Hosanagar: ಮುಂಡಳ್ಳಿ ಸಮೀಪ ರಸ್ತೆಗೆ ಬಿದ್ದ ಬೃಹತ್ ಮರ; ಬೆಳಗ್ಗೆ 4 ಗಂಟೆ ಸಂಚಾರ ಬಂದ್
Team Udayavani, Jul 24, 2024, 10:51 AM IST
ಹೊಸನಗರ: ಶಿವಮೊಗ್ಗದ ಹೊಸನಗರ ನಗರ ಮಾಸ್ತಿಕಟ್ಟೆ ಮೂಲಕ ಕುಂದಾಪುರ- ಉಡುಪಿ ಸಾಗುವ ಮಾರ್ಗದ ಮುಂಡಳ್ಳಿ ಸಮೀಪ ಬೃಹತ್ ಮರವೊಂದು ಬೆಳಗ್ಗಿನ ಜಾವ ರಸ್ತೆಗೆ ಅಡ್ಡಲಾಗಿ ಬಿದ್ದು 4 ಗಂಟೆ ಸಂಚಾರ ಸ್ಥಗಿತಗೊಂಡ ಘಟನೆ ಜು.24ರ ಬುಧವಾರ ಬೆಳಿಗ್ಗೆ ನಡೆದಿದೆ.
ಈ ಭಾಗದಲ್ಲಿ ರಾತ್ರಿ ಭಾರೀ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಗಾಳಿ ರಭಸಕ್ಕೆ ಮರ ಧರಾಶಾಹಿಯಾಗಿದೆ. ಶಿವಮೊಗ್ಗ-ಉಡುಪಿ ನಡುವಿನ ಪ್ರಮುಖ ಮಾರ್ಗ ಇದಾಗಿದೆ. ಬೆಳಗ್ಗಿನ ಜಾವ ಆದ ಕಾರಣ ವಾಹನ ದಟ್ಟಣೆ ಅಷ್ಟಾಗಿ ಇರಲಿಲ್ಲ.
ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಳಿಗ್ಗೆ 3 ಗಂಟೆಗೆ ಸ್ಥಗಿತಗೊಂಡಿದ್ದ ಸಂಚಾರ ಬೆಳಿಗ್ಗೆ ಗಂಟೆಗೆ ಮುಕ್ತವಾಯಿತು.
ಉಪವಲಯ ಅರಣ್ಯಾಧಿಕಾರಿ ಅಮೃತ್ ಮತ್ತು ಸಿಬ್ಬಂದಿ ವರ್ಗ, ಶಾಸಕರ ಆಪ್ತ ಸಹಾಯಕ ರಾಜೇಶ ಹಿರಿಮನೆ, ದೇವು ಕಂದ್ಲಕೊಪ್ಪ, ಕೆ.ಕೆ.ರಾಮಣ್ಣ, ಯೋಗೇಂದ್ರ ಪಡುಕೋಣೆ, ದೀಕ್ಷಿತ್ ಮುಂಡಳ್ಳಿ ಹಾಗೂ ಸ್ಥಳೀಯರು ಮರ ತೆರವಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
Anandapura: ಚಾಲಕನ ನಿಯಂತ್ರಣ ತಪ್ಪಿದ ಬಸ್; ಹಲವರಿಗೆ ಗಾಯ
Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.