Budget 2024; ಸಂಬಳದಾರರಿಗೆ ಭಾರಿ ನೆರವು ಒದಗಿಸಿದ ಬಜೆಟ್
ತೆರಿಗೆ ಮಿತಿಯನ್ನು 4 ಲಕ್ಷಕ್ಕೇರಿಸುವ ನಿರೀಕ್ಷೆ ಹುಸಿಯಾಯಿತು
Team Udayavani, Jul 24, 2024, 6:05 AM IST
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2024ರ ಬಜೆಟ್‌ನಲ್ಲಿ ಯುವ ಜನರ ಸಬಲೀಕರಣಕ್ಕೆ ಒತ್ತು ನೀಡಲಾಗಿದ್ದು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಮುಂದಿನ 5 ವರ್ಷಗಳಲ್ಲಿ 4 ಕೋಟಿ ಯುವಕರಿಗೆ ಉದ್ಯೋಗ ಒದಗಿಸುವ ಭರವಸೆಯನ್ನು ಬಜೆಟ್‌ನಲ್ಲಿ ನೀಡಲಾಗಿದೆ.
ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ವ್ಯವಸ್ಥೆಯನ್ನು ಸರಳೀಕರಣ ಮಾಡಿರುವುರಿಂದ ಇದು ತೆರಿಗೆ ಪಾವತಿದಾರರಿಗೆ ಸಿಹಿ ಬಜೆಟ್ ಆಗಿದೆ. ಈ ಬಜೆಟ್‌ನಲ್ಲಿ ತೆರಿಗೆ ಸರಳೀಕರಣ ಮಾಡಲಾಗಿದ್ದು, 3 ಲಕ್ಷ ರೂ.ವರೆಗೆ ಯಾವುದೇ ತೆರಿಗೆಯನ್ನು ಪಾವತಿಸುವ ಅವಶ್ಯಕತೆ ಇಲ್ಲ. ಕಳೆದ ಬಾರಿಯೂ ಸಹ ತೆರಿಗೆ ಪದ್ಧತಿಯಲ್ಲಿ ಇದನ್ನೇ ಮುಂದುವರಿಸಲಾಗಿತ್ತು. ಈ ಮಿತಿಯನ್ನು 4 ಲಕ್ಷ ರೂ.ಗೆ ಏರಿಕೆ ಮಾಡಿದ್ದರೆ ಮತ್ತಷ್ಟು ಅನುಕೂಲವಾಗುತ್ತಿತ್ತು.
ಆದರೆ ಈ ಬಾರಿ ಶೇ.5ರಷ್ಟು ತೆರಿಗೆ ಪಾವತಿ ಮಾಡುವವರಿಗೆ ಮಿತಿಯನ್ನು ಹೆಚ್ಚಳ ಮಾಡಲಾಗಿದ್ದು, ಇದನ್ನು 7 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ಶೇ.10ರಷ್ಟು ತೆರಿಗೆ ಪಾವತಿ ಮಾಡಲಾಗುತ್ತಿದ್ದ ಮಿತಿಯನ್ನು ಸಹ 10 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಇದು ತೆರಿಗೆದಾರರಿಗೆ ಅನುಕೂಲ ಒದಗಿಸಲಿದೆ.
ಹೂಡಿಕೆದಾರರಿಗಿದ್ದ ಏಂಜಲ್ ತೆರಿಗೆಯನ್ನು ರದ್ದು ಮಾಡಲಾಗಿದೆ. ಈ ಬಜೆಟ್‌ನಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ, ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಪೂರಕವಾದ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ವಿವಿಧ ಪಾವತಿಗಳಿಗೆ ಶೇ.5ರಷ್ಟು ಟಿಡಿಎಸ್ ಬದಲಿಗೆ ಶೇ.2ಟಿಡಿಎಸ್‌ನ್ನು ಒದಗಿಸಲಾಗುತ್ತಿದೆ.
ಮ್ಯುಚುವಲ್ ಫಂಡ್ ಅಥವಾ ಯುಟಿಐ ಮರು ಖರೀದಿಯಲ್ಲಿ ಟಿಡಿಎಸ್‌ನನ್ನು ಶೇ.20ರಷ್ಟು ಹಿಂಪಡೆಯಲಾಗಿದೆ. ಈ- ಕಾಮರ್ಸ್ ಆಪರೇಟರ್‌ಗಳಿಗೆ ತೆರಿಗೆಯನ್ನು ಶೇ.1ರಿಂದ 0.1ಕ್ಕೆ ಇಳಿಸಲಾಗಿದೆ. ಅಲ್ಲದೆ ಟಿಡಿಎಸ್ ತುಂಬುವಲ್ಲಿ ವಿಳಂಬವಾದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಇವೆಲ್ಲವೂ ತೆರಿಗೆದಾರರಿಗೆ ಅನುಕೂಲ ಒದಗಿಸಲಿದೆ.
ಪ್ರಸ್ತಕ ಬಜೆಟ್‌ನಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು 50,000 ರೂ.ನಿಂದ 75,000ರೂ.ಗೆ ಏರಿಕೆ ಮಾಡಿದ್ದು, ಇದರಿಂದ 4 ಕೋಟಿ ವೇತನದಾರರರಿಗೆ ಅನುಕೂಲವಾಗಿದೆ. ಪಿಂಚಣಿದಾರರಿಗೆ 5,000ರೂನಿಂದ 25,000ರೂ.ಗೆ ಏರಿಕೆ ಮಾಡಲಾಗಿದ್ದು ಇದರಿಂದ 4 ಕೋಟಿ ತೆರಿಗೆದಾರರು ಲಾಭ ಪಡೆದುಕೊಳ್ಳಲಿದ್ದಾರೆ. ಸದ್ಯ ಮೂರನೇ 2 ಭಾಗದಷ್ಟು ಜನರು ಹೊಸ ತೆರಿಗೆ ಪದ್ದತಿಯನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ಹೊಸ ತೆರಿಗೆ ಪದ್ಧತಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು 17500 ರೂ.ವರೆಗೆ ಈಗ ಉಳಿತಾಯ ಮಾಡಬಹುದಾದ ಅವಕಾಶ ಹೆಚ್ಚಾಗಿದೆ.
ರಮೇಶ್ ಕಟ್ಟ
ರಮೇಶ್ ಆ್ಯಂಡ್ ಕಂಪನಿ, ಬೆಂಗಳೂರು.
[email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.