BC Road: ಬಿರುಗಾಳಿಯ ರಭಸಕ್ಕೆ ಹಲವೆಡೆ ಹಾನಿ
Team Udayavani, Jul 24, 2024, 9:41 AM IST
![5-bntwal](https://www.udayavani.com/wp-content/uploads/2024/07/5-bntwal-620x372.jpg)
![5-bntwal](https://www.udayavani.com/wp-content/uploads/2024/07/5-bntwal-620x372.jpg)
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಜು. 23ರ ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿಯ ಪರಿಣಾಮ ಮರ, ವಿದ್ಯುತ್ ಕಂಬಗಳು ಧರೆಗುರುಳಿ ಹಲವೆಡೆ ಹಾನಿ ಸಂಭವಿಸಿದೆ.
ಬಿ.ಸಿ.ರೋಡು ಪೊಲೀಸ್ ಠಾಣೆಯ ಬಳಿ ಮರ ಬಿದ್ದು ಕಾರೊಂದು ಜಖಂಗೊಂಡಿದೆ. ಠಾಣೆಯ ನಾಮಫಲಕ ಕೂಡ ಬಿದ್ದಿದೆ. ವಿದ್ಯುತ್ ಕಂಬಗಳು ಹೆದ್ದಾರಿಗೆ ಬಿದ್ದು ಸಂಚಾರಕ್ಕೆ ತೊಡಕುಂಟಾಗಿದೆ.
ಬಿ.ಸಿ.ರೋಡಿನ ಸ್ಪರ್ಶಕಲಾಮಂದಿರದ ಬಳಿ ಮರವೊಂದು ಬಿದ್ದು ಹಾನಿ ಉಂಟಾಗಿದೆ. ಸಾಕಷ್ಟು ಕಡೆ ಹೋಲ್ಡಿಂಗ್ಸ್, ಬ್ಯಾನರ್ ಗಳು ಧರೆಗುರುಳಿವೆ.
ಬಳಿಕ ರಾತ್ರಿ ಪೊಲೀಸರು, ಅಗ್ನಿಶಾಮಕ ದಳ, ಕಂದಾಯ ಇಲಾಖೆ, ಮೆಸ್ಕಾಂ ಸಿಬಂದಿ ಸ್ಥಳದಲ್ಲಿದ್ದು ತೆರವು ಕಾರ್ಯ ನಡೆಸಿದರು.