Session; ಗದ್ದಲದ ನಡುವೆ 5 ಮಸೂದೆ ಅಂಗೀಕಾರ! ಕೆರಳಿದ ವಿಪಕ್ಷಗಳಿಂದ ಮುಂದುವರಿದ ಪ್ರತಿಭಟನೆ

ಮುಡಾ ವಿರುದ್ಧದ ಚರ್ಚೆಗೆ ಅವಕಾಶ ನೀಡದ ಸಭಾಪತಿ ಬಸವರಾಜ ಹೊರಟ್ಟಿ

Team Udayavani, Jul 26, 2024, 12:06 AM IST

ಗದ್ದಲದ ನಡುವೆ 5 ಮಸೂದೆ ಅಂಗೀಕಾರ! ಕೆರಳಿದ ವಿಪಕ್ಷಗಳಿಂದ ಮುಂದುವರಿದ ಪ್ರತಿಭಟನೆ

ಬೆಂಗಳೂರು: ಅಹೋರಾತ್ರಿ ಧರಣಿ ಅನಂತರವೂ ಮುಡಾ ನಿವೇಶನ ಹಂಚಿಕೆ ಹಗರಣ ಕುರಿತ ಚರ್ಚೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಳ್ಳಿಹಾಕಿದ್ದರಿಂದ ಗುರುವಾರ ಕೂಡ ಮೇಲ್ಮನೆಯಲ್ಲಿ ವಿಪಕ್ಷಗಳ ಹೋರಾಟ ಮುಂದುವರಿಯಿತು. ಆ ಗದ್ದಲದ ನಡುವೆಯೇ ವಿಧಾನಸಭೆಯಿಂದ ಅಂಗೀಕೃತವಾಗಿದ್ದ ಬಹುತೇಕ ಎಲ್ಲ ಮಸೂದೆಗಳಿಗೆ ಅನುಮೋದನೆ ನೀಡಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಮುಡಾ ಹಗರಣ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಬಾವಿಗಿಳಿದು ಧರಣಿ ನಡೆಸಿದ ವಿಪಕ್ಷಗಳ ಸದಸ್ಯರು, ಈಗಾಗಲೇ ಅಹೋರಾತ್ರಿ ಧರಣಿ ನಡೆಸಿದ್ದೇವೆ. ಒಂದು ದಿನದ ಹಿಂದೆಯೇ ಮರುಪರಿಶೀಲನೆ ಅರ್ಜಿ ಸಲ್ಲಿಸಲಾಗಿತ್ತು. ಅದರ ಪರಿಶೀಲನೆಗೆ ಸಾಕಷ್ಟು ಸಮಯಾವಕಾಶವನ್ನೂ ತೆಗೆದುಕೊಂಡಿದ್ದೀರಿ. ಈಗಲಾದರೂ ಅವಕಾಶ ಕಲ್ಪಿಸಬೇಕು ಎಂದು ಸಭಾಪತಿಗಳಿಗೆ ಮನವಿ ಮಾಡಿದರು.

ಪ್ರತಿಕ್ರಿಯಿಸಿದ ಸಭಾಪತಿಗಳು, ನಿಯಮ 62ರ ಅಡಿ ನಿಲುವಳಿ ಸೂಚನೆ ಮಂಡನೆಗೆ ವಿಪಕ್ಷ ನಾಯಕರು ಈಗಾಗಲೇ ನಿರಾಕರಿಸಿದ ಪ್ರಸ್ತಾವವನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ವಿಚಾರದ ಬಗ್ಗೆ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗ ನೇಮಕ ಮಾಡಿದ್ದು ತನಿಖೆ ನಡೆಯುತ್ತಿದೆ. ತನಿಖೆ ನಡೆಸಿ ವರದಿ ನೀಡುವಂತೆ ಸರಕಾರ ಆಯೋಗಕ್ಕೆ ಹೇಳಿದೆ. ಹಾಗಾಗಿ ಮರುಪರಿಶೀಲನೆ ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ಪ್ರಕಟಿಸಿದರು. ಇದರ ಬೆನ್ನಲ್ಲೇ ಆಡಳಿತ ಪಕ್ಷದವರು ಮೇಜು ಕುಟ್ಟಿ ಸ್ವಾಗತಿಸಿದರು.

ನಿರ್ಣಯವನ್ನು ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು 40 ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಒಂದೇ ಒಂದು ಕಪ್ಪುಚುಕ್ಕೆ ಇಲ್ಲ. ಇದರಿಂದ ವಿಪಕ್ಷಗಳಿಗೆ ಹೊಟ್ಟೆಕಿಚ್ಚು ಶುರುವಾಗಿದೆ. ಹಾಗಾಗಿ ನನಗೆ ಮಸಿ ಬಳಿಯಬೇಕು ಎಂಬ ದುರುದ್ದೇಶದಿಂದ ಹಗರಣವೇ ಇಲ್ಲದಿದ್ದರೂ ಹಗರಣದಂತೆ ಬಿಂಬಿಸಲು ಹೊರಟಿದ್ದಾರೆ. ಸಭಾಪತಿಗಳು ಯಾವುದೇ ಕಾರಣಕ್ಕೂ ನಿರ್ಣಯ ದಿಂದ ಹಿಂದೆ ಸರಿಯಬಾರದು ಎಂದರು.

ಮತ್ತಷ್ಟು ಕೆರಳಿದ ವಿಪಕ್ಷಗಳ ಸದಸ್ಯರು, ಮುಡಾ ನಿವೇಶನಗಳನ್ನು ನುಂಗಿ ನೀರುಕುಡಿದ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ… ಸಮಾಜವಾದಿ ಅಂತಾರೆ ಬಡವರ ಸೈಟ್‌ಗಳನ್ನು ನುಂಗುತ್ತಾರೆ…’ ಅಂತ ಘೋಷಣೆ ಕೂಗಿದರು. ಮತ್ತೂಂದೆಡೆ ಬಹುದೊಡ್ಡ ಹಗರಣ ಇದಾಗಿದ್ದರಿಂದ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಸಭಾಪತಿಗಳನ್ನೂ ಒತ್ತಾಯಿಸಿದರು.

ಕೇವಲ ಅರ್ಧಗಂಟೆಯಲ್ಲಿ ಅಂಗೀಕಾರ
ಕೇವಲ ಅರ್ಧಗಂಟೆಯಲ್ಲಿ 5 ಮಸೂದೆಗಳು ಮತ್ತು 2 ನಿರ್ಣಯಗಳ ಮಂಡನೆ ಜತೆಗೆ ಅಂಗೀಕಾರಗೊಂಡವು. ಅಷ್ಟೇ ಅಲ್ಲ, ವರದಿ ಮತ್ತು ಕಾಗದಪತ್ರಗಳನ್ನು ಇದೇ ಅವಧಿಯಲ್ಲಿ ಮಂಡಿಸಲಾಯಿತು.

ಈ ಪೈಕಿ ಕರ್ನಾಟಕ ಧನವಿನಿಯೋಗ (ಸಂಖ್ಯೆ-4) ಮಸೂದೆ -2024, ಕರ್ನಾಟಕ ನೀರಾವರಿ (ತಿದ್ದುಪಡಿ) ಮಸೂದೆ, ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ಎರಡನೇ ತಿದ್ದುಪಡಿ) ಮಸೂದೆ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ದಿ) ಮಸೂದೆ, ಸರಕು-ಸೇವೆಗಳ ಮಸೂದೆಗಳು ಚರ್ಚೆ ಇಲ್ಲದೆ ಅಂಗೀಕಾರಗೊಂಡವು.

2026ರಲ್ಲಿನ ಅಥವಾ ಅದರ ಅನಂತರ ನಡೆಸುವ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ನಡೆಸಬಾರದು. 1971ರ ಜನಗಣತಿ ಆಧರಿಸಿ ನಿರ್ಧರಿಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು. ಜತೆಗೆ ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯ ಉಂಟುಮಾಡಲಿದೆ. ಹಾಗಾಗಿ ಈ ನೀತಿಯನ್ನು ಅನುಷ್ಠಾನಗೊಳಿಸಬಾರದು ಎಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನೂ ಕೈಗೊಳ್ಳಲಾಯಿತು.

ಟಾಪ್ ನ್ಯೂಸ್

COngress-Meet

Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Chmber-Meeting

Film Industry: ಕನ್ನಡ ಚಿತ್ರರಂಗದ ನಟಿಯರ ರಕ್ಷಣೆಗೆ ಪಾಶ್‌ ಸಮಿತಿ: ನಾಗಲಕ್ಷ್ಮಿ ಚೌಧರಿ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

1-wqeqwewqe

J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Nagamangala ಗಲಭೆಗೆ ಪಿಎಫ್ಐ,ಎಸ್‌ಡಿಪಿಐ ಕುಮ್ಮಕ್ಕು: ಈಶ್ವರಪ್ಪ

Nagamangala ಗಲಭೆಗೆ ಪಿಎಫ್ಐ,ಎಸ್‌ಡಿಪಿಐ ಕುಮ್ಮಕ್ಕು: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

COngress-Meet

Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ

Chmber-Meeting

Film Industry: ಕನ್ನಡ ಚಿತ್ರರಂಗದ ನಟಿಯರ ರಕ್ಷಣೆಗೆ ಪಾಶ್‌ ಸಮಿತಿ: ನಾಗಲಕ್ಷ್ಮಿ ಚೌಧರಿ

Ram Jarakiholi

B.Y.Vijayendra ಭ್ರಷ್ಟ, ಅವನನ್ನು ನಾನೆಂದೂ ಒಪ್ಪುವುದಿಲ್ಲ!: ರಮೇಶ್ ಜಾರಕಿಹೊಳಿ ಕಿಡಿ

R.Ashok

Nagamangala Riot: ಗಲಭೆಯಲ್ಲಿ ಪಾಕ್‌ ಪರ ಘೋಷಣೆ ಕೂಗಿರುವ ಅನುಮಾನವಿದೆ: ಆರ್‌.ಅಶೋಕ್‌

HDK (3)

H D Kumaraswamy; ಮಾನವ ಸರಪಳಿಯಿಂದ ಪ್ರಜಾಪ್ರಭುತ್ವವನ್ನು ಕಾಪಾಡಬಹುದೇ?

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

COngress-Meet

Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Chmber-Meeting

Film Industry: ಕನ್ನಡ ಚಿತ್ರರಂಗದ ನಟಿಯರ ರಕ್ಷಣೆಗೆ ಪಾಶ್‌ ಸಮಿತಿ: ನಾಗಲಕ್ಷ್ಮಿ ಚೌಧರಿ

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

Thirthahalli: ಡಿಜೆ ಶಬ್ದಕ್ಕೆ ವೃದ್ಧ ದುರ್ಮರಣ

Thirthahalli: ಡಿಜೆ ಶಬ್ದಕ್ಕೆ ವೃದ್ಧ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.