![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 23, 2024, 8:21 PM IST
ಹೊಸದಿಲ್ಲಿ: ದೇಶದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ)ಅನ್ವಯ ಪಡೆಯುವ ಸಾಲದ ಮಿತಿಯನ್ನು ಪರಿಷ್ಕರಿಸಲಾಗಿದೆ. ಮುದ್ರಾದ “ತರುಣ ವರ್ಗ’ದ ಅನ್ವಯ ನೀಡಲಾಗುವ ಸಾಲದ ಮಿತಿಯನ್ನು 10ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಉದ್ಯಮಿಗಳಿಗೆ ಕೇಂದ್ರ ಬಜೆಟ್‌ನಲ್ಲಿ ಸಿಹಿ ನೀಡಲಾಗಿದೆ.
ಮುದ್ರಾ ಯೋಜನೆಯಲ್ಲಿ 3 ವರ್ಗದಲ್ಲಿ (ಕ್ಯಾಟಗರಿಯಲ್ಲಿ) ಸಾಲಗಳನ್ನು ನೀಡಲಾಗುತ್ತದೆ. ಈ ಪೈಕಿ ತರುಣ ವರ್ಗದ ಅನ್ವಯ ನೀಡಲಾಗುತ್ತಿದ್ದ ಸಾಲದ ಮಿತಿ ಈ ಹಿಂದೆ 5ರಿಂದ 10 ಲಕ್ಷ ರೂ.ಗಳ ವರೆಗಿತ್ತು. ಇದೀಗ ಇದೇ ವರ್ಗದಲ್ಲಿ ಈ ಹಿಂದೆ ಸಾಲ ಪಡೆದು, ಯಸ್ವಿಯಾಗಿ ಮರುಪಾವತಿಸಿದ ಉದ್ಯಮಿಗಳು ಹೊಸದಾಗಿ 20 ಲಕ್ಷ ರೂ.ಗಳವರೆಗೆ ಸಾಲ ಪಡೆಯಬಹುದಾಗಿದೆ. ಈ ಮೂಲಕ ಉದ್ಯಮ ವಿಸ್ತರಣೆಗೆ ಕೇಂದ್ರದಿಂದ ಹೆಚ್ಚಿನ ಬೆಂಬಲ ಸಿಕ್ಕಂತಾಗಿದೆ. ಉಳಿದಂತೆ ಶಿಶು ಹಾಗೂ ಕಿಶೋರ ವರ್ಗದ ಸಾಲದ ಮಿತಿಗಳು ಹಾಗೆಯೇ ಮುಂದುವರಿದಿವೆ. ಶಿಶು ವರ್ಗದಲ್ಲಿ 50,000ರೂ.ಗಳವರೆಗೆ ಸಾಲ ಪಡೆಯಬಹುದಾಗಿದ್ದು, ಕಿಶೋರ ವರ್ಗದಲ್ಲಿ 50 ಸಾವಿರದಿಂದ 5 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಪಿಎಂಎಂವೈ ಅನ್ವಯ ಬ್ಯಾಂಕುಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್ಸಿಎಸ್), ಸಣ್ಣ ಹಣಕಾಸು ಸಂಸ್ಥೆಗಳು (ಎಂಎಫ್ಐಎಸ್) ಹಾಗೂ ಇತರ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಏನಿದು ಮುದ್ರಾ ಯೋಜನೆ ?: ಕಾರ್ಪೋರೇಟ್ ಅಲ್ಲದ ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮಉದ್ಯಮಿಗಳಿಗೆ ಮೇಲಾಧಾರ ರಹಿತ ಸಾಲವನ್ನು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ 2015ರ ಏಪ್ರಿಲ್ 8ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದರು. ಕಡಿಮೆ ಬಡ್ಡಿದರದಲ್ಲಿ ದೊರೆಯುವ ಈ ಸಾಲ ಸೌಲಭ್ಯದಿಂದ ಹೊಸದಾಗಿ ಉದ್ಯಮ ಆರಂಭಿಸಲು ಅಥವಾ ಅಸ್ತಿತ್ವದಲ್ಲಿರುವ ಉದ್ಯಮದ ವಿಸ್ತರಣೆಗೆ ಅನುಕೂಲವಾಗಲಿದೆ.
ಮುದ್ರಾದಿಂದ ಮಹಿಳಾ ಸಬಲೀಕರಣ: 2024ರ ಫೆಬ್ರವರಿವರೆಗೆ ಮುದ್ರಾ ಯೋಜನೆ ಅನ್ವಯ 22.5 ಲಕ್ಷ ಕೋಟಿ ರೂ.ಮೊತ್ತದ ಒಟ್ಟು 43 ಕೋಟಿ ಸಾಲಗಳನ್ನು ನೀಡಲಾಗಿದೆ. ಈ ಪೈಕಿ 30 ಕೋಟಿ ಸಾಲಗಳನ್ನು ಮಹಿಳೆಯರಿಗೇ ನೀಡಲಾಗಿದೆ. ಮಹಿಳೆಯರು ಹೊಸದಾಗಿ ಉದ್ಯಮಗಳನ್ನು ಆರಂಭಿಸಲು ಅಗತ್ಯವಿರುವ ಸಾಲ ಸೌಲಭ್ಯ ಒದಗಿಸುವ ಮೂಲಕ ಮಹಿಳಾ ಉದ್ಯಮಿಗಳನ್ನು ಸೃಷ್ಟಿಸುವುದರ ಜತೆಯೆಲ್ಲೇ ಉದ್ಯೋಗ ಅವಕಾಶಗಳನ್ನೂ ಮುದ್ರಾ ಯೋಜನೆ ಮೂಲಕ ಸೃಷ್ಟಿಸಲಾಗುತ್ತಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.