Mohammed Shami; ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ! ಸ್ನೇಹಿತ ಹೇಳಿದ್ದೇನು?
Team Udayavani, Jul 25, 2024, 2:53 PM IST
ಹೊಸದಿಲ್ಲಿ: ಇದು ಟೀಮ್ ಇಂಡಿಯಾಕ್ಕೆ ಮರಳುವ ಹಾದಿಯಲ್ಲಿರುವ ವೇಗಿ ಮೊಹಮ್ಮದ್ ಶಮಿ ಬದುಕಿನ ದುರಂತಮಯ ಸುದ್ದಿ. ಶಮಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತಾರೆಂದು ಪತ್ನಿ ಹಸೀನಾ ಜಹಾನ್ ಮಾಧ್ಯಮದವರ ಮುಂದೆ ಆರೋಪಗೈದ ಸಂದರ್ಭದಲ್ಲಿ ನಡೆದದ್ದು. ಇದರಿಂದ ಸಂಪೂರ್ಣ ನಲುಗಿ ಹೋಗಿದ್ದ ಶಮಿ ಆತ್ಮಹತ್ಯೆಗೆ ಮುಂದಾದ ವಿದ್ಯಮಾನ. ಈ ಘಟನೆಯನ್ನು ಮೊಹಮ್ಮದ್ ಶಮಿ ಅವರ ಆತ್ಮೀಯರಲ್ಲಿ ಒಬ್ಬರಾಗಿರುವ ಉಮೇಶ್ ಕುಮಾರ್ ಹೇಳಿದ್ದಾರೆ.
“ಪತ್ನಿಯ ಆರೋಪದಿಂದ ಶಮಿ ಮಾನಸಿಕ ತಳಮಳಕ್ಕೊಳಗಾಗಿದ್ದರು. ಇದನ್ನು ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದರು. ಶಮಿ ಒಮ್ಮೆ ನಮ್ಮ ಫ್ಲ್ಯಾಟ್ನಲ್ಲಿದ್ದಾಗ ಕಟ್ಟಡದಿಂದ ಹಾರಿ ಆತ್ಮಹತ್ಯೆಯ ಪ್ರಯತ್ನಕ್ಕೆ ಮುಂದಾಗಿದ್ದರು…’ ಎಂಬುದಾಗಿ ಉಮೇಶ್ ಕುಮಾರ್ ಹೇಳಿದ್ದಾರೆ.
“ಆಗ ಬೆಳಗಿನ ಜಾವ 4 ಗಂಟೆ. ನಾನು ನೀರು ಕುಡಿಯಲೆಂದು ಎದ್ದಾಗ ಶಮಿ ಇರಲಿಲ್ಲ. ಹುಡುಕಿದಾಗ ಅವರು 19ನೇ ಮಹಡಿಯ ಬಾಲ್ಕನಿಯಲ್ಲಿ ನಿಂತಿದ್ದರು. ಅವರು ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರು. ನನ್ನ ಪಾಲಿಗೆ ಅದೊಂದು ಭಯಾನಕ ರಾತ್ರಿಯಾಗಿತ್ತು. ಇದನ್ನು ಯೋಚಿಸಲಿಕ್ಕೂ ಆಗುತ್ತಿಲ್ಲ’ ಎಂದಿದ್ದಾರೆ ಉಮೇಶ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.