Google ಮ್ಯಾಪ್ ಗೆ 6 AI ವೈಶಿಷ್ಟ್ಯ ಪರಿಚಯಿಸಿದ ಗೂಗಲ್ ದಾರಿ ಹುಡುಕಾಟ ಸುಲಭ!!
Team Udayavani, Jul 26, 2024, 4:06 PM IST
ಸರ್ಚ್ ಎಂಜಿನ್ ಎಂದೇ ಹೆಸರುವಾಸಿಯಾದ ಗೂಗಲ್ ಇದೀಗ ತನ್ನದೇ ಗೂಗಲ್ ಮ್ಯಾಪ್ ನಲ್ಲಿ ಹೊಸದಾಗಿ ಅಐನ 6 ಫೀಚರ್ ಗಳನ್ನು ಪರಿಚಯಿಸಿದೆ. ವಿಶೇಷವೆಂದರೆ ಗೂಗಲ್ ಮ್ಯಾಪ್ ಗೆ ಅಐ ಯನ್ನು ಪರಿಚಯಿಸಿದ್ದು ಪ್ರಯಾಣದ ಮಾರ್ಗ ಮತ್ತಷ್ಟು ಸುಲಭವಾಗಲಿದೆ .
ಸುಮಾರು 220 ಕ್ಕೂ ಹೆಚ್ಚು ದೇಶಗಳನ್ನೊಳಗೊಂಡ ಗೂಗಲ್ ಮ್ಯಾಪ್ ನಲ್ಲಿ ಹೊಸದಾಗಿ ಪರಿಚಯವಾದ 6 ವಿಶೇಷತೆಗಳು ಬಳಕೆದಾರರಿಗೆ ಹರ್ಷವನ್ನು ತಂದೊಡ್ಡಿದ್ದಂತೂ ಸುಳ್ಳಲ್ಲ.
ಗೂಗಲ್ ಮ್ಯಾಪ್ ಬಳಕೆದಾರರಿಗೆ ಹಲವು ಬಾರಿ ರಸ್ತೆಯ ಅಗಲವೂ ಸಮಸ್ಯೆಯನ್ನು ತಂದೊಡ್ಡಿವೆ. ಅದರಲ್ಲೂ ದೊಡ್ಡ ಗಾತ್ರದ ವಾಹಗಳು ಕಾರು ಲಾರಿಗಳಂತಹ ವಾಹನಗಳ ಚಾಲಕರು ಮ್ಯಾಪ್ ಬಳಸಿ ಸಾಗಿರುತ್ತಾರೆ. ಆದರೆ ಮುಂಬರುವ ರಸ್ತೆಯ ಅಗಲವೂ ಕಿರಿದಾಗಿದ್ದು ವಾಹನ ಚಾಲಕರು, ಪ್ರಯಾಣಿಕರನ್ನು ಪೇಚಿಗೀಡುಮಾಡುತ್ತದೆ. ಹಾಗಾಗಿ ವಾಹನ ಸಂಚಾರಕರಿಗೆ ಸ್ಯಾಟಲೈಟ್ ಚಿತ್ರಣ, ಸ್ಟ್ರೀಟ್ ವೀವ್, ಹಾಗೂ ಇನ್ನಿತರ ಡಾಟಾಗಳ ಮೂಲಕ ರಸ್ತೆಗಳ ಅಗಲವನ್ನು ಪರಿಶೀಲಿಸುವ ಅವಕಾಶವನ್ನು ನೀಡುವ ಮೂಲಕ ಮಾರ್ಗ ಹುಡುಕಲು ಅಥವಾ ವಾಹನ ಚಾಲಕರಿಗೆ ಸಮರ್ಪಕ ಮಾಹಿತಿ ಸೂಚಿಸುತ್ತದೆ. ಸದ್ಯ ಈ ಸೌಲಭ್ಯವನ್ನು ಹೈದರಾಬಾದ್, ಚೆನ್ನೈ, ಬೆಂಗಳೂರು ಹಾಗೂ ಇನ್ನಿತರ 8 ನಗರಗಳಿಗೆ ಒದಗಿಸಲಾಗಿದೆ.
ಮ್ಯಾಪ್ ಬಳಸುವ ವಾಹನ ಚಾಲಕರು ಎದುರಿಸುತ್ತಿದ್ದ ಮತ್ತೊಂದು ಸಮಸ್ಯೆಯೆಂದರೆ ಫ್ಲೈಓವರ್. ದಾರಿ ಮಧ್ಯೆ ಫ್ಲೈಓವರ್ ಗಳು ಬಂದಾಗ ಆ ಮೂಲಕ ಸಾಗಬೇಕೋ, ಬೇಡವೋ ಎಂಬುದು ದೊಡ್ಡ ಸಮಸ್ಯೆಯಾಗಿತ್ತು. ಆದರೆ ಗೂಗಲ್ ಮ್ಯಾಪ್ ನಲ್ಲಿ ಫ್ಲೈಓವರ್ ನ್ನು ಹೈಲೈಟ್ ಮಾಡೋ ಮೂಲಕ ಭಾರತದ 40 ನಗರಗಳ ಬಳಕೆದಾರರಿಗೆ ದಾರಿಯ ಸ್ಪಷ್ಟ ಚಿತ್ರಣವನ್ನು ಒದಗಿಸಿದೆ.
ಗೂಗಲ್ ಮೆಟ್ರೋ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಗೂಗಲ್ ಮ್ಯಾಪ್ ನಲ್ಲಿಯೇ ಹೊಸದಾಗಿ ಅಳವಡಿಸಿದ್ದು ಗೂಗಲ್ ಮ್ಯಾಪ್ ಬಳಕೆದಾರರು ನೇರವಾಗಿ ಇದರಲ್ಲಿಯೇ ಮೆಟ್ರೋ ಟಿಕೆಟನ್ನು ಬುಕ್ ಮಾಡಬಹುದಾಗಿದೆ. ಸದ್ಯ ಪ್ರಾಯೋಗಿಕವಾಗಿ ಈ ಸೌಲಭ್ಯವನ್ನು ಚೆನ್ನೈ ಮತ್ತು ಕೊಚ್ಚಿಯಲ್ಲಿ ಪ್ರಾರಂಭಿಸಲಾಗಿದೆ.
ಇನ್ನು ಮುಂದೆ ಗೂಗಲ್ ಮ್ಯಾಪ್ ಪೆಟ್ರೋಲ್ ಬಂಕ್ ಗಳ ವಿವರವನ್ನು ನೀಡುವಂತೆಯೇ ಇವಿ ಚಾರ್ಜಿಂಗ್ ಸ್ಟೇಷನ್ಸ್ ಗಳ ಮಾಹಿತಿಯನ್ನು ಒದಗಿಸುತ್ತದೆ. ಗೂಗಲ್ ಕಂಪನಿಯು ದೇಶದಲ್ಲಿನ ಇವಿ ಚಾರ್ಜಿಂಗ್ ಸ್ಟೇಷನ್ಸ್ ನೊಂದಿಗೆ ಒಪ್ಪಂದ ನಡೆಸಿ ಗೂಗಲ್ ಮ್ಯಾಪ್ ನಲ್ಲಿ 8000 ಕ್ಕೂ ಅಧಿಕ ಇ ವಿ ಚಾರ್ಜಿಂಗ್ ಸ್ಟೇಷನ್ ಗಳ ಮಾಹಿತಿಯನ್ನು ಒದಗಿಸಿದ್ದು ಇಡೀ ವಿಶ್ವದಲ್ಲಿ ಭಾರತವೇ ಈ ಸೌಲಭ್ಯವನ್ನು ಒದಗಿಸಿದ ಮೊದಲ ದೇಶವಾಗಿದೆ.
ಬಳಕೆದಾರರಿಗೆ ಸ್ಥಳೀಯ ಪರಿಸರದ ಹೆಚ್ಚಿನ ಮಾಹಿತಿಯನ್ನು ಹಾಗೂ ಸ್ಥಳೀಯ ಪ್ರವಾಸಿ ತಾಣಗಳ, ಸ್ಥಳಗಳ ಪಟ್ಟಿಯನ್ನು ನೀಡುವ ಸಲುವಾಗಿ ಗೂಗಲ್ ಸ್ಥಳೀಯ ಪರಿಣಿತರೊಂದಿಗೆ ಸಹಯೋಗವನ್ನು ನಡೆಸಿದ್ದು, ಪ್ರಾಯೋಗಿಕವಾಗಿ 10 ನಗರಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದೆ.
ಗೂಗಲ್ ಮ್ಯಾಪ್ ನ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಸಂಚರಿಸುವ ದಾರಿಯಲ್ಲಿ ಉಂಟಾಗಿರುವ ತೊಡಕುಗಳನ್ನು
ಸಮಸ್ಯೆಯನ್ನು ಕೂಡಲೇ ವರದಿ ಮಾಡುವ ಮೂಲಕ ಸಹಾಯ ಮಾಡುತ್ತದೆ.
ಕೆಲವೊಂದು ಬಾರಿ ಗೂಗಲ್ ಮ್ಯಾಪ್ ಬಳಕೆದಾರರು ಅದರಿಂದ ಲಭಿಸಿದ ಮಾಹಿತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಅಂತಹ ಸಮಸ್ಯೆಗಳಿಗೆಲ್ಲಾ ಗೂಗಲ್ ಇದೀಗ ಸೂಕ್ತವಾದ ಪರಿಹಾರ ನೀಡಿದ್ದು, ಪ್ರಯಾಣಿಕರಿಗೆ ಸಂಚಾರ ಇನ್ನಷ್ಟು ಸುಲಭಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.