Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ
Team Udayavani, Jul 26, 2024, 6:50 PM IST
ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ಶಿರೂರು ಬಳಿ ನಡೆದ ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆಗೆ ಶುಕ್ರವಾರ ಕೂಡಾ ಆಗಾಗ ಬಿದ್ದ ರಭಸದ ಮಳೆ ಹಾಗೂ ನದಿಯ ನೀರಿನ ವೇಗ ಅಡ್ಡಿಯಾಯಿತು.
ನದಿಯಾಳದಲ್ಲಿ ಸಿಲುಕಿರುವ ಭಾರತ್ ಬೆಂಜ್ ಟ್ರಕ್, ಗ್ಯಾಸ್ ಟ್ಯಾಂಕರ್ ಚೆಸ್ಸಿ ಇರುವ ಜಾಗವನ್ನು ಹುಡುಕಲು ಡ್ರೋನ್ ಯಶಸ್ವಿಯಾದರೂ ಟ್ರಕ್ ಇರುವ ಸ್ಥಳ ತಲುಪಲು ಮುಳುಗು ತಜ್ಞರಿಗೆ ಸಾಧ್ಯವಾಗಲಿಲ್ಲ. ನದಿ ನೀರಿನ ಅಂಡರ್ ಕರೆಂಟ್ 6.6 ನಾಟ್ಸ್ (nots) ವೇಗದ ಕಾರಣ ನದಿ ನೀರಿಗೆ ಧುಮುಕಿ ಟ್ರಕ್ ಇರುವ ಸ್ಥಳ ತಲುಪಲು ನೇವಿ ಮುಳುಗು ತಜ್ಞರಿಗೆ ಸಾಧ್ಯವಾಗಲಿಲ್ಲ. ನದಿ, ಸಮುದ್ರದಲ್ಲಿ ಈಜುವ ನೇವಿ ಪರಿಣಿತರು ಎರಡು ಸಲ ಗಂಗಾವಳಿ ನದಿಯ ಬಳಿಗೆ ಆಗಮಿಸಿ, ನದಿಗೆ ಇಳಿಯಲು ವಿಫಲ ಪ್ರಯತ್ನ ನಡೆಸಿದರು.
ಕಾರವಾರ ಶಾಸಕ ಸೈಲ್, ಕೇರಳದ ಲೋಕಪಯೋಗಿ ಸಚಿವರು, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಶಿರೂರು ಸ್ಥಳದಲ್ಲಿದ್ದು ಶುಕ್ರವಾರ ಡ್ರೋನ್ ಬಳಸಿ ನಡೆಸಿದ ಕಾರ್ಯಾಚರಣೆಯನ್ನು ಖುದ್ದಾಗಿ ವೀಕ್ಷಿಸಿದರು.
ನಾಳೆ ನದಿಯಲ್ಲಿ ಕಾರ್ಯಾಚರಣೆ ಮಾಡಲು ಶಾಸಕರು ಗೋವಾದಿಂದ ಬಾರ್ಜ ಹಾಗೂ ಪ್ಲಾಟ್ ಫಾರಂ ತರಿಸುತ್ತಿದ್ದು, ಶಿರೂರು ಗಂಗಾವಳಿ ನದಿಯ ಬಳಿ ಟ್ರಕ್ ಮೇಲೆ ತರಲು ಮತ್ತೊಂದು ಪ್ರಯತ್ನ ನಡೆಯಲಿದೆ.
ಶಿರೂರು ಹೆದ್ದಾರಿ ಪಕ್ಕದ ಗುಡ್ಡ ಭೂಕುಸಿತದಲ್ಲಿ ಇನ್ನೂ ಮೂವರ ಶವ ದೊರೆಯಬೇಕಿದೆ. ಈಗಾಗಲೇ ದೊರೆತ ಲಕ್ಷ್ಮಣ ನಾಯ್ಕ ಕುಟುಂಬದ ನಾಲ್ವರು ಹಾಗೂ ತಮಿಳು ನಾಡಿನ ಮೂವರು ಲಾರಿ ಚಾಲಕರು ಹಾಗೂ ಸಣ್ಣಿ ಹನುಮಂತ ಗೌಡ ಕುಟುಂಬದ ಸದಸ್ಯರಿಗೆ ತಲಾ 5 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ. ಗುರುವಾರ ಗುರುತು ಪತ್ತೆಯಾದ ಶರವಣನ್ ಕುಟುಂಬದ ಸದಸ್ಯರಿಗೆ ಐದು ಲಕ್ಷ ರೂ. ನೀಡಲಾಗಿದೆ.
ಶಿರೂರು ಹೆದ್ದಾರಿಯ ಎರಡು ಬದಿಗೆ ಬಿದ್ದ ಮಣ್ಣು ತೆರವಿನ ಕಾರ್ಯ ಮುಂದುವರಿದಿದೆ. ಎನ್ಎಚ್ಎಐ ಹಾಗೂ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರಿಂಗ್ ವಿಭಾಗ ಶಿರೂರು ಬಳಿ ಹಲವು ಮುಂಜಾಗ್ರತಾ ಕ್ರಮಗಳನ್ನು ಆರಂಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.