![1-prayag](https://www.udayavani.com/wp-content/uploads/2025/02/1-prayag-415x248.jpg)
![1-prayag](https://www.udayavani.com/wp-content/uploads/2025/02/1-prayag-415x248.jpg)
Team Udayavani, Jul 23, 2024, 7:15 AM IST
ಬೆಂಗಳೂರು: ರಾಜ್ಯದ ಇತರ ಭಾಗಗಳಿಂದ ಕರಾವಳಿಯನ್ನು ಸಂಪರ್ಕಿಸುವ 7 ಘಾಟಿ ರಸ್ತೆಗಳು ಪ್ರತೀ ಮಳೆಗಾಲದಲ್ಲಿ ಕುಸಿದು ಸಂಚಾರ ಬಂದ್ ಆಗುತ್ತಿದ್ದು ಸಂಚಾರ ವ್ಯತ್ಯಯ ತಪ್ಪಿಸಲು ಇದುವರೆಗೂ ಯಾವುದೇ ಮಾಸ್ಟರ್ ಪ್ಲ್ರಾನ್ ರೂಪಿಸಿಲ್ಲ ಎಂದು ಬಿಜೆಪಿಯ ಕೆ. ಪ್ರತಾಪ ಸಿಂಹ ನಾಯಕ್ ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉತ್ತರಿಸಿ, ಕರಾವಳಿಯ ಹೆದ್ದಾರಿಗಳ ಬಗ್ಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಎಂಜಿನಿಯರ್‌ಗಳ ಜತೆ ಸಭೆಯೊಂದನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು. ರಸ್ತೆ ವಿಚಾರದಲ್ಲಿ ಪ್ರತಾಪ್‌ಸಿಂಹ ಜತೆಗೆ ಕರಾವಳಿ ಶಾಸಕರಾದ ಐವನ್ ಡಿ’ಸೋಜಾ, ಬಿ.ಕೆ.ಹರಿಪ್ರಸಾದ್, ಭೋಜೇ ಗೌಡ, ಮಂಜುನಾಥ ಭಂಡಾರಿ ಪಕ್ಷಾತೀತವಾಗಿ ಧ್ವನಿ ಗೂಡಿಸಿದರು.
ಜಪಾನ್, ಕೊರಿಯಾದವರಿಂದ ಮಂಗಳೂರು ರಸ್ತೆ ಬಗ್ಗೆ ಆತಂಕ!
ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಮಾತನಾಡಿ, ನಾನು ಇತ್ತೀಚೆಗೆ ಬಂಡವಾಳ ಸೆಳೆಯಲು ರಾಜ್ಯದ ಉನ್ನತ ಮಟ್ಟದ ನಿಯೋಗದೊಂದಿಗೆ ಜಪಾನ್, ದಕ್ಷಿಣ ಕೊರಿಯಾಕ್ಕೆ ಪ್ರವಾಸ ಹೋಗಿದ್ದೆ. ಅಲ್ಲಿ ಹಲವು ಕಂಪೆನಿಗಳು ಮಂಗಳೂರು ಬಂದರಿಗೆ ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದವು. ನಾವು ಬಂದರಿಗೆ ಚೆನ್ನೈಯನ್ನು ಅವಲಂಬಿಸಬೇಕು ಎಂದು ಹೇಳಿರುವುದು ರಾಜ್ಯಕ್ಕೆ ಬಂಡವಾಳ ಸೆಳೆಯಲು ಸಮಸ್ಯೆ ಆಗುತ್ತಿರುವುದಕ್ಕೆ ಒಂದು ಕಾರಣ ಎನ್ನಬಹುದು ಎಂದರು.
You seem to have an Ad Blocker on.
To continue reading, please turn it off or whitelist Udayavani.