TATA ಕರ್ವ್ ಐಸಿಇ, ಇವಿ ಮಾರುಕಟ್ಟೆಗೆ
Team Udayavani, Jul 26, 2024, 8:00 AM IST
ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಎಸ್‌ಯುವಿ ವಿನ್ಯಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದೆ. ಅದರ ಭಾಗವಾಗಿ ಟಾಟಾ ಕರ್ವ್ ಐಸಿಇ ಮತ್ತು ಇವಿಯನ್ನು ಅನಾವರಣಗೊಳಿಸಲಿದೆ.
ಟಾಟಾ ಕರ್ವ್ ಭಾರತದ ಮೊದಲ ಎಸ್‌ಯುವಿ ಕೂಪ್ ಆಗಿದೆ. ಆ.7ರಂದು ಹೊಸ ಟಾಟಾ ಕರ್ವ್ ಬಿಡುಗಡೆಯಾಗಲಿದೆ. ಇದು ಟಾಟಾ ಕರ್ವ್‌ನ ಇವಿ ಆವೃತ್ತಿಯಾಗಿದ್ದು, ಇದರ ಬೆನ್ನಲ್ಲಿಯೇ ಐಸಿಐ ಆವೃತ್ತಿಗಳು ಬಿಡುಗಡೆಯಾಗಲಿವೆ.
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ. ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿ.ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಮಾತನಾಡಿ, ಟಾಟಾ ಮೋಟಾರ್ಸ್ ಭಾರತೀಯ ಎಸ್‌ಯುವಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಆಕರ್ಷಕ ವಿನ್ಯಾಸ, ಅತ್ಯುತ್ತಮ ರೋಡ್ ಪ್ರಸೆನ್ಸ್, ಕಾರ್ಯಕ್ಷಮತೆ ವಿಭಾಗದಲ್ಲಿ ವಿಶೇಷವಾಗಿರುವ ವಾಹನಗಳನ್ನು ನೀಡುತ್ತಲೇ ಬಂದಿದ್ದೇವೆ ಎಂದರು.
ನಮ್ಮ ಎಸ್‌ಯುವಿ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ಬಲಪಡಿಸಲು ಭಾರತದ ಮೊದಲ ಎಸ್‌ಯುವಿ ಕೂಪ್ ಆಗಿರುವ ಟಾಟಾ ಕರ್ವ್‌ನ್ನು ಅನಾವರಣಗೊಳಿಸುತ್ತಿದ್ದೇವೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ದೊರೆಯಲಿದೆ. ಕರ್ವ್ ಮೂಲಕ ನಾವು ಮಧ್ಯಮ ಎಸ್‌ಯುವಿ ಬಯಸುವ ಗ್ರಾಹಕರ ಅಗತ್ಯಗಳನ್ನು ಪೂರೈಸಲಿದ್ದೇವೆ ಎಂದು ಹೇಳಿದರು.
ಕಾರಿನ ವೈಶಿಷ್ಟ್ಯಗಳು
ಟಾಟಾ ಕರ್ವ್ ಆಧುನಿಕ ಮತ್ತು ಅತ್ಯುತ್ತಮ ಇಂಟೀರಿಯರ್ ಹೊಂದಿದೆ. ವಿಶಾಲವಾದ ಕ್ಯಾಬಿನ್ ಸ್ಪೇಸ್ ಲಭ್ಯವಿದೆ ಮತ್ತು ಎಸ್‌ಯುವಿ ಕೂಪ್ ದೇಹ ರಚನೆ ಇದೆ. ಅತ್ಯುತ್ತಮ- ದರ್ಜೆಯ ತಂತ್ರಜ್ಞಾನಗಳ ಏಕೀಕರಣ ಮತ್ತು ಆಕರ್ಷಕ ಬಣ್ಣಗಳು, ಉತ್ತಮ ಸಾಮಗ್ರಿಗಳು ಮತ್ತು ಉತ್ತಮ ಫಿನಿಶಿಂಗ್ ಸೇರಿದಂತೆ ಇತರ ವೈಶಿಷ್ಟ್ಯತೆ ಯಿಂದಾಗಿ ಕಾರಿನ ಕ್ಯಾಬಿನ್ ಅತ್ಯಂತ ಸುಂದರವಾಗಿ ರೂಪುಗೊಂಡಿದೆ. ಇದರ ಪ್ಯಾನೋರಾಮಿಕ್ ಗ್ಲಾಸ್ ರೂಫ್ ಕ್ಯಾಬಿನ್‌ಗೆ ನೈಸರ್ಗಿಕ ಬೆಳಕು ಬೀಳಲು ಸಹಕಾರಿಯಾಗಿದೆ. ಗ್ರಾಹಕರ ಅಗತ್ಯಗಳನ್ನು ಪೂರೈಸಲು ಬೂಟ್ ಸ್ಪೇಸ್ ಅಥವಾ ಸ್ಟೋರೇಜ್ ಜಾಗವನ್ನು ಮರು ಸಂರಚಿಸಲಾಗಿದ್ದು, ಹೆಚ್ಚು ವಸ್ತುಗಳನ್ನು ಇಡಬಹುದಾದ ಸ್ಟೋರೇಜ್ ಜಾಗ ಲಭ್ಯವಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರೆಯುತ್ತದೆ. ಜತೆಗೆ ಲಾಂಗ್ ಡ್ರೈವಿಂಗ್ ರೇಂಜ್ ಒದಗಿಸುವ ಎಲೆಕ್ಟ್ರಿಕ್ ವೇರಿಯಂಟ್‌ಗಳು ಲಭ್ಯವಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.