Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್: ರಾಹುಲ್ ಆರೋಪ
Team Udayavani, Jul 27, 2024, 2:14 AM IST
ಸುಲ್ತಾನ್‌ಪುರ: ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಮಾನಹಾನಿ ಕೇಸು ಎದುರಿಸುತ್ತಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಉತ್ತರಪ್ರದೇಶದ ಸುಲ್ತಾನ್‌ಪುರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು.
“ನಾನು ಯಾವುದೇ ಮಾನಹಾನಿಕರ ಹೇಳಿಕೆ ನೀಡಿಲ್ಲ. ಕೀಳುಮಟ್ಟದ ಪ್ರಚಾರ ಪಡೆಯುವ ಸಲುವಾಗಿ ನನ್ನ ವಿರುದ್ಧ ಕೇಸು ದಾಖಲಿಸಲಾಗಿದೆ’ ಎಂದು ಅವರು ಕೋರ್ಟ್ ಮುಂದೆ ಹೇಳಿದರು. ವಿಚಾರಣೆಯನ್ನು ಆ.12ಕ್ಕೆ ಮುಂದೂಡಿದ ನ್ಯಾಯಾಲಯ, ಅಂದು ಖುದ್ದು ಹಾಜರಾತಿಯಿಂದ ರಾಹುಲ್‌ಗೆ ವಿನಾಯಿತಿ ನೀಡಿದರು. ಮಧ್ಯಪ್ರದೇಶ ಬಿಜೆಪಿಯ ಸ್ಥಳೀಯ ನಾಯಕ ವಿಜಯ್ ಮಿಶ್ರಾ ಅವರು 2018ರ ಆ.04ರಂದು ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈಗ ಹೊಸ ಬಂಗಲೆ
ಹೊಸದಿಲ್ಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸದನ ಸಮಿತಿಯು ದಿಲ್ಲಿಯ ಸುನೇರಿ ಬಾಘ… ರಸ್ತೆಯಲ್ಲಿನ ಬಂಗಲೆ ಸಂಖ್ಯೆ 05 ಅನ್ನು ನೀಡಲಿದೆ ಎನ್ನಲಾಗಿದೆ. ಸೋದರಿ ಪ್ರಿಯಾಂಕಾ ವಾದ್ರಾ ಬಂಗಲೆಗೆ ಭೇಟಿ ನೀಡಿದ ಬಳಿಕ ಈ ವದಂತಿ ಇನ್ನಷ್ಟು ಹೆಚ್ಚಿವೆ.
ಈ ಬಗ್ಗೆ ಸಮಿತಿಯು ಈಗಾಗಲೇ ರಾಹುಲ್‌ಗೆ ಮಾಹಿತಿ ನೀಡಿದ್ದು, ಅವರ ಒಪ್ಪಿಗೆಯಷ್ಟೇ ಬಾಕಿಯಿದೆ ಎಂದು ಸಂಸತ್ ಮೂಲಗಳು ಹೇಳಿವೆ. ಸಂಸದರಾದಾಗಿನಿಂದಲೂ ರಾಹುಲ್ ನಂ.12, ತುಘ ಲಕ್ ಲೇನ್‌ನಲ್ಲಿ ವಾಸಿಸುತ್ತಿದ್ದರು. ಕಳೆದ ವರ್ಷ ಪ್ರಕರಣವೊಂದರಲ್ಲಿ ಅನರ್ಹಗೊಂಡಾಗ ಈ ಬಂಗಲೆ ತೆರವುಗೊಳಿಸಿ, ತಾಯಿ ಸೋನಿಯಾ ಗಾಂಧಿ ಜತೆಗೆ 10 ಜನಪಥ ನಿವಾಸದಲ್ಲಿ ಇದ್ದರು. ಈಗ ವಿಪಕ್ಷ ನಾಯಕ ರಾದ ಕಾರಣ ಟೈಪ್ 8 ಬಂಗಲೆ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.