Roopanthara review; ನೋಡ ನೋಡುತ್ತಲೇ ಕಾಡುವ ರೂಪ!


Team Udayavani, Jul 27, 2024, 12:15 PM IST

Mithilesh edavalath’s Roopanthara movie review

ಜೀವಲೋಕದ ಸೃಷ್ಟಿಯೇ ಒಂದು ಅಚ್ಚರಿ. ಒಂದು ಹುಳ ಅನೇಕ ಹಂತದ ವಿಕಾಸದ ನಂತರ ಸುಂದರ ಚಿಟ್ಟೆಯಾಗಿ ಬದಲಾಗುತ್ತದೆ. ಈ ವಿಕಾಸದ ಹಾದಿಯಲ್ಲಿ ಅದಕ್ಕಿರುವ ನೋವು, ಸಂಕಟ ನೂರಾರು. ಇದನ್ನೇ ವಿಷಯವಸ್ತುವಾಗಿಸಿ ಅದಕ್ಕೆ ಮನುಷ್ಯ ಸ್ವರೂಪ ಕೊಟ್ಟು ಹೇಳುವ ಕಥೆಯೇ “ರೂಪಾಂತರ’.  ನಾಲ್ಕು ಭಿನ್ನ ಕಥೆಗಳಲ್ಲಿ ಬರುವ ನಾಲ್ಕು ಪ್ರಮುಖ ಪಾತ್ರಗಳು ಹೇಗೆ ತಮ್ಮ ಮನಸ್ಸು, ಆಲೋಚನೆ ಬದಲಿಸಿಕೊಳ್ಳುತ್ತವೆ ಎಂಬುದನ್ನು ತಿಳಿಯಬೇಕಾದರೆ ನೀವು “ರೂಪಾಂತರ’ (Roopanthara) ನೋಡಬೇಕು.

ಬೇರೊಂದು ಲೋಕಕ್ಕೆ ಕೊಂಡೊಯ್ಯುವ ಚಿತ್ರದ ಆರಂಭ, ಅಲ್ಲಿಂದಲೇ ಚಿತ್ರ ವಿಭಿನ್ನವೆನಿಸುತ್ತದೆ. ಅಲೆಮಾರಿಯೊಬ್ಬ ಹೇಳುವ ಕಥೆಗೆ ಕಿವಿಗೊಡುವ ಜನರು, ಅಲ್ಲಿಂದ ಅಸಲಿ ಸಿನಿಮಾ ಶುರು. ಹಣಕ್ಕಾಗಿ ಹೊಡೆದಾಡುವ ಲೋಕಲ್‌ ರೌಡಿ, ಹೆಂಡತಿಯ ಆಸೆಯಂತೆ ಅವಳನ್ನು ಪಟ್ಟಣಕ್ಕೆ ಕರೆತರುವ ಹಳ್ಳಿಯ ಮುದುಕ, ಅಮಾಯಕ ಭಿಕ್ಷುಕಿಯನ್ನು ರಕ್ಷಿಸುವ ಪೇದೆ, ಸೈಬರ್‌ ಜಾಲಕ್ಕೆ ಬಲಿಯಾಗಿ ಕುಕೃತ್ಯವೆಸಗಲು ಹೊರಟಿದ್ದ ಯುವಕ – ಈ ನಾಲ್ಕು ಪಾತ್ರಗಳ ಸುತ್ತ ಸಾಗುತ್ತದೆ “ರೂಪಾಂತರ’.

ಕಥೆ ಸಾಗುತ್ತಿದ್ದಂತೆ ಪ್ರೇಕ್ಷಕನ ಮನಸ್ಸಿನಲ್ಲಿ, ಮುಂದೇನಾಗುತ್ತದೆ ಎಂಬ ಯೋಚನೆಯ ಕಿಡಿ ಹೊತ್ತುತ್ತದೆ. ಮಧ್ಯಂತರದ ನಂತರ ಮತ್ತಷ್ಟು ಗಾಢವಾಗುವ ಕಥೆಯಲ್ಲಿ ನಾಲ್ಕೂ ಪಾತ್ರಗಳು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತವೆ. ಅಲ್ಲಿಂದ ಅವರು ಹೊರಬರುತ್ತಾರೊ? ಇಲ್ಲವೊ? ಎಂಬುದೇ ಚಿತ್ರದ ಹೂರಣ.

“ರೂಪಾಂತರ’ದಲ್ಲಿ ಚಿತ್ರಕಥೆಯೇ ಹೀರೋ ಎನ್ನಬಹುದು. ಕಥೆಯ ನಿರೂಪಣೆ, ಕಲಾವಿದರ ಅಭಿನಯದಿಂದ ಚಿತ್ರ ಮುಗಿದ ನಂತರವೂ ಪ್ರತಿ ಪಾತ್ರ ಮನಸ್ಸಿನಲ್ಲಿ ಬೇರೂರುತ್ತವೆ. ನಿರ್ದೇಶಕ ಮಿಥಿಲೇಶ್‌ ಎಡವಲತ್‌ ಹಾಗೂ ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಬರೆದಿರುವ ರಾಜ್‌ ಬಿ. ಶೆಟ್ಟಿ ಇವರ ಜೋಡಿಯೇ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌. ಮಿಥುನ್‌ ಮುಕುಂದನ್‌ ಸಂಗೀತ ಚಿತ್ರದ ನಿರೂಪಣೆಗೆ ಸೂಕ್ತವೆನಿಸುತ್ತದೆ. ಮುಖ್ಯ ಭೂಮಿಕೆಯಲ್ಲಿರುವ ರಾಜ್‌ ಬಿ. ಶೆಟ್ಟಿ ಮತ್ತೆ ತಮ್ಮ ನಟನೆಯಿಂದ ಗಮನ ಸೆಳೆಯುತ್ತಾರೆ.

ನಿತೀಶ ಡಂಬಳ

ಟಾಪ್ ನ್ಯೂಸ್

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shalivahana Shake Movie Review

Shalivahana Shake Movie Review: ಟೈಮ್‌ ಲೂಪ್‌ ಕಥೆಯ ʼಶಾಲಿವಾಹನ ಶಕೆ’

Vikasa Parva Movie Review

Vikasa Parva Movie Review: ಜೀವನ ಪಾಠದ ‘ವಿಕಾಸ ಯಾತ್ರೆ’

kaalapatthar

Kaalapatthar movie review: ಶಿಲೆಯ ಸುತ್ತದ ಸೆಳೆತವಿದು..

Ronny

Ronny Movie Review: ಬಣ್ಣದ ಕನಸಿಗೆ ರಕ್ತ ಲೇಪನ

ibbani tabbida ileyali movie review

Ibbani Tabbida Ileyali Review; ತಾಜಾ ಪ್ರೀತಿಯ ಭಾವ ಲಹರಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.