Muniyal Institute: ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮಣಿಪಾಲ


Team Udayavani, Jul 24, 2024, 4:24 PM IST

Education: ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮಣಿಪಾಲ

ಈ ಕಾಲೇಜಿನಲ್ಲಿ ಐದೂವರೆ ವರ್ಷಗಳ (ನಾಲ್ಕೂವರೆ ವರ್ಷ + ಒಂದು ವರ್ಷ ಇಂಟರ್ನಶಿಪ್) ಬಿ.ಎನ್.ವೈ.ಎಸ್. (ಬ್ಯಾಚುಲರ್ ಆಫ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸಸ್) ಎಂಬ ವಿಶಿಷ್ಟವಾದ ವೈದ್ಯಕೀಯ ಕೋರ್ಸನ್ನು ನಡೆಸಲಾಗುತ್ತಿದೆ.

ಭಾರತೀಯ ಚಿಕಿತ್ಸಾ ಪದ್ಧತಿಗಳಲ್ಲೊಂದಾದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸಾ ಪದ್ಧತಿಯು ಭಾರತ ಸರ್ಕಾರದ ಆಯುಷ್ ಇಲಾಖೆಯ ಅಧೀನಕ್ಕೊಳಪಟ್ಟಿದೆ. ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನೇಮಿತವಾಗಿದೆ. ದ್ವಿತೀಯ ಪಿ.ಯು.ಸಿ ಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ (ಫಿಸಿಕ್ಸ್, ಕೆಮೆಸ್ಟ್ರೀ ಮತ್ತು ಬಯೋಲಜಿ) ದಲ್ಲಿ ಕನಿಷ್ಠ ಶೇಕಡಾ ೫೦ ಅಂಕ ಗಳಿಸಿರುವ ಯಾವುದೇ ವಿದ್ಯಾರ್ಥಿಯೂ ಉತ್ತಮ ವೈದ್ಯನಾಗಿ ರೂಪುಗೊಂಡು ಸಮಾಜಕ್ಕೆ ಆರೋಗ್ಯ ಸೇವೆ ಸಲ್ಲಿಸುವ ಮಹತ್ತರವಾದ ಕೊಡುಗೆಯನ್ನು ನೀಡಬಹುದಾಗಿದೆ.

ಇದರಲ್ಲೇನು ವಿಶೇಷತೆ ?
ಇದೊಂದು ವಿಶಿಷ್ಟವಾದ ಔಷಧಿ ರಹಿತ ಚಿಕಿತ್ಸಾ ಪದ್ಧತಿಯಾಗಿದೆ. ಇಲ್ಲಿ ವೈದ್ಯರು ಅನೇಕ ಖಾಯಿಲೆಗಳಿಗೆ ಔಷಧಿಯಾಗಿ “ಪಂಚಮಹಾಭೂತ” ಅಂದರೆ ಮಣ್ಣು, ನೀರು, ಗಾಳಿ, ಅಗ್ನಿ, ಆಕಾಶಗಳನ್ನು ಚಿಕಿತ್ಸಾ ವಿಧಾನ/ಸಾಧನಗಳಾಗಿ ಬಳಸುತ್ತಾರೆ. ಇಲ್ಲಿನ ಅಸಾಮಾನ್ಯ ಸಂಗತಿಯೆಂದರೆ ವೈದ್ಯರು ಕೇವಲ ಚಿಕಿತ್ಸೆ ನೀಡುತ್ತಾರೆ, ಆದರೆ ಖಾಯಿಲೆಗಳನ್ನು ಪ್ರಕೃತಿಯೇ ಈ ಕೆಲವು ಚಿಕಿತ್ಸಾ ವಿಧಾನಗಳ ಮೂಲಕ ಗುಣಪಡಿಸುತ್ತದೆ. ಅವುಗಳೆಂದರೆ ಶುದ್ಧೀಕರಿಸಿದ ಮಣ್ಣಿನ ಚಿಕಿತ್ಸೆ, ನೀರಿನ ಚಿಕಿತ್ಸೆ, ವೈಜ್ಞಾನಿಕ ಅಂಗ ಮರ್ದನ (ಮಸಾಜ್) ಅಕ್ಯುಪಂಕ್ಚರ್, ಬಣ್ಣ ಮತ್ತು ಅಯಸ್ಕಾಂತ ಚಿಕಿತ್ಸೆ, ಸೂರ್ಯಸ್ನಾನ, ಆಹಾರ ಪೋಷಣೆ ಮತ್ತು ಪಥ್ಯಾಹಾರ, ಶುದ್ಧೀಕರಣ ಮತ್ತು ಉಪವಾಸ ಚಿಕಿತ್ಸೆ, ಯೋಗ ಚಿಕಿತ್ಸೆ, ಯೊಗ-ಪ್ರಾಣಾಯಾಮ-ಧ್ಯಾನದಲ್ಲಿನ ವಿಶೇಷ ತಂತ್ರಗಳು, ಮನೋ ವೈದ್ಯ ಶಾಸ್ತ್ರದಲ್ಲಿ ಯೋಗ ಸಮಾಲೋಚನೆ, ಜೀವನ ಶೈಲಿಯ ನಿರ್ವಹಣೆ ಇತ್ಯಾದಿ. ಪ್ರಕೃತಿ ಚಿಕಿತ್ಸಾ ವೈದ್ಯರ ಮಾರ್ಗದರ್ಶನದಲ್ಲಿ ಪ್ರಕೃತಿಗೆ ಮರಳಿ ಶರಣಾಗುವುದರಿಂದ ಮತ್ತು ಪ್ರಾಕೃತಿಕ ನಿಯಮಗಳನ್ನು ಪಾಲಿಸುವುದರಿಂದ ಸರಿಸುಮಾರು ಶೇಕಡಾ 70 ರಷ್ಟು ಮನುಕುಲದ ತೀವ್ರ ಮತ್ತು ದೀರ್ಘಕಾಲದ ಖಾಯಿಲೆಗಳನ್ನು ನಿರ್ವಹಣೆ ಮಾಡಬಹುದು, ಹತೋಟಿಗೆ ತರಬಹುದು ಮತ್ತು ಹಲವನ್ನು ಗುಣಪಡಿಸಬಹುದಾಗಿದೆ.

ಈ ಕೋರ್ಸಿನಲ್ಲಿನ ವಿಷಯ ವಿವರಣೆ ಮತ್ತು ಜ್ಞಾನದ ಪರಿಚಯ: ವಿದ್ಯಾರ್ಥಿಯು ಮಾನವ ಶರೀರದ ರಚನೆ, ಕಾರ್ಯ ಮತ್ತು ಅಸಹಜ ಬದಲಾವಣೆಗಳನ್ನು ಅರಿತುಕೊಳ್ಳಲು ಆಧುನಿಕ ವೈದ್ಯಕೀಯ ವಿಜ್ಞಾನದ ಅಂಗರಚನಾ ಶಾಸ್ತ್ರ, ಶರೀರ ಶಾಸ್ತ್ರ, ಜೀವರಸಾಯನ ಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ರೋಗಶಾಸ್ತ್ರ, ಸಾಮಾಜಿಕ ಮತ್ತು ರೋಗ ತಡೆ ವಿಜ್ಞಾನ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ರೋಗ ಪತ್ತೆ ಹಚ್ಚುವಿಕೆ ವಿಧಾನ ಮುಂತಾದ ವಿಷಯಗಳನ್ನು ಕಲಿಯಬೇಕಾಗುತ್ತದೆ. ಜೊತೆಗೆ ವಿವಿಧ ಖಾಯಿಲೆಗಳನ್ನು ಗುಣಪಡಿಸಲು ಎಲ್ಲಾರೀತಿಯ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಚಿಕಿತ್ಸಾ ವಿಧಾನಗಳನ್ನು ಆಳವಾಗಿ ಅಭ್ಯಸಿಸಬೇಕಾಗುತ್ತದೆ.

ಈ ಕೋರ್ಸಿನ ವ್ಯಾಪ್ತಿ ಮತ್ತು ಪ್ರಯೋಜನ: ಸ್ವಿಜರ್ಲೆಂಡ್ ಸೇರಿ ವಿಶ್ವದಾದ್ಯಂತ ಹಲವು ರಾಷ್ಟ್ರಗಳಲ್ಲಿ ಯೋಗ ಮತ್ತು ಆಯುರ್ವೇದವು ಅಧಿಕೃತ ಚಿಕಿತ್ಸಾ ಕ್ರಮವಾಗಿ ಅಂಗೀಕರಿಸಲ್ಪಟ್ಟಿದೆ. ಈ ಕೋರ್ಸಿನ ಅವಧಿ ಪೂರ್ಣವಾದ ಬಳಿಕ ಈ ಆರೋಗ್ಯ ಕ್ಷೇತ್ರಗಳಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸಾ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುರ್ವೇದ ಆಸ್ಪತ್ರೆ/ಕಾಲೇಜು, ಯೋಗ ಮತ್ತು ಫಿಟ್‌ನೆಸ್ ಕೇಂದ್ರಗಳು, ಫಿಸಿಯೋಥೆರೆಪಿ ಮತ್ತು ಪುನಃಶ್ಚೇತನ ಕೇಂದ್ರ, ಫಿಟ್‌ನೆಸ್ ತರಬೇತುದಾರರಾಗಿ, ಹಿರಿಯ ನಾಗರೀಕರ (ವೃದ್ಧರ) ಕ್ಲಿನಿಕ್, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಜೀವನ ಶೈಲಿ ನಿರ್ವಹಣಾ ಕ್ಲಿನಿಕ್, ಬೊಜ್ಜು ಕ್ಲಿನಿಕ್, ಆಹಾರ ಪೋಷಣೆ ಮತ್ತು ಪಥ್ಯಾಹಾರ ವಿಭಾಗ, ಅಕ್ಯುಪಂಕ್ಚರ್ ವೈದ್ಯರಾಗಿ, ಯೋಗದ ಆಪ್ತ ಸಮಾಲೋಚಕರಾಗಿ, ಮಾನಸಿಕ ಖಾಯಿಲೆಗಳ ಕ್ಲಿನಿಕ್‌ನಲ್ಲಿ, ನೋವು ನಿರ್ವಹಣಾ ಕ್ಲಿನಿಕ್, ಸ್ಪಾಗಳಲ್ಲಿ-ಕ್ರೂಸ್ (ಹಡಗು) ಗಳಲ್ಲಿ ಆರೋಗ್ಯ ತರಬೇತುದಾರರಾಗಿ, ಸಂಶೋಧಕ ವಿದ್ವಾಂಸರಾಗಿ, ಬೋಧಕರಾಗಿ, ಯೋಗ ಶಿಕ್ಷಕರಾಗಿ ಸೇವೆಸಲ್ಲಿಸಬಹುದು.

ವೈಶಿಷ್ಟ್ಯತೆ: ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮಣಿಪಾಲ ಹರಿಕಂಡಿಗೆಯ ಹಸಿರಿನಿಂದ ಕಂಗೊಳಿಸುವ ಶ್ರೀಮಂತ ವನರಾಶಿಯ ನಡುವೆ ಸ್ಥಾಪಿತವಾಗಿದ್ದು ಉಡುಪಿ ಜಿಲ್ಲೆಯ ಪ್ರಥಮ ಕಾಲೇಜಾಗಿದೆ. ಪ್ರಕೃತಿ ಮಾತೆಯ ಅತ್ಯದ್ಭುತ ದಿವ್ಯ ಶಕ್ತಿಯ ಅನುಭೂತಿಯನ್ನು ಹೆಚ್ಚಿಸಲು ಇಲ್ಲಿ ಕಾಲೇಜಿನ ಪಕ್ಕದಲ್ಲಿ ಶ್ರೀ ಮಹಾಲಸ ನಾರಾಯಣಿ ದೇವಾಲಯದ ಸಾನಿಧ್ಯವಿದ್ದು ಇಲ್ಲಿ ಕಲಿಯುವ ಪ್ರಕೃತಿ ಚಿಕಿತ್ಸೆಯ ಸಾಧಕರಿಗೆ ಇದು ಅತ್ಯಂತ ಪ್ರಶಸ್ಥ ಸ್ಥಳವಾಗಿದೆ. ಆಸಕ್ತ ಅರ್ಹ ವಿದ್ಯಾರ್ಥಿಗಳು ದಾಖಲಾತಿಗಾಗಿ ಮತ್ತು ಕಾಲೇಜು ಶುಲ್ಕದಲ್ಲಿ ರಿಯಾಯಿತಿಗಾಗಿ ಈ ದೂರವಾಣಿಯನ್ನು ಸಂಪರ್ಕಿಸಬಹುದು; 8123403232.

ಬಿ.ಎ.ಎಮ್.ಎಸ್. ಮತ್ತು ಎಮ್.ಡಿ./ಎಮ್.ಎಸ್ ಆಯುರ್ವೇದ ಕೋರ್ಸುಗಳನ್ನು ಸೇರಲು ಇಚ್ಚಿಸುವ ಅರ್ಹ ಆಸಕ್ತ ವಿದ್ಯಾರ್ಥಿಗಳು ಮೇಲಿನ ದೂರವಾಣಿಯನ್ನು ಸಂಪರ್ಕಿಸಬಹುದು.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

8

Karkala: ಚಾರ್ಚ್‌ಗಿಟ್ಟ ಮೊಬೈಲ್‌ ಸ್ಫೋ*ಟ; ಮನೆಗೆ ಬೆಂಕಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.