UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
Team Udayavani, Jul 27, 2024, 6:48 AM IST
ಹೊಸದಿಲ್ಲಿ: ಅಸ್ಸಾಂನ ಅಹೋಮ್ ರಾಜಮನೆತನದ ದಿಬ್ಬ -ಸಮಾಧಿ ವ್ಯವಸ್ಥೆ “ಮೊಯಿಡಮ್ಸ್’ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆ ಯಾಗಿದೆ. ಈ ಮೂಲಕ ಈಶಾನ್ಯ ಭಾರ ತದ ಸಾಂಸ್ಕೃತಿಕ ಸ್ವತ್ತೂಂದು ಮೊದಲ ಬಾರಿಗೆ ಈ ಪಟ್ಟಿ ಸೇರಿದಂತಾಗಿದೆ.
ಭಾರತದಲ್ಲಿ ನಡೆಯುತ್ತಿರುವ ವಿಶ್ವ ಪರಂಪರೆ ಸಮಿತಿ(ಡಬ್ಲ್ಯುಎಚ್‌ಸಿ)ಯ 46ನೇ ಸಭೆಯಲ್ಲಿ ಈ ನಿರ್ಣಯ ಕೈಗೊ ಳ್ಳಲಾಗಿದೆ. 2023-24ನೇ ಸಾಲಿನ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿ ಸೇರ್ಪಡೆಗೆ ಮೊಯಿಡಮ್ಸ್ ನಾಮ ನಿರ್ದೇಶನ ಮಾಡಲಾಗಿತ್ತು. ಪ್ರಧಾನಿ ಮೋದಿಯೂ ಈ ಬಗ್ಗೆ ಸಂತಸ ವ್ಯಕ್ತಪಡಿ ಸಿದ್ದಾರೆ. ಒಟ್ಟಾರೆ ಭಾರತದ 43 ತಾಣಗಳು ಈಗ ಈ ಪಟ್ಟಿಗೆ ಸೇರಿದಂತಾಗಿದೆ.
ಏನಿದು ಮೊಯಿಡಮ್ಸ್?: ಅಸ್ಸಾಂನಲ್ಲಿ ರುವ ವಿಶಿಷ್ಟ ದಿಬ್ಬ-ಸಮಾಧಿಗಳನ್ನು ಮೊಯಿಡಮ್ಸ್ ಎನ್ನಲಾಗುತ್ತದೆ. ಅಸ್ಸಾಂ ಅನ್ನು ಸುಮಾರು 600 ವರ್ಷ ಆಳಿದ ತೈ-ಅಹೋಮ್‌ರಾಜಮನೆತನಕ್ಕೆ ಸೇರಿದ ಸಮಾಧಿಗಳಿವು. ಇವು 2 ಅಂತಸ್ತಿನ ಕೋಣೆಗಳಾಗಿದ್ದು, ಕಮಾನಿನ ಪ್ರವೇಶ ದ್ವಾರ ಹೊಂದಿವೆ. ಸಮಾಧಿಯ ಅರ್ಧ ಗೋಳದ ಮಣ್ಣಿನ ದಿಬ್ಬಗಳ ಮೇಲೆ, ಇಟ್ಟಿಗೆ ಮತ್ತು ಮಣ್ಣಿನ ಪದರಗಳಿರುತ್ತವೆ. ಇವುಗಳನ್ನು “ಅಸ್ಸಾಂನ ಪಿರಮಿಡ್‌ಗಳು’ ಎಂದೂ ಕರೆಯಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.