Incentives Proposal: ಹೈನುಗಾರರ ಪ್ರೋತ್ಸಾಹಧನ 5 ರೂ. ಏರಿಕೆ ಪ್ರಸ್ತಾವನೆ

ಹೈನುಗಾರರ ಉತ್ತೇಜನಕ್ಕೆ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಯತ್ನ

Team Udayavani, Jul 23, 2024, 1:31 AM IST

DK-Nandini

ಮಂಗಳೂರು: ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕುಂಠಿತವಾಗುತ್ತಿರುವ ಹೈನುಗಾರಿಕೆಯನ್ನು ಉತ್ತೇಜಿಸಲು ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ನೀಡಲು ಒಪ್ಪಿಗೆ ಸೂಚಿಸುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ ತಿಳಿಸಿದ್ದಾರೆ.

ಹಾಲು ಒಕ್ಕೂಟ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಹೈನುಗಾರರಿಗೆ ಲೀಟರ್‌ಗೆ ಕನಿಷ್ಠ 35 ರೂ. ಹಾಗೂ ರಾಜ್ಯ ಸರಕಾರದ ಸಬ್ಸಿಡಿ ಮೊತ್ತ 5 ರೂ. ಸೇರಿ ಒಟ್ಟು 40 ರೂ. ನೀಡಲಾಗುತ್ತಿದೆ ಎಂದರು.
ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ದಿನಕ್ಕೆ ಸರಾಸರಿ 3,91,367 ಲೀ. ಹಾಲು ಉತ್ಪಾದನೆಯಾಗುತ್ತಿದ್ದು ಕೊರತೆ ಸರಿದೂಗಿಸಲು ಹೊರ ಜಿಲ್ಲೆಗಳಿಂದ 1 ಲಕ್ಷ ಲೀಟರ್‌ ಹಾಲು ಖರೀದಿಸಲಾಗುತ್ತಿದೆ. ಇತರ ಜಿಲ್ಲೆಗೆ ಹೋಲಿಸಿ ದರೆ ನಮ್ಮಲ್ಲಿ ಉತ್ಪಾದನ ವೆಚ್ಚವೂ ಅಧಿಕ. ಅದಕ್ಕಾಗಿ ಮತ್ತೆ 5 ರೂ. ಮೊತ್ತವನ್ನು ಹೆಚ್ಚುವರಿಯಾಗಿ ಹೈನುಗಾರರಿಗೆ ನೀಡಿದರೆ ಮಾತ್ರ ಹಾಲು ಉತ್ಪಾದನೆ ಹೆಚ್ಚಳ ನಿರೀಕ್ಷಿಸಬಹುದು ಎಂದರು.

ಆ.1ರಿಂದ ಪಶು ಆಹಾರಕ್ಕೆ 25 ರೂ. ಸಬ್ಸಿಡಿ
ನಂದಿನಿ ಪಶು ಆಹಾರ ಚೀಲಕ್ಕೆ 1,350 ರೂ. ದರವಿದ್ದು, ಆಗಸ್ಟ್‌ 1ರಿಂದ ಹೈನುಗಾರರಿಗೆ ಪ್ರತಿ ಚೀಲಕ್ಕೆ 25 ರೂ. ಸಬ್ಸಿಡಿ ನೀಡಲಿದೆ. ಇದರಿಂದಾಗಿ ಒಕ್ಕೂಟಕ್ಕೆ 30 ಲಕ್ಷ ರೂ. ಹೊರೆಯಾಗಲಿದೆ. ಇದಲ್ಲದೆ ಪಶು ಸಾಕಣೆ, ಮೇವು ಮುಂತಾದವುಗಳಿಗೆ ಸಬ್ಸಿಡಿ ಯೋಜನೆ, ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಶೂನ್ಯಬಡ್ಡಿ ಸಾಲ ಒದಗಿಸಲಾಗುತ್ತಿದೆ ಎಂದರು.

ಪುತ್ತೂರಿನ ಕೊಟೆಚಾ ಹಾಲ್‌ ಬಳಿ 15 ಎಕ್ರೆ ಜಾಗ ವನ್ನು ಒಕ್ಕೂಟದ ಚಟುವಟಿಕೆಗೆ ಕಾದಿರಿಸಲಾಗು ತ್ತಿದೆ. ಇದರಲ್ಲಿ ಹಾಲಿನ ಮಿನಿ ಡೇರಿ, ಗೋದಾಮು ನಿರ್ಮಾಣ, ಹಸುರು ಹುಲ್ಲು ಬೆಳೆಸಲು ಅವಕಾಶ ಇದೆ. ಕೊಯ್ಲ ಪಶು ಸಂಗೋಪನೆ ಕ್ಷೇತ್ರದಲ್ಲಿ 20 ಎಕ್ರೆಯನ್ನು ಹಾಲು ಒಕ್ಕೂಟಕ್ಕೆ ಹಸುರು ಹುಲ್ಲು ಬೆಳೆಸಲು ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದರು.

ಹೆಗ್ಗಡೆಯವರಿಗೆ ಮನವಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೃಷಿ ಮತ್ತು ಹೈನುಗಾರಿಗೆ 20 ಕೋ. ರೂ.ಗಳ ಯೋಜನೆ ರೂಪಿಸಿರು ವುದಾಗಿ ತಿಳಿದುಬಂದಿದೆ. ಇದರಲ್ಲಿ ದ.ಕ.ಜಿಲ್ಲೆಯನ್ನೂ ಪರಿಗಣಿಸುವಂತೆ ಡಾ| ವೀರೇಂದ್ರ ಹೆಗ್ಗಡೆ ಅವರನ್ನು ಕೇಳಿಕೊಳ್ಳಲಾಗುವುದು ಎಂದರು.

ಗೋವರ್ಧನ ಯೋಜನೆ: ಕೇಂದ್ರ ಸರಕಾರದ ಗೋವರ್ಧನ ಯೋಜನೆಯಡಿ 200 ದನಗಳನ್ನು ಸಾಕಲು 4 ಕೋ. ರೂ. ಬೇಕಾಗಿದ್ದು, ಶೇ.50ನ್ನು ಸರಕಾರ, ಶೇ.50ನ್ನು ಹೈನುಗಾರರೇ ಭರಿಸಬೇಕು. ಇದು ದೊಡ್ಡ ಯೋಜನೆಯಾಗಿರುವುದರಿಂದ ನಿಯಮ ಸಡಿ ಲಿಸಿ 1 ಕೋ. ರೂ.ಗೆ ಇಳಿಸಿದರೆ 50 ಲಕ್ಷ ರೂ. ಮೊತ್ತ ಪಾವತಿಸಲು ಹೈನುಗಾರರು ಸಿದ್ಧರಿದ್ದಾರೆ ಎಂದರು.

ಉಪಾಧ್ಯಕ್ಷ ಎಸ್‌.ಬಿ.ಜಯರಾಮ ರೈ ಬಳಜ, ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ನಾರಾಯಣ ಪ್ರಕಾಶ್‌, ಪದ್ಮನಾಭ ಶೆಟ್ಟಿ, ಸುಧಾಕರ ರೈ, ಬೋಳ ಸದಾಶಿವ ಶೆಟ್ಟಿ, ನರಸಿಂಹ ಕಾಮತ್‌, ಕಮಲಾಕ್ಷ ಹೆಬ್ಟಾರ್‌, ಸವಿತಾ ಎನ್‌.ಶೆಟ್ಟಿ, ಸ್ಮಿತಾ ಆರ್‌.ಶೆಟ್ಟಿ, ಸುಭದ್ರಾ ರಾವ್‌, ವ್ಯವಸ್ಥಾಪಕ ನಿರ್ದೇಶಕ ವಿವೇಕ್‌, ಮಾರುಕಟ್ಟೆ ಮುಖ್ಯಸ್ಥ ರವಿರಾಜ್‌ ಉಡುಪ ಉಪಸ್ಥಿತರಿದ್ದರು.

8.29 ಕೋ.ರೂ. ಲಾಭ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕಳೆದ ಸಾಲಿನಲ್ಲಿ 1,108.089 ಕೋಟಿ ರೂ. ವಹಿವಾಟು ನಡೆಸಿದ್ದು, 8.29 ಕೋ. ರೂ ನಿವ್ವಳ ಲಾಭ ಗಳಿಸಿದೆ.

ಸೈಲೇಜ್‌ಗೆ ಉತ್ತೇಜನ
ಮೆಕ್ಕೆ ಜೋಳವನ್ನು ಸಂಸ್ಕರಿಸಿ ಮೇವಿನ ಹುಲ್ಲು ಸೆ„ಲೇಜ್‌(ರಸ ಮೇವು)ಆಗಿ ಪರಿವರ್ತಿಸಲು ಹೈನು ಗಾರರಿಗೆ ಉತ್ತೇಜನ ನೀಡಲಾಗುತ್ತಿದೆ. ಕರಾವಳಿಯಲ್ಲಿ ಅಡಿಕೆ ತೋಟಗಳಲ್ಲೂ ಹಸುರು ಹುಲ್ಲು ಬೆಳೆಸಲು ಎಕ್ರೆಗೆ 10 ಸಾ. ರೂ. ಸಬ್ಸಿಡಿ ನೀಡಲಾಗುತ್ತದೆ. 40 ಸಾವಿರ ರಾಸುಗಳಿಗೆ 3.7 ಕೋಟಿ ರೂ.ಗಳ ವಿಮೆ ಮೊತ್ತ ಭರಿಸಲಾಗುತ್ತಿದೆ ಎಂದು ಸುಚರಿತ ಶೆಟ್ಟಿ ಹೇಳಿದರು.

ಟಾಪ್ ನ್ಯೂಸ್

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Suside-Boy

Putturu: ವೃದ್ಧನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.