Education ದೃಷ್ಟಿಯಲ್ಲಿ ಇದು ತೃಪ್ತಿಕರ ಬಜೆಟ್; ಕೌಶಲ್ಯ ಸಾಲದಿಂದ ಅಭ್ಯರ್ಥಿಗಳಿಗೆ ನೆರವು
Team Udayavani, Jul 24, 2024, 6:01 AM IST
ಬಜೆಟ್‌ನಲ್ಲಿ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗಕ್ಕೆ ಬಜೆಟ್ ಒತ್ತು ನೀಡಿದೆ. ಕಳೆದ ಬಾರಿ ಶಿಕ್ಷಣ ಕ್ಷೇತ್ರಕ್ಕೆ 1.12 ಲಕ್ಷ ಕೋಟಿ ರೂ, ಅನುದಾನ ನೀಡಿದ್ದರೆ, ಈ ಬಜೆಟ್‌ನಲ್ಲಿ 1.26 ಲಕ್ಷ ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಸುಮಾರು ಶೇ.15ರಷ್ಟು ಹೆಚ್ಚು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗಿದೆ. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಪ್ರಯತ್ನಗಳನ್ನು ಮಾಡಿರುವುದು ಗಮನಾರ್ಹ. 10 ಲಕ್ಷ ರೂ.ವರೆಗೆ ಶಿಕ್ಷಣ ಸಾಲ ನೀಡಿ ವಿದ್ಯಾರ್ಥಿಗಳ ನೆರವಿಗೆ ಸರ್ಕಾರ ಬಂದಿದೆ. ಶೇ.3 ಬಡ್ಡಿ ಇ ವೋಚರ್ ಅನ್ನು ಒಂದು ಲಕ್ಷ ವಿದ್ಯಾರ್ಥಿಗಳಿಗೆ ನೀಡುವುದಾಗಿ ಪ್ರಕಟಿಸಿರುವುದು ಉತ್ತಮ ಬೆಳವಣಿಗೆ.
ಇನ್ನು 7.5 ಲಕ್ಷ ರೂ.ಗಳವರೆಗಿನ ಕೌಶಲ್ಯ ಸಾಲಕ್ಕೆ ಪ್ರತಿ ವರ್ಷ 25 ಸಾವಿರ ವಿದ್ಯಾರ್ಥಿಗಳಿಗೆ ಗ್ಯಾರಂಟಿ ನೀಡುವುದರಿಂದ ವಿದ್ಯಾರ್ಥಿಗಳು ಓದುವ ಸಮಯದಲ್ಲಿಯೇ ಸ್ವಂತವಾಗಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತಾರೆ. ಇದರ ಜೊತೆಗೆ ಉದ್ಯೋಗ ಭದ್ರತೆಗೆ 2-3 ಉದ್ಯೋಗ ಭದ್ರತೆ ಯೋಜನೆಯನ್ನು ಪ್ರಕಟಿಸಿದ್ದಾರೆ. 3 ತಿಂಗಳ ಸಂಬಳವನ್ನು ಕಂತಿನ ಮೂಲಕವೇ ಸರ್ಕಾರವೇ ನೀಡುತ್ತದೆ. ಇದರ ಜೊತೆಗೆ ಇಪಿಎಫ್ ನಿಧಿಯನ್ನು ಸರ್ಕಾರವೇ ಎರಡು ವರ್ಷ ನೀಡುವುದು ಉತ್ತಮ ಕ್ರಮಗಳಾಗಿವೆ.
ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಗೆ ಆಯವ್ಯಯದಲ್ಲಿ ಏನನ್ನೂ ನೀಡಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇದು ತಪ್ಪು ಅಭಿಪ್ರಾಯ. ಸರ್ಕಾರ ಎನ್‌ಇಪಿ ಜಾರಿಗೆ ಏನೆಲ್ಲಾ ಮಾಡಬಹುದು, ಬಜೆಟ್‌ನಲ್ಲಿ ಏನು ಕೊಡಬಹುದು ಅದನ್ನೆಲ್ಲ ಕೊಟ್ಟಿದೆ. ಶಿಕ್ಷಣದ ದೃಷ್ಟಿಯಿಂದ ಅತ್ಯುತ್ತಮವಲ್ಲದಿದ್ದರೂ ಇದೊಂದು ತೃಪ್ತಿಕರ ಬಜೆಟ್ ಎಂಬುದು ನನ್ನ ಅಭಿಪ್ರಾಯ.
– ಎಂ. ಕೆ. ಶ್ರೀಧರ್, ಶಿಕ್ಷಣ ತಜ್ಞ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.