Assembly: ಸುಳ್ಯದ 110 ಕೆ.ವಿ.ಸಬ್‌ಸ್ಟೇಷನ್ ಕಾಮಗಾರಿ ಸ್ಥಿತಿ ತಿಳಿಸಿ: ಶಾಸಕಿ ಭಾಗೀರಥಿ
Team Udayavani, Jul 25, 2024, 7:00 AM IST
ಬೆಂಗಳೂರು: ಸುಳ್ಯದಲ್ಲಿನ ವಿದ್ಯುತ್ ಸಮಸ್ಯೆ ಹಾಗೂ 110 ಕೆವಿ ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿಯ ಬಗ್ಗೆ ವಿಧಾನಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆ ಎತ್ತಿದರು. ಕಾಮಗಾರಿಯು ಯಾವ ಹಂತದಲ್ಲಿದೆ, ನಿರ್ಮಾಣ ಯಾವಾಗ ಪೂರ್ತಿಗೊಳ್ಳಲಿದೆ ಎಂದು ಶಾಸಕರು ಪ್ರಶ್ನಿಸಿದ್ದರು.
ಸುಳ್ಯ 110ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಹಾಗೂ ಪ್ರಸರಣ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ವಿದ್ಯುತ್ ಉಪಕೇಂದ್ರದ ನಿಯಂತ್ರಣ ಕೊಠಡಿ ನಿರ್ಮಾಣ ಕಾರ್ಯ ಹಾಗೂ ಉಪಕೇಂದ್ರದ ಆವರಣ ಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಪ್ರಸರಣ ಮಾರ್ಗದ ಒಟ್ಟು 89 ಗೋಪುರಗಳಲ್ಲಿ, 3 ಗೋಪುರಗಳ ತಳಪಾಯ ನಿರ್ಮಾಣಗೊಂಡಿದೆ. ಗುತ್ತಿಗೆ ಕರಾರಿನಂತೆ ಉಪ ಕೇಂದ್ರದ ಕಾಮಗಾರಿಯನ್ನು ನವೆಂಬರ್ ಮೊದಲು ಪೂರ್ಣಗೊಳಿಸಲು ಕಾಲಮಿತಿ ನಿಗದಿಗೊಳಿಸಲಾಗಿದೆ ಎಂದು ಇಂದನ ಸಚಿವ ಕೆ.ಜೆ.ಜಾರ್ಜ್ ಅವರು ಉತ್ತರ ನೀಡಿದ್ದಾರೆ.
ಸುಳ್ಯ ಮತ್ತು ಕಡಬ ತಾ|ನ ಮೆಸ್ಕಾಂನ ವಿವಿಧ ಉಪವಿಭಾಗಗಳಿಗೆ ಮಂಜೂರಾದ ಮತ್ತು ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಸರಕಾರ ಏನು ಕ್ರಮ ವಹಿಸಿದೆ ಎಂದು ಶಾಸಕರು ಪ್ರಶ್ನಿಸಿದ್ದು, ಸುಳ್ಯದಲ್ಲಿ 20 ಪವರ್‌ಮನ್ ಹುದ್ದೆ ಮಂಜೂರಾಗಿದ್ದು 16 ಭರ್ತಿಯಾಗಿದೆ ಎಂದ ಸಚಿವರು ಹೇಳಿದ್ದಾರೆ.
ಪೊಲೀಸ್ ಇಲಾಖೆಗೆ ಹೆಚ್ಚುವರಿ ವಾಹನ ಖರೀದಿಗೆ ಅನುದಾನ ಮೀಸಲು: ಗೃಹ ಸಚಿವ
ಬೆಂಗಳೂರು: ಸಾರ್ವಜನಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಪೊಲೀಸ್ ಇಲಾಖೆಗೆ ಹೊಸ ವಾಹನಗಳ ಖರೀದಿಗಾಗಿ 2024-25ನೇ ಸಾಲಿನಲ್ಲಿ 50 ಕೋ. ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಈ ಅನುದಾನದಲ್ಲಿ ಆದ್ಯತೆಯನುಸಾರ ವಿವಿಧ ಮಾದರಿಯ ವಾಹನಗಳನ್ನು ಖರೀದಿಸಿ ಜಿಲ್ಲೆ ಮತ್ತು ಘಟಕಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪೊಲೀಸರ ಕರ್ತವ್ಯ ನಿರ್ವಹಣೆ, ತುರ್ತು ಸಂದರ್ಭಗಳ ಬಂದೋಬಸ್ತ್, ಗಸ್ತು, ವಿವಿಐಪಿಗಳ ಎಸ್ಕಾರ್ಟ್ ಮೊದಲಾದ ಸಂದರ್ಭಗಳಲ್ಲಿ ಇಲಾಖಾ ಬಳಕೆಗೆ ವಾಹನ ಸೌಕರ್ಯಗಳ ಕೊರತೆ ಇರುವ ವಿಚಾರವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸದನದ ಗಮನಕ್ಕೆ ತಂದರು.
ವಾಹನ ಸೌಲಭ್ಯದ ಕೊರತೆ ಬಗ್ಗೆ ಸರಕಾರದ ಗಮನಕ್ಕೆ ಬಂದಿದೆ. 2023-24ನೇ ಸಾಲಿನಲ್ಲಿ ಪೊಲೀಸ್ ವಾಹನಗಳನ್ನು ಖರೀದಿಸಲು ಸರಕಾರ ಪೊಲೀಸ್ ಮೊಬಿಲಿಟಿ ಯೋಜನೆಯಡಿ 100 ಕೋ. ರೂ. ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅನುದಾನದಲ್ಲಿ ಜೆಮ್ ಪೋರ್ಟಲ್ ಮುಖಾಂತರ ವಿವಿಧ ಮಾದರಿಯ 1798 ವಾಹನಗಳನ್ನು ಖರೀದಿಸಿದ್ದು, ರಾಜ್ಯದ ನಗರ ಮತ್ತು ಜಿಲ್ಲಾ ಪೊಲೀಸ್ ಘಟಕಗಳಿಗೆ ಒದಗಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Malpe: ಮೀಟಿಂಗ್ ರೂಮ್‌ಗೆ ಬೆಂಕಿ, ಭಸ್ಮವಾದ ಕಚೇರಿ ಕಡತಗಳು
Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.