Ullal ನಗದು ಕಳವು: ಸಿಸಿ ಟಿವಿಯಲ್ಲಿ ಕಳ್ಳನ ಚಹರೆ ಪತ್ತೆ
Team Udayavani, Jul 27, 2024, 12:57 AM IST
ಉಳ್ಳಾಲ: ಮಾಡೂರು ಸಮೀಪ ನಿರ್ಮಾಣ ಹಂತದ ಕಟ್ಟಡ ದಲ್ಲಿ ಕೂಲಿ ಕಾರ್ಮಿಕರಿಬ್ಬರು ಇರಿಸಿದ್ದ ಬಟ್ಟೆಗಳಿಂದ ಪ್ಯಾಂಟ್ ಧರಿಸಿದ್ದ ಅಪರಿಚಿತ ಕಳ್ಳನೋರ್ವ ಹಣ ಕದ್ದ ಘಟನೆ ಶುಕ್ರ ವಾರ ಸಂಜೆ ನಡೆದಿದ್ದು, ಕಳ್ಳನ ಮುಖ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಮಾಡೂರು ನಿವಾಸಿ ಶಶಿ ಅವರಿಗೆ ಸೇರಿದ ಕಟ್ಟಡದಿಂದ ಕಳವು ನಡೆದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ಕಾರ್ಮಿಕರು ಟೈಲ್ಸ್ ಹಾಕುವ ಕೆಲಸವನ್ನು ನಿರ್ವಹಿಸುತ್ತಿದ್ದರು. ಸಂಜೆ 4.30ರ ಸುಮಾರಿಗೆ ಪ್ಯಾಂಟ್ ಧರಿಸಿದ್ದ 30ರಿಂದ 35ರ ಹರೆಯದ ವ್ಯಕ್ತಿ ಕಟ್ಟಡದೊಳಕ್ಕೆ ತೆರಳಿದ್ದ. ಕಾರ್ಮಿಕರಿಬ್ಬರು ಕೆಲಸ ಮಾಡುತ್ತಿದ್ದ ಕೋಣೆಯನ್ನು ಬಿಟ್ಟು ಬೇರೆ ಕೋಣೆಗೆ ತೆರಳಿ ಅಲ್ಲಿ ಇಬ್ಬರು ಬಟ್ಟೆಗಳಲ್ಲಿ ಇರಿಸಿದ್ದ ಎರಡು ಸಾವಿರ ನಗದು ಕಳವು ನಡೆಸಿದ್ದಾನೆ. ಸಂಜೆ ವೇಳೆ ಹಣ ಕಾಣೆಯಾದ ಕುರಿತು ಕಟ್ಟಡ ಮಾಲಕರಿಗೆ ತಿಳಿಸಿದಾಗ ಅವರು ಸಿಸಿ ಟಿವಿ ಪರಿಶೀಲಸಿದಾಗ ಘಟನೆ ಬೆಳಕಿಗೆ ಬಂದಿತ್ತು.
ಕಳ್ಳ ಹಣ ಕದ್ದ ಬಳಿಕ ದೇರಳಕಟ್ಟೆ ಕಡೆಗೆ ಹೋಗುವ ರಿಕ್ಷಾ ಹತ್ತಿರುವುದು ದಾಖಲಾಗಿದೆ. ಎರಡು ದಿನಗಳ ಹಿಂದೆಯೂ ಇದೇ ರೀತಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಕಾರ್ಮಿಕರ ಸುಮಾರು 8,000 ರೂ. ಕಳವು ಮಾಡಲಾಗಿತ್ತು. ವೀಡಿಯೋದಲ್ಲಿ ಪ್ಯಾಂಟ್ ಗ್ಯಾಂಗ್ ಸಕ್ರಿಯರಾಗಿದ್ದಾರೆ ಜನರು ಎಚ್ಚೆತ್ತುಕೊಳ್ಳಿ ಎಂದು ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.