Sea Erosion: ಸೋಮೇಶ್ವರ-ಉಚ್ಚಿಲ: ಬಿರುಸಾದ ಕಡಲ್ಕೊರೆತ… ರಸ್ತೆ ಸಮುದ್ರ ಪಾಲಾಗುವ ಸಾಧ್ಯತೆ
Team Udayavani, Jul 26, 2024, 10:54 AM IST
ಉಳ್ಳಾಲ: ಸೋಮೇಶ್ವರ-ಉಚ್ಚಿಲ ಸಮುದ್ರ ತೀರ ಪ್ರಕ್ಷುಬ್ಧಗೊಂಡಿದೆ. ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಸಮುದ್ರ ಕೊರೆತ ಮುಂದುವರಿದಿದ್ದು, ನ್ಯೂ ಉಚ್ಚಿಲದ ವಾಸ್ಕೋ ಗೆಸ್ಟ್ ಹೌಸ್ ಬಳಿ ಸಮುದ್ರದ ಕೊರೆತ ಹೆಚ್ಚಾಗಿದೆ.
ನ್ಯೂ ಉಚ್ಚಿಲದಿಂದ ಸೋಮೇಶ್ವರ ರೈಲು ನಿಲ್ದಾಣವನ್ನು ಸಂಪರ್ಕಿಸುವ ರಸ್ತೆ ಕಡಲು ಪಾಲಾಗುವ ಸಾಧ್ಯತೆ ಇದ್ದು, ರಸ್ತೆಯಿಂದ 2 ಮೀಟರ್ ಅಂತರದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಒಂದು ಮನೆ ಅಪಾಯದಲ್ಲಿದ್ದು, ಉಚ್ಚಿಲದಲ್ಲೂ ಕಡಲ್ಕೊರೆತದಿಂದ ಮನೆಗಳು ಅಪಾಯದಲ್ಲಿದೆ.
ಉಚ್ಚಿಲ ಬಟ್ಟಪ್ಪಾಡಿ ಬಳಿ ಎರಡು ವರ್ಷಗಳ ಹಿಂದೆಯೇ ರಸ್ತೆ ಸಮುದ್ರ ಪಾಲಾಗಿ ಉಚ್ಚಿಲ ಎಂಡ್ ಪಾಯಿಂಟ್ ಸಂಪರ್ಕ ಕಡಿತಗೊಂಡಿತ್ತು. ಅಲ್ಲಿ 7ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಡಿತವಾಗಿತ್ತು. ಕಳೆದ ವರ್ಷ ಒಂದು ಮನೆ ಮದರಸ ಕಟ್ಟಡ ಸಮುದ್ರ ಪಾಲಾಗಿತ್ತು. ಈ ಬಾರಿ ಇನ್ನೊಂದು ಮನೆ ಸಮುದ್ರ ಪಾಲಾಗಿತ್ತು. ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಮಾತ್ರ ಇದ್ದ ಕಡಲ್ಕೊರೆತವು ಶಾಶ್ವತ ಕಾಮಗಾರಿ ನಡೆದಿರುವ ನ್ಯೂ ಉಚ್ಚಿಲ, ಉಚ್ಚಿಲ ಪ್ರದೇಶದಲ್ಲೂ ಮುಂದುವರಿದಿದೆ. ನ್ಯೂ ಉಚ್ಚಿಲದಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸದಿದ್ದರೆ ರಸ್ತೆ ಸಮುದ್ರ ಪಾಲಾಗುವ ಸಾಧ್ಯತೆ ಇದೆ. ಇಲ್ಲಿ ಯೋಗೀಶ್ ಸೋಮೇಶ್ವರ ಅವರ ಮನೆ ಅಪಾಯದಲ್ಲಿದೆ.
ಇದನ್ನೂ ಓದಿ:Mangaluru: ತಿಂಗಳೊಳಗೆ ಗೋಹತ್ಯೆ ತಡೆಯದಿದ್ದರೆ ಪ್ರತಿಭಟನೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.