Daily Horoscope: ಸರಕಾರಿ ನೌಕರರಿಗೆ ವರ್ಗಾವಣೆ ಖಚಿತ, ಲಕ್ಷ್ಮೀ ಕಟಾಕ್ಷಕ್ಕೆ ಗುರಿಯಾಗುವಿರಿ
Team Udayavani, Jul 24, 2024, 7:33 AM IST
ಮೇಷ: ದಿನಾರಂಭದಲ್ಲೇ ಶುಭಸೂಚನೆಗಳು. ಉದ್ಯೋಗ ಸ್ಥಾನದಲ್ಲಿ ಪುನವ್ಯìವಸ್ಥೆ. ಉದ್ಯಮ ಗಳ ನಿರ್ವಹಣೆಗೆದುರಾದ ಸಮಸ್ಯೆಗಳು ದೂರ. ಲಕ್ಷ್ಮೀ ಕಟಾಕ್ಷಕ್ಕೆ ಗುರಿಯಾಗುವಿರಿ. ಪೂರ್ವದಿಕ್ಕಿನಿಂದ ಆಪ್ತಮಿತ್ರರ ಆಗಮನ.
ವೃಷಭ: ಪೂರ್ವಯೋಜನೆಯಂತೆ ಕೈಗೊಂಡ ಕ್ರಮಗಳಿಂದಾಗಿ ಕಾರ್ಯಗಳು ಸುಗಮ. ಸರಕಾರಿ ನೌಕರರಿಗೆ ವರ್ಗಾವಣೆ ಖಚಿತ. ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ.
ಮಿಥುನ: ಅರ್ಹತೆಗೆ ಸರಿಯಾದ ಗೌರವದ ಸ್ಥಾನ ಪ್ರಾಪ್ತಿ. ಉದ್ಯಮಿಗಳಿಗೆ ಸಂತೋಷ ತರುವ ಯೋಜನೆಗಳು. ಸರಕಾರಿ ನೌಕರರಿಗೆ ಹೆಚ್ಚಿದ ಜವಾಬ್ದಾರಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಯಥೇಚ್ಚ ಲಾಭ.
ಕರ್ಕಾಟಕ: ಬಡವರಿಗೆ ವಿದ್ಯಾರ್ಜನೆ, ವಿವಾಹ, ಚಿಕಿತ್ಸೆ ಮೊದಲಾದ ಆವಶ್ಯಕತೆಗಳಿಗೆ ಧನಸಹಾಯ. ಉದ್ಯೋಗದಲ್ಲಿ ವೇತನ ಏರಿಕೆ. ನೌಕರ ವರ್ಗಕ್ಕೆ ಮಾಲಿಕರ ಔದಾರ್ಯದಿಂದ ಹರ್ಷ. ಹೊಸ ನೌಕರರರಿಗೆ ಮಾರ್ಗದರ್ಶನದ ಜವಾಬ್ದಾರಿ.
ಸಿಂಹ: ಉದ್ಯೋಗ ಸ್ಥಾನದಲ್ಲಿ ಪುನರಾ ರಂಭಗೊಂಡಿದ್ದ ಕಾಮಗಾರಿಗಳ ಮುಕ್ತಾಯ. ಅಧಿಕಾರಿ ವರ್ಗಕ್ಕೆ ತೃಪ್ತಿ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಯಂತ್ರೋಪಕರಣ ಮಾರಾಟಗಾರರಿಗೆ ನಿರೀಕ್ಷೆ ಮೀರಿದ ವ್ಯಾಪಾರ.
ಕನ್ಯಾ: ಕ್ರಿಯಾಶೀಲತೆಯೊಂದಿಗೆ ದೈವಾನು ಗ್ರಹವೂ ಇರುವುದರಿಂದ ಹಿನ್ನಡೆಯ ಪ್ರಶ್ನೆಯಿಲ್ಲ. ವಿಶಾಲ ಕಾರ್ಯವ್ಯಾಪ್ತಿಯಲ್ಲಿ ಉದ್ಯೋಗ ಮುಂದುವರಿಕೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆ.
ತುಲಾ: ಮನೋಬಲ ವೃದ್ಧಿಯೊಂದಿಗೆ ಕಾರ್ಯದ ವೇಗ ಹೆಚ್ಚಳ. ಕಾರ್ಯ ಕ್ಷೇತ್ರದಲ್ಲಿ ಪರಿಸ್ಥಿತಿ ಸುಧಾರಣೆ. ಸಂಗಾತಿಯ ಮನೋ ಧರ್ಮದೊಡನೆ ಉತ್ತಮ ಹೊಂದಾಣಿಕೆ. ಹಿರಿಯರ ಆರೋಗ್ಯದಲ್ಲಿ ಗಣನೀಯ ಸುಧಾರಣೆ.
ವೃಶ್ಚಿಕ: ಸಪ್ತಾಹ ಮುಂದುವರಿದಂತೆ ಸಂತೋಷ ತರುವ ಬೆಳವಣಿಗೆಗಳು. ಸಂಸ್ಥೆಯ ಮುಖ್ಯಸ್ಥರಿಂದ ಯೋಗಕ್ಷೇಮ ವಿಚಾರಣೆ. ಗೃಹೋದ್ಯಮದ ಉತ್ಪನ್ನಗಳ ಕಡೆಗೆ ಆಕರ್ಷಿತರಾದ ಗ್ರಾಹಕರು. ಮಕ್ಕಳಿಂದ ಹೊಸ ಉದ್ಯಮ ಆರಂಭ.
ಧನು: ಒಂದು ವಾರದ ಸಣ್ಣಪುಟ್ಟ ಹಿನ್ನಡೆಗಳ ನಿವಾರಣೆ. ಉದ್ಯೋಗ ಸ್ಥಾನದಲ್ಲಿ ನಿರಾತಂಕ ಮುನ್ನಡೆ. ಸಮಾಜ ಅಭಿವೃದ್ಧಿ ಮತ್ತು ಸುಧಾರಣೆಯ ಕಾರ್ಯಕ್ರಮಗಳಲ್ಲಿ ಭಾಗಿ. ಪರಿಸರ ಸ್ವತ್ಛತೆಯ ಕಾರ್ಯಕ್ರಮಗಳ ನೇತೃತ್ವ.
ಮಕರ: ಪರಿಸರದಲ್ಲಿ ಪರಿವರ್ತನೆಯಿಂದ ಸಮಾಧಾನ. ವೃತ್ತಿಸ್ಥಾನದಲ್ಲಿ ಕಡಿಮೆಯಾದ ಒತ್ತಡ. ಹೆಚ್ಚುವರಿ ಆದಾಯ ಹೊಂದುವ ಪ್ರಯತ್ನ ಯಶಸ್ವಿ. ವಸ್ತ್ರ, ಸಿದ್ಧ ಉಡುಪು, ಆಭರಣ. ಉದ್ಯಮಗಳಿಗೆ ಶುಭಕಾಲ.
ಕುಂಭ: ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆಗಳು. ಉದ್ಯಮದ ಉತ್ಪನ್ನ ಗಳಿಗೆ ಮಾರಾಟಗಾರರ ಅನ್ವೇಷಣೆ. ಗ್ರಾಹಕರ ಬೇಡಿಕೆ ಗಳಿಗೆ ಶೀಘ್ರ ಸ್ಪಂದಿಸುವ ಪ್ರಯತ್ನ. ಗೃಹಿಣಿಯರ ಸ್ವೊದ್ಯೋಗ ಯೋಜನೆಗಳು ಯಶಸ್ವಿ. ಹಿರಿಯರು, ಗೃಹಿಣಿ, ಮಕ್ಕಳಿಗೆ ಸಮಾಧಾನದ ವಾತಾವರಣ.
ಮೀನ: ದಿನಾರಂಭದಲ್ಲಿ ಪ್ರಗತಿಯ ವೇಗವರ್ಧನೆ. ವೃತ್ತಿಬಾಂಧವರಿಂದ ಉತ್ಸಾಹಪೂರ್ಣ ಸಹಕಾರ. ಸರಕಾರಿ ಇಲಾಖೆಗಳಿಂದ ಸಕಾರಾತ್ಮಕ ಸ್ಪಂದನ. ಸರಕಾರಿ ನೌಕರರಿಗೆ ಸಾರ್ವಜನಿಕರಿಂದ ಪ್ರಶಂಸೆ. ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಗೌರವ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ನೆಮ್ಮದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.