IPL 2025;ಕುಸಿದು ಬಿತ್ತಾ ಗುಜರಾತ್ ಟೈಟಾನ್ಸ್ ಸಾಮ್ರಾಜ್ಯ; ಅದಾನಿ ಪಾಲಾಗುತ್ತಾ ಐಪಿಎಲ್ ತಂಡ?


ಕೀರ್ತನ್ ಶೆಟ್ಟಿ ಬೋಳ, Jul 25, 2024, 4:17 PM IST

ಕುಸಿದು ಬಿತ್ತಾ ಗುಜರಾತ್ ಟೈಟಾನ್ಸ್ ಸಾಮ್ರಾಜ್ಯ; ಅದಾನಿ ಪಾಲಾಗುತ್ತಾ ಐಪಿಎಲ್ ತಂಡ?

ಕೆಲವು ಸಾಮ್ರಾಜ್ಯಗಳೇ ಹಾಗೆ, ಮೇರು ಶಿಖರವನ್ನೇರಿ ಕೆಲವೇ ಸಮಯದಲ್ಲಿ ಕೆಳಕ್ಕೆ ಬಿದ್ದು ಬಿಡುತ್ತದೆ. ಬಹುಬೇಗನೇ ಚಕ್ರಾಧಿಪತ್ಯವನ್ನು ಪಡೆದು ಮೆರೆದ ಚಕ್ರವರ್ತಿಯೊಬ್ಬ ಕೆಲವೇ ವರ್ಷಗಳಲ್ಲಿಯೇ ಸಾಮ್ರಾಜ್ಯವನ್ನು ಕಳೆದುಕೊಂಡ ಹಾಗಾಗಿದೆ ಐಪಿಎಲ್ ನ (IPL) ಗುಜರಾತ್ ಟೈಟಾನ್ಸ್ (Gujarat Titans) ಪರಿಸ್ಥಿತಿ.

ಹೌದು, ಮೂರು ವರ್ಷಗಳ ಹಿಂದೆ ಐಪಿಎಲ್ ಪ್ರಪಂಚಕ್ಕೆ ಕಾಲಿಟ್ಟು ಮೊದಲ ವರ್ಷವೇ ಚಾಂಪಿಯನ್ ಪಟ್ಟಕ್ಕೇರಿದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಇದೀಗ ಮಾರಾಟಕ್ಕಿದೆ. ಇಂತಹ ಸುದ್ದಿಯೊಂದು ಹಲವರ ಹುಬ್ಬೇರುವಂತೆ ಮಾಡಿದೆ.

ಮೊದಲ ವರ್ಷ ಚಾಂಪಿಯನ್ ಆಗಿ, ಮುಂದಿನ ವರ್ಷ ರನ್ನರ್ ಅಪ್ ಆಗಿದ್ದ ತಂಡದಿಂದ ನಾಯಕ ಮೂರನೇ ವರ್ಷ ಹೊರಬಂದಿದ್ದರು. ಗುಜರಾತ್ ನ ಯಶಸ್ವಿ ನಾಯಕ ಹಾರ್ದಿಕ್ ಪಾಂಡ್ಯ ತಂಡ ತೊರೆದು ಮುಂಬೈ ಇಂಡಿಯನ್ಸ್ ತಂಡ ಸೇರಿ ಅಲ್ಲಿ ಚುಕ್ಕಾಣಿ ಹಿಡಿದಿದ್ದರು. ಇದೀಗ ಫ್ರಾಂಚೈಸಿಯ ಮಾಲಕತ್ವವೇ ಬದಲಾಗುವ ಸಾಧ್ಯತೆಯಿದೆ.

ಯೂರೋಪ್ ನಾಡಿನ ಲುಕ್ಸೆಂಬರ್ಗ್ ನ ಸಿವಿಸಿ ಕ್ಯಾಪಿಟಲ್ಸ್  (CVC Capitals) ಎಂಬ ಸಂಸ್ಥೆಯು 2021ರಲ್ಲಿ ಬಿಡ್ಡಿಂಗ್ ಮೂಲಕ ಗುಜರಾತ್ ಟೈಟಾನ್ಸ್ ಐಪಿಎಲ್ ಫ್ರಾಂಚೈಸಿಯನ್ನು ಖರೀದಿ ಮಾಡಿತ್ತು. ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆಯು ಅಂತಾರಾಷ್ಟ್ರೀಯ ರಗ್ಬಿ ಯೂನಿಯನ್, ವುಮೆನ್ಸ್ ಟೆನ್ನಿಸ್ ಅಸೋಸಿಯೇಶನ್, ಫಾರ್ಮುಲಾ 1 ಮತ್ತು ಸ್ಪೇನ್‌ನ ಲಾ ಲಿಗಾದಂತಹ ಉನ್ನತ ಫುಟ್‌ಬಾಲ್ ಕೂಟದಲ್ಲಿಯೂ ತನ್ನ ತಂಡಗಳನ್ನು ಹೊಂದಿದೆ.

ಕ್ರೀಡಾ ಲೋಕದಲ್ಲಿ ದೊಡ್ಡ ಹೆಸರು ಹೊಂದಿರುವ ಸಿವಿಸಿ ಕ್ಯಾಪಿಟಲ್ಸ್ 2021ರಲ್ಲಿ ಬಿಸಿಸಿಐ ಐಪಿಎಲ್ ನ ಫ್ರಾಂಚೈಸಿಗಳ ಸಂಖ್ಯೆಯನ್ನು 8ರಿಂದ 10ಕ್ಕೆ ಹೆಚ್ಚು ಮಾಡುವ ನಿರ್ಧಾರ ಮಾಡಿದಾಗ ಕ್ರಿಕೆಟ್ ಗೆ ಹೆಜ್ಜೆ ಹಾಕಿತ್ತು. ಅದಾನಿ, ಟೊರೆಂಟ್ ಗಳನ್ನು ಹಿಂದಿಕ್ಕಿದ್ದ ಸಿವಿಸಿ ಕ್ಯಾಪಿಟಲ್ಸ್ ಗುಜರಾತ್ ಮೂಲದ ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.

ಅದಾನಿ ಮತ್ತು ಟೊರೆಂಟ್ ಎರಡೂ ಸಂಸ್ಥೆಗಳೂ ಈ ಹಿಂದೆ 2021 ರಲ್ಲಿ ಅಹಮದಾಬಾದ್ ಮೂಲದ ಟೈಟಾನ್ಸ್‌ನ ಮಾಲೀಕತ್ವಕ್ಕಾಗಿ ಬಿಡ್‌ ಹಾಕಿದ್ದರು. ಅಂದು ಅದಾನಿಯು ಐಪಿಎಲ್ ತಂಡಕ್ಕಾಗಿ ₹5,100 ಕೋಟಿ (US$610 ಮಿಲಿಯನ್) ಮತ್ತು ಟೊರೆಂಟ್ ₹4,653 ಕೋಟಿ (US$556 ಮಿಲಿಯನ್) ಬಿಡ್ ಮಾಡಿತ್ತು. ಆದರೆ ಇವೆರಡನ್ನೂ ಮೀರಿಸಿ ಬಿಡ್ ಮಾಡಿದ್ದ ಸಿವಿಸಿ ಕ್ಯಾಪಿಟಲ್ಸ್ ಅಂದು ತಂಡ ಖರೀದಿಸುವಲ್ಲಿ ಯಶಸ್ವಿಯಾಗಿತ್ತು. ಅಂದ ಹಾಗೆ 2021ರಲ್ಲಿ ಸಿವಿಸಿ ಕ್ಯಾಪಿಟಲ್ಸ್ 2021 ರಲ್ಲಿ ಮಾಡಿದ ಬಿಡ್ ಹಣ ಬರೋಬ್ಬರಿ ₹5,625 ಕೋಟಿ (US$745 ಮಿಲಿಯನ್).

ಇದೀಗ ಸಿವಿಸಿ ಕ್ಯಾಪಿಟಲ್ಸ್ ತನ್ನ ಕ್ರಿಕೆಟ್ ಫ್ರಾಂಚೈಸಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ಹೆಚ್ಚಿನ ಪ್ರಮಾಣದ ಶೇರುಗಳನ್ನು ಮಾರಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಸಹಭಾಗಿತ್ವ ಹೊಂದಲು ನಿರ್ಧರಿಸಿದೆ. ವರದಿಗಳ ಪ್ರಕಾರ, ಗುಜರಾತ್ ಟೈಟಾನ್ಸ್‌ ನಲ್ಲಿ ಬಹುಪಾಲು ಶೇರುಗಳನ್ನು ಖರೀದಿಸಲು ಅದಾನಿ ಗ್ರೂಪ್ ಮತ್ತು ಟೊರೆಂಟ್ ಗ್ರೂಪ್ ಗಳೂ ಸಿವಿಸಿ ಕ್ಯಾಪಿಟಲ್ ನೊಂದಿಗೆ ಮಾತುಕತೆ ನಡೆಸುತ್ತಿವೆ. 2021 ರಲ್ಲಿ ಫ್ರ್ಯಾಂಚೈಸಿ ಖರೀದಿಸಲು ಪ್ರಯತ್ನಿಸಿ ಸೋತಿದ್ದ ಅದಾನಿ ಮತ್ತು ಟೊರೆಂಟ್ ಗ್ರೂಪ್ ಇದೀಗ ಮತ್ತೆ ಉತ್ಸುಕವಾಗಿದೆ ಎನ್ನಲಾಗಿದೆ.

2021ರಲ್ಲಿ US$745 ಮಿಲಿಯನ್ ಗೆ ಖರೀದಿಯಾಗಿದ್ದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ಪ್ರಸ್ತುತ ನಿವ್ವಳ ಮೌಲ್ಯವು $1 ಬಿಲಿಯನ್ ಮತ್ತು $1.5 ಬಿಲಿಯನ್ ನಡುವೆ ಇದೆ.

ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಗುಜರಾತ್ ಟೈಟಾನ್ಸ್ ಅದಾನಿ ಪಾಲಾಗುವ ಲಕ್ಷಣಗಳು ಹೆಚ್ಚಿದೆ. 2021ರಲ್ಲಿ ಐಪಿಎಲ್ ತಂಡ ಖರೀದಿ ಮಾಡಲು ವಿಫಲರಾದ ಅದಾನಿ ಬಳಿಕ ಕ್ರಿಕೆಟ್ ಲೋಕಕ್ಕೆ ಎಂಟ್ರಿ ನೀಡಿದ್ದರು. ಇಂಟರ್ನ್ಯಾಷನಲ್ ಲೀಗ್ T20 ನಲ್ಲಿ ಆಡುವ ಗಲ್ಫ್ ಜೈಂಟ್ಸ್ ತಂಡವನ್ನು ಹೊಂದಿರುವ ಅದಾನಿ ಸಂಸ್ಥೆ, ಕಳೆದ ವರ್ಷ ಪ್ರಾರಂಭವಾದ ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ಅಹಮದಾಬಾದ್ ಮೂಲದ ಫ್ರಾಂಚೈಸಿಗಾಗಿ ₹1,289 ಕೋಟಿ (US$158 ಮಿಲಿಯನ್) ಬಿಡ್ ಮಾಡಿ ಯಶಸ್ವಿಯಾಗಿತ್ತು.

ಕೋಚ್ ಆಗ್ತಾರಾ ಸಿಕ್ಸರ್ ಕಿಂಗ್

2007 ಟಿ20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರು ಐಪಿಎಲ್ ತಂಡದ ಕೋಚ್ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಐಪಿಎಲ್ ನಲ್ಲಿ ಆಟಗಾರನಾಗಿ ಹಲವು ತಂಡಗಳನ್ನು ಪ್ರತಿನಿಧಿಸಿರುವ ಯುವಿ ಇದೀಗ ಗುಜರಾತ್ ಟೈಟಾನ್ಸ್ ಕೋಚ್ ಆಗುವ ಸಾಧ್ಯತೆಯಿದೆ.

ಕಳೆದ ಮೂರು ಸೀಸನ್ ನಲ್ಲಿ ಗುಜರಾತ್ ಕೋಚ್ ಆಗಿದ್ದ ಆಶಿಶ್ ನೆಹ್ರಾ ಮತ್ತು ತಂಡದ ನಿರ್ದೇಶಕ ವಿಕ್ರಮ್ ಸೋಲಂಕಿ ಅವರು ಫ್ರಾಂಚೈಸಿ ತೊರೆಯಲು ಮುಂದಾಗಿದ್ದಾರೆ ಎನ್ನುತ್ತಿದೆ ವರದಿ. “ಬಹಳಷ್ಟು ಬದಲಾವಣೆಗಳು ನಡೆಯುತ್ತಿದೆ. ಆಶಿಶ್ ನೆಹ್ರಾ ಮತ್ತು ವಿಕ್ರಮ್ ಸೋಲಂಕಿ ಮುಂದುವರಿಯುವ ಸಾಧ್ಯತೆಯಿಲ್ಲ. ಯುವರಾಜ್ ಸಿಂಗ್ ಬಗ್ಗೆ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ. ಇದೀಗ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಆದರೆ ಗುಜರಾತ್ ಟೈಟಾನ್ಸ್‌ ನ ಕೋಚಿಂಗ್ ಸಿಬ್ಬಂದಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗಬಹುದು” ಎಂದು ಮೂಲಗಳು ಹೇಳುತ್ತವೆ.

ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

smi irani

Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?

1

South Indian actors: ನಾಗಾರ್ಜುನ್‌ ಟು ವಿಜಯ್; ದಕ್ಷಿಣ ಭಾರತದ ಶ್ರೀಮಂತ‌ ನಟರು ಯಾರ‍್ಯಾರು

Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ

Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.