Budget 2024; ದೇಸಿ ವಸ್ತುಗಳ ರಫ್ತು ಉತ್ತೇಜನಕ್ಕೆ ಇ-ಕಾಮರ್ಸ್ ಹಬ್ ಸ್ಥಾಪನೆ
8.37 ಲಕ್ಷ ಕೋಟಿ ರೂ.ರಫ್ತು ಗುರಿ
Team Udayavani, Jul 24, 2024, 1:48 AM IST
ಹೊಸದಿಲ್ಲಿ: ದೇಶಿಯ ಕುಶಲ ಕರ್ಮಿಗಳ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆಗಳಲ್ಲೂ ಮಾರಾಟ ಮಾಡುವುದಕ್ಕೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ರಫ್ತು ಉತ್ತೇಜನಕ್ಕಾಗಿ ಸಾರ್ವಜನಿಕ-ಖಾಸಗಿ-ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಇ -ಕಾಮರ್ಸ್ ಹಬ್ ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿದೆ.
ಈಗಾಗಲೇ ಇ-ಕಾಮರ್ಸ್ ಸೇವೆಗಳ ಮೂಲಕ ದೇಶದಲ್ಲಿ 5 ಬಿಲಿಯನ್ ಡಾಲರ್ ಮೌಲ್ಯದ ಸರ ಕು ಗ ಳನ್ನು ರಫ¤ನ್ನು ಮಾಡಲಾಗುತ್ತಿದೆ. ಆದರೆ, ಚೀನಾದಲ್ಲಿ ಈ ಪ್ರಮಾಣ 300 ಬಿಲಿಯನ್ ಡಾಲರ್‌ಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲ ವರ್ಷದಲ್ಲಿ ಇ-ಕಾಮರ್ಸ್ ವೇದಿಕೆಗಳ ಮೂಲಕವೇ 50-100 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಹೆಚ್ಚಿಸಲು ಯೋಜಿಸಲಾಗಿದೆ. ಇದಕ್ಕಾಗಿ ಸರಕು ಸೇವಾ ಚೌಕಟ್ಟಿನ ಅನ್ವಯ ಒಂದೇ ಸೂರಿನಡಿಯಲ್ಲಿ ದೇಶದ ರಫ್ತು ಸಂಬಂಧಿತ ಸೇವೆಗಳನ್ನು ತರುವುದಾಗಿ ಕೇಂದ್ರಸರ್ಕಾರ ತಿಳಿಸಿದೆ. ಇ- ಕಾಮರ್ಸ್ ಹಬ್‌ಗಳ ಮೂಲಕ ಸಣ್ಣ ಪುಟ್ಟ ವಸ್ತುಗಳನ್ನು (ಕರಕುಶಲ ವಸ್ತುಗಳು, ಆಭರಣಗಳನ್ನು ) ರಫ್ತು ಮಾಡಬಹುದಾಗಿದೆ.
ಇ-ಕಾಮರ್ಸ್ ಇತ್ತೀಚಿನ ವರ್ಷಗಳಲ್ಲಿ ಬೆಳೆಯುತ್ತಿರುವ ಬಹುದೊಡ್ಡ ವ್ಯಾಪಾರ ವೇದಿಕೆಯಾಗಿದ್ದು, ಕಳೆದ ವರ್ಷ ಭಾರತ 800 ಬಿಲಿಯನ್ ಡಾಲರ್‌ವರೆಗಿನ ವಹಿವಾಟನ್ನು ವಿದೇಶಗಳೊಂದಿಗೆ ಭಾರತ ನಡೆಸಿದೆ. ಇದು 2030ರ ವೇಳೆಗೆ 2 ಲಕ್ಷ ಕೋಟಿ ಡಾಲರ್‌ಗೆ ತಲುಪುವ ಸಾಧ್ಯತೆಗಳಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.