Mangaluru University: ಕ್ರೀಡಾಕೂಟ ಆಯೋಜನೆಗೆ ಕಾಲೇಜುಗಳು ಹಿಂದೇಟು
ವಿವಿಯಿಂದ ಪಾವತಿಯಾಗದ ಕ್ರೀಡಾ ಶುಲ್ಕ, ಪ್ರತಿಯೊಬ್ಬ ವಿದ್ಯಾರ್ಥಿಯಿಂದ 700 ರೂ. ಸಂಗ್ರಹ
Team Udayavani, Jul 23, 2024, 1:40 AM IST
ಉಡುಪಿ: ಕಾಲೇಜು ದಾಖಲಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಕ್ರೀಡಾ ಶುಲ್ಕ ಸಂಗ್ರಹಿಸುವ ಮಂಗಳೂರು ವಿಶ್ವವಿದ್ಯಾ ನಿಲಯವು, ಕಾಲೇಜುಗಳು ಕ್ರೀಡಾಕೂಟ ಆಯೋಜನೆ ಮಾಡಿದರೂ ಮೂರು ವರ್ಷ ಗಳಿಂದ ಶುಲ್ಕ ಪಾವತಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ ಕ್ರೀಡಾಕೂಟ ಆಯೋಜನೆಗೆ ಕಾಲೇಜುಗಳು ಹಿಂದೇಟು ಹಾಕುವ ಸ್ಥಿತಿ ಬಂದಿದೆ.
ಸರಕಾರಿ ಕಾಲೇಜುಗಳಲ್ಲಿ 2023-24ನೇ ಸಾಲಿನಲ್ಲಿ ಕ್ರೀಡಾ ಶುಲ್ಕವಾಗಿ 700 ರೂಪಾಯಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯಿಂದಲೂ ಪಡೆಯಲಾಗುತ್ತಿತ್ತು. ಇದರಲ್ಲಿ 200 ರೂ.ಗಳನ್ನು ಕಾಲೇಜಿನ ಕ್ರೀಡಾ ಚಟುವಟಿಕೆಗಳಿಗೆ ವಿನಿಯೋಗಿಸಿ 500 ರೂ.ಗಳನ್ನು ಮಂಗಳೂರು ವಿವಿಯ ಕ್ರೀಡಾ ಖಾತೆಗೆ ಕಳುಹಿಸಲಾಗುತ್ತದೆ. 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 700 ರೂ.ಸಂಗ್ರಹಿಸಿದ್ದು, ಅದರಲ್ಲಿ 100 ರೂ.ಗಳನ್ನು ಕಾಲೇಜುಗಳು ಇರಿಸಿಕೊಂಡು ಉಳಿದ ಮೊತ್ತವನ್ನು ವಿವಿಗೆ ನೀಡಬೇಕು. ಅನುದಾನಿತ ಕಾಲೇಜುಗಳು 500 ರೂ.ಗಳನ್ನು ವಿವಿಗೆ ನೀಡಬೇಕು.
ವಿನಿಯೋಗ ಹೇಗೆ?
ಕಾಲೇಜುಗಳು ಸಂಗ್ರಹಿಸುವ 200 ರೂ.ಗಳನ್ನು ಕಾಲೇಜು ಕ್ರೀಡಾಕೂಟ, ಕ್ರೀಡಾ ಸಲಕರಣೆ, ಕಾಲೇಜು ಟಿ ಶರ್ಟ್ ಖರೀದಿ ಇತ್ಯಾದಿಗಳಿಗೆ ಬಳಸಲಾಗುತ್ತದೆ. ಅಂತರ್‌ಕಾಲೇಜು ಹಾಗೂ ಅಂತರ್‌ವಿವಿ ಕ್ರೀಡಾಕೂಟಗಳನ್ನು ಆಯೋಜಿಸುವ ಕಾಲೇಜುಗಳಿಗೆ ಹಾಗೂ ಆ ಕ್ರೀಡಾ ಕೂಟಗಳಲ್ಲಿ ಭಾಗವಹಿಸು ವವರ ಭತ್ತೆಗಳನ್ನು ವಿವಿ ನೀಡಬೇಕು. ಅಂತರ್‌ಕಾಲೇಜು ಮಟ್ಟದ ಕ್ರಿಕೆಟ್, ವಾಲಿ ಬಾಲ್‌ನಂತಹ ಕ್ರೀಡೆಗಳನ್ನು ಆಯೋಜಿಸುವ ಕಾಲೇಜುಗಳಿಗೆ 30 ರಿಂದ 35 ಸಾವಿರ ರೂ., ಫುಟ್ಬಾಲ್‌ಗೆ
50 ಸಾವಿರ ರೂ.ಗಳನ್ನು ವಿವಿ ನೀಡುತ್ತದೆ. ಆ್ಯತ್ಲೆಟಿಕ್ಸ್ ಆಯೋಜನೆ ಮಾಡಿದರೆ 2 ಲ.ರೂ.ಗಳನ್ನು ಮೊತ್ತವನ್ನು ವಿವಿ ನೀಡುತ್ತದೆ.
200ಕ್ಕೂ ಅಧಿಕ ಕಾಲೇಜು
ಮಂಗಳೂರು ವಿವಿ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಕಾಲೇಜುಗಳಿದ್ದು, ಈ ಕಾಲೇಜುಗಳಿಂದ ವಾರ್ಷಿಕ ಸುಮಾರು 5ರಿಂದ 7 ಕೋಟಿ ರೂ.ಗಳಷ್ಟು ಸಂಗ್ರಹವಾಗುತ್ತಿದೆ. 3 ವರ್ಷಗಳಿಗೂ ಹಿಂದೆ ಅಂತರ್ ವಿವಿ ಕ್ರೀಡಾಕೂಟಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಿಬಂದಿಗೆ ಮುಂಗಡ ಹಣವನ್ನು ವಿವಿ ಪಾವತಿಸುತ್ತಿತ್ತು. ಪ್ರಸ್ತುತ ಕಾಲೇಜಿನ ಹಣಕಾಸು ನೆರವಿನಿಂದಲೇ ವಿದ್ಯಾರ್ಥಿಗಳು ತೆರಳುವಂತಾಗಿದೆ. ಇದರ ಖರ್ಚುವೆಚ್ಚಗಳ ಬಗೆಗಿನ ಮಾಹಿತಿಯನ್ನು ಕಾಲೇಜುಗಳು ವಿವಿಗೆ ಸಲ್ಲಿಸಿದರೂ ಅದು ಸಿಗಲು ಕನಿಷ್ಠ 1 ವರ್ಷಗಳಷ್ಟು ಕಾಲ ಕಾಯಬೇಕು ಎಂಬುದು ದೈಹಿಕ ಶಿಕ್ಷಣ ಶಿಕ್ಷಕರೊಬ್ಬರ ಅನಿಸಿಕೆ.
ಸೂಕ್ತ ವ್ಯವಸ್ಥೆ
” ಹಣಕಾಸು ಕೊರತೆ ಇರುವ ಕಾರಣ ಕೆಲವು ಸಮಯಗಳಿಂದ ಕ್ರೀಡಾನಿಧಿ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈಗಾಗಲೇ ಬಂದಿರುವ ಬಿಲ್‌ಗಳು ಹಾಗೂ ಒಟ್ಟು ಮೊತ್ತವನ್ನು ಪರಿಶೀಲಿಸಿ ಅದನ್ನು ನೀಡುವ ವ್ಯವಸ್ಥೆ ಮಾಡಲಾಗುವುದು.” -ಪ್ರೊ| ಪಿ.ಎಲ್.ಧರ್ಮ, ಉಪಕುಲಪತಿ, ಮಂಗಳೂರು ವಿವಿ
– ಪುನೀತ್ ಸಸಿಹಿತ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡ ‘ಸುಲ್ತಾನ್ ಪುರ’… ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ
Katapady: ಲಾರಿಗೆ ಟೂರಿಸ್ಟ್ ವಾಹನ ಢಿಕ್ಕಿ; ಹಲವು ಪ್ರವಾಸಿಗರಿಗೆ ಗಂಭೀರ ಗಾಯ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.