![ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ](https://www.udayavani.com/wp-content/uploads/2024/12/Ivan-D-415x296.jpg)
Sandalwood: ರಾಜ್ ಶೆಟ್ಟಿ ʼರೂಪಾಂತರʼ ಮೆಚ್ಚಿದ ಸ್ಟಾರ್ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್
Team Udayavani, Jul 25, 2024, 12:56 PM IST
![Sandalwood: ರಾಜ್ ಶೆಟ್ಟಿ ʼರೂಪಾಂತರʼ ಮೆಚ್ಚಿದ ಸ್ಟಾರ್ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್](https://www.udayavani.com/wp-content/uploads/2024/07/11-20-620x372.jpg)
ಬೆಂಗಳೂರು: ರಾಜ್ ಬಿ ಶೆಟ್ಟಿ (Raj b Shetty) ʼಒಂದು ಮೊಟ್ಟೆಯ ಕಥೆʼ ತಂಡದ ಜೊತೆ ಸೇರಿಕೊಂಡು ಮಾಡಿರುವ “ರೂಪಾಂತರ” (Roopantara Movie) ತನ್ನ ಟ್ರೇಲರ್‌ನಿಂದ ಸಿನಿಮಂದಿಯ ಗಮನ ಸೆಳೆದಿದೆ.
ಇದೇ ವಾರ (ಜು.26ರಂದು) ಸಿನಿಮಾ ಥಿಯೇಟರ್‌ನಲ್ಲಿ ತೆರೆ ಕಾಣಲಿದೆ. ಪ್ರೀ ರಿಲೀಸ್ ಆಗಿ ತೆರೆಕಂಡಿರುವ “ರೂಪಾಂತರʼಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾದ ಭಿನ್ನವಾದ ಕಥೆ ಹಾಗೂ ಪಾತ್ರಗಳನ್ನು ಹಣೆದಿರುವ ರೀತಿಗೆ ನೋಡುಗರು ಫಿದಾ ಆಗಿದ್ದಾರೆ.
ಕಾಲಿವುಡ್‌ನ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ (Karthik Subbaraj) “ರೂಪಾಂತರ” ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿರುವ ವಿಡಿಯೋವನ್ನು ನಟ ರಾಜ್ ಬಿ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ.
“ಇತ್ತೀಚೆಗೆ ನಾನು “ರೂಪಾಂತರ” ಎನ್ನುವ ಸಿನಿಮಾವನ್ನು ನನ್ನ ಸ್ನೇಹಿತನ ಜೊತೆ ನೋಡಿದೆ. ನಾನು ಸಿನಿಮಾದ ಮೊದಲ ವರ್ಷನ್ ನ್ನು ನೋಡಿದೆ. ನಿಜವಾಗಿ ಹೇಳಬೇಕೆಂದರೆ ಸಿನಿಮಾ ನೋಡಿ ನನಗೆ ರೋಮಾಂಚನವಾಯಿತು. ಭಿನ್ನ ಜನರ ನಾಲ್ಕು ಕಥೆಗಳ ಹೈಪರ್ ಲಿಂಕ್ ಸಿನಿಮಾವಿದು. ಆದರೆ ಸಿನಿಮಾದ ಕಥೆ ಹಾಗೂ ಅದನ್ನು ಬರೆದ ರೀತಿ, ಕಲಾವಿದರ ಅಭಿನಯ ನನ್ನನು ಸಿನಿಮಾದ ಮೊದಲ ಫ್ರೇಮ್‌ನಿಂದಲೇ ಕೂತು ನೋಡುವಂತೆ ಮಾಡಿತು. ನಮಗೆಲ್ಲರಿಗೂ ಗೊತ್ತು ರಾಜ್ ಬಿ ಶೆಟ್ಟಿ ಒಬ್ಬ ಅದ್ಭುತ ಕಲಾವಿದ. ಈ ಸಿನಿಮಾದಲ್ಲಿ ಅವರು ಮಾತ್ರವಲ್ಲದೆ, ಉಳಿದ ಪಾತ್ರಗಳ ಅಭಿನಯ ಕೂಡ ಅಷ್ಟೇ ಚೆನ್ನಾಗಿದೆ. ನನಗೆ ಸಿನಿಮಾ ತುಂಬಾ ಇಷ್ಟವಾಯಿತು. ನಿರ್ದೇಶನ, ಕಥೆ, ಬರವಣಿಗೆ ಎಲ್ಲಾ ಅಂಶವೂ ಇಷ್ಟವಾಯಿತು. ಥಿಯೇಟರ್ ನಲ್ಲಿ ಸಿನಿಮಾ ತುಂಬಾ ಚೆನ್ನಾಗಿ ಓಡುತ್ತದೆನ್ನುವ ಭರವಸೆಯಿದೆ. ಎಲ್ಲರೂ ಸಿನಿಮಾವನ್ನು ನೋಡಿ” ಎಂದು ಅವರು ಹೇಳಿದ್ದಾರೆ.
View this post on Instagram
ಮಿಥಿಲೇಶ್ ಎಡವಲತ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸುಹಾನ್ ಪ್ರಸಾದ್ ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ.
ಅಂಜನ್ ಭಾರದ್ವಾಜ್ ,ಲೇಖಾ ನಾಯ್ಡು , ಹನುಮಕ್ಕ, ಸೋಮಶೇಖರ್ ಬೋಲೇಗಾಂವ್,ಭರತ್ ಜಿ.ಬಿ. ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
![ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ](https://www.udayavani.com/wp-content/uploads/2024/12/Ivan-D-415x296.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು](https://www.udayavani.com/wp-content/uploads/2024/12/bigg-2-150x96.jpg)
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
![BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು](https://www.udayavani.com/wp-content/uploads/2024/12/gold-1-150x97.jpg)
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
![Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ](https://www.udayavani.com/wp-content/uploads/2024/12/17-1-150x90.jpg)
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
![Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ](https://www.udayavani.com/wp-content/uploads/2024/12/16-2-150x90.jpg)
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
![ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ](https://www.udayavani.com/wp-content/uploads/2024/12/11-20-150x90.jpg)
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.