವಹಾರ ಸಮಿತಿ ನಿರ್ಧರಿಸಿದೆ. ಈ ವೇಳೆ, ರೈಲ್ವೆ, ಶಿಕ್ಷಣ, ಆರೋಗ್ಯ, ಎಂಎಸ್‌ಎಂಇ(ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ), ಆಹಾರ ಸಂಸ್ಕರಣೆ ಇತ್ಯಾದಿ ವಲಯಗಳ ಕುರಿತು ಚರ್ಚಿಸಲಾಗುತ್ತದೆ.
ನಿರೀಕ್ಷೆಗಳೇನು?
– ಸ್ಟಾಂಡರ್ಡ್ ಡಿಡಕ್ಷನ್ 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಹೆಚ್ಚಳ ಸಾಧ್ಯತೆ
– ಗೃಹ ಸಾಲದ ಬಡ್ಡಿ ತೆರಿಗೆ ವಿನಾಯ್ತಿ 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಳ
– ವಿತ್ತೀಯ ಕೊರತೆಯನ್ನು ಶೇ.5ಕ್ಕೆ ಇಳಿಸುವ ನಿರೀಕ್ಷೆ. ಈಗ ಅದು ಶೇ.5.1ರಷ್ಟಿದೆ.
– ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ತೆರಿಗೆ ವಿನಾಯ್ತಿ
– ಅಕ್ಕಿ, ಗೋಧಿ, ಸಕ್ಕರೆ ಮತ್ತು ಈರುಳ್ಳಿ ರಫ್ತು ಮೇಲಿನ ನಿರ್ಬಂಧ ತೆರವು
– ವಿದ್ಯುತ್‌ಚಾಲಿತ ವಾಹನಗಳ ಉದ್ಯಮದಿಂದ ಜಿಎಸ್‌ಟಿ ಸುಧಾರಣೆ ನಿರೀಕ್ಷೆ
– ಡೆವಲಪರ್ಸ್‌ಗೆ ನೆರವಾಗುವ ನೀತಿ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ
– ಉತ್ಪಾದನಾ ವಲಯಕ್ಕೆ ಸರ್ಕಾರದ ನೀಡುವ ಉತ್ತೇಜನಾ ಕ್ರಮಗಳು ಮುಂದುವರಿಕೆ
– ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನರೇಗಾ ವೇತನ ಹೆಚ್ಚಳ ಸಾಧ್ಯತೆ
ವಿಕಸಿತ ಭಾರತಕ್ಕೆ ಅಡಿಪಾಯ ಅಮೃತ ಕಾಲದ ಈ ಬಜೆಟ್ ಮಹತ್ವದ್ದಾಗಿದ್ದು, ಮುಂದಿನ 5 ವರ್ಷಗಳ ನಮ್ಮ ಸರ್ಕಾರದ ದಿಕ್ಸೂಚಿಯಾಗಿರಲಿದೆ. ಜತೆಗೆ, ನಮ್ಮ ಸರ್ಕಾರದ ವಿಕಸಿತ ಭಾರತ ಕನಸಿಗೆ ಗಟ್ಟಿಯಾದ ಅಡಿಪಾಯ ಹಾಕಲಿದೆ.
– ನರೇಂದ್ರ ಮೋದಿ, ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.