Jammu: ಒಳನುಸುಳುವಿಕೆ ಯತ್ನ ವಿಫಲ ಗೊಳಿಸಿದ ಸೇನೆ… ಓರ್ವ ಯೋಧನಿಗೆ ಗಾಯ
Team Udayavani, Jul 23, 2024, 10:38 AM IST
ಶ್ರೀನಗರ: ಮಂಗಳವಾರ (ಜುಲೈ 23) ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಬಟ್ಟಲ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಭಯೋತ್ಪಾದಕರ ಒಳನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಒಳನುಸುಳುತ್ತಿದ್ದ ಭಯೋತ್ಪಾದಕರನ್ನು ತಡೆಯುವ ಯತ್ನ ಮಾಡಿದರೂ ಲೆಕ್ಕಿಸದೆ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾಗಿದ್ದಾರೆ ಈ ವೇಳೆ ಸೇನೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದೆ ಉಗ್ರರೊಂದಿಗಿನ ಭಾರೀ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾ ಯೋಧ ಗಾಯಗೊಂಡಿದ್ದಾರೆ. ಸದ್ಯ ಬತ್ತಲ್ ಸೆಕ್ಟರ್ ನಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ವೈಟ್ ನೈಟ್ ಕಾರ್ಪ್ಸ್, “ಬೆಳಿಗ್ಗೆ 3.00 ಗಂಟೆಗೆ ಬಟ್ಟಲ್ ಸೆಕ್ಟರ್‌ನಲ್ಲಿ ನುಸುಳುಕೋರರ ತಂಡ ಗಡಿ ಭಾಗದಲ್ಲಿ ಒಳ ನುಸುಳಲು ಯತ್ನಿಸಿದ್ದು ಈ ವೇಳೆ ಗುಂಡಿನ ದಾಳಿ ನಡೆಸಿ ಒಳನುಸುಳುವ ಯತ್ನವನ್ನು ವಿಫಲಗೊಳಿಸಿದೆ. ಭಾರೀ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ. ಪ್ರಸ್ತುತ ಕಾರ್ಯಾಚರಣೆ ನಡೆಯುತ್ತಿದೆ.”
ಎಂದು ಟ್ವೀಟ್ ಮಾಡಿದ್ದಾರೆ.
24 ಗಂಟೆಗಳಲ್ಲಿ ಎರಡನೇ ಎನ್‌ಕೌಂಟರ್
ಸೋಮವಾರ (ಜುಲೈ 22) ರಜೌರಿ ಜಿಲ್ಲೆಯ ಮಿಲಿಟರಿ ಪೋಸ್ಟ್ ಅನ್ನು ಗುರಿಯಾಗಿಸಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು ಇದಾದ ಬಳಿಕ ಮಂಗಳವಾರ ಮುಂಜಾನೆ ಎರಡನೇ ಬಾರಿ ಗುಂಡಿನ ದಾಳಿ ನಡೆದಿದೆ.
Op BATTAL
Alert troops foiled an #infiltration bid by effectively engaging infiltrating #terrorists with effective fire in the #Battal Sector at 0300h.
During the exchange of heavy fire, one braveheart has been injured.
Operations are continuing.@adgpi@NorthernComd_IA— White Knight Corps (@Whiteknight_IA) July 23, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.