Bengaluru: ಬಾಡಿಗೆ ಮನೆಯಲಿದ್ದ ಗೆಳತಿಯನ್ನು ಪಿಜಿಗೆ ಕರೆತಂದಿದ್ದಕ್ಕೆ ಯುವತಿ ಹತ್ಯೆ?
ಬಾಡಿಗೆ ಮನೆಯಲ್ಲಿ ಪ್ರೇಯಸಿಯನ್ನು ಇರಿಸಿಕೊಂಡಿದ್ದ ಆರೋಪಿ ;ಇದರಿಂದ ಸಿಟ್ಟಿ ಗೆದ್ದು ಹತ್ಯೆ
Team Udayavani, Jul 27, 2024, 12:58 PM IST
ಬೆಂಗಳೂರು: ಕೋರಮಂಗಲದ ವಿಆರ್ ಲೇಔಟ್‌ನ ಪಿಜಿಯೊಂದರಲ್ಲಿ ಇತ್ತೀಚೆಗೆ ಬಿಹಾರ ಮೂಲದ ಕೃತಿ ಕುಮಾರಿ ಎಂಬ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಇನ್ನಷ್ಟು ಮಾಹಿತಿಗಳು ಬಹಿರಂಗಗೊಂಡಿದ್ದು, ಗೆಳತಿಯನ್ನು ಆರೋಪಿಯಿಂದ ಪಾರು ಮಾಡಲು ಹೋಗಿ ತಾನೇ ಕೊಲೆಯಾಗಿರುವ ಸಂಗತಿ ಗೊತ್ತಾಗಿದೆ.
ಆರೋಪಿ ಮಧ್ಯಪ್ರದೇಶದ ಅಭಿಷೇಕ್‌ಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಪ್ರಕರಣದ ವಿವರ: ಅಭಿಷೇಕ್ ಹಾಗೂ ಕೊಲೆಯಾದ ಕೃತಿ ಕುಮಾರಿಯ ಸ್ನೇಹಿತೆ ಪ್ರೀತಿಸುತ್ತಿದ್ದರು. ಅಭಿಷೇಕ್ ಪ್ರೇಯಸಿ ಹಾಗೂ ಕೃತಿ ಕುಮಾರಿ ಇಬ್ಬರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಒಂದೇ ಪಿಜಿಯಲ್ಲಿ ವಾಸವಾಗಿದ್ದರು. ಅಭಿಷೇಕ್ ಮಧ್ಯಪ್ರದೇ ಶದ ಭೋಪಾಲ್ ನಿಂದ ಬೆಂಗಳೂರಿನಲ್ಲಿರುವ ಈ ಪಿಜಿಗೆ ಆಗಾಗ ಬಂದು ಪ್ರೇಯಸಿ ಜೊತೆ ಸುತ್ತಾಡಿಕೊಂಡು ಮತ್ತೆ ಊರಿಗೆ ಹಿಂತಿರುಗುತ್ತಿದ್ದ.
ಅಭಿಷೇಕ್ ಭೋಪಾಲ್ ನಲ್ಲಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಪ್ರೇಯಸಿ ಕೆಲಸಕ್ಕೆ ಸೇರುವಂತೆ ಒತ್ತಡ ಹಾಕುತ್ತಿದ್ದಳು. ಕೆಲಸಕ್ಕೆ ಸೇರಿಕೊಂಡಿದ್ದಾಗಿ ಅಭಿಷೇಕ್ ಪ್ರೇಯಸಿಗೆ ಇತ್ತೀಚೆಗೆ ಸುಳ್ಳು ಹೇಳಿದ್ದ. ಆದರೆ, ಇದು ಆತನ ಪ್ರೇಯಸಿಗೆ ಗೊತ್ತಾಗಿತ್ತು.
ಹೀಗಾಗಿ ಅಭಿಷೇಕ್‌ನನ್ನು ನಿರ್ಲಕ್ಷಿಸಿದ್ದಳು. ಇದರಿಂದ ಕೋಪಗೊಂಡ ಅಭಿಷೇಕ್ ಪಿಜಿ ಬಳಿ ಗಲಾಟೆ ಮಾಡುತ್ತಿದ್ದ. ಪ್ರಕರಣ ನಡೆಯುವ 3 ದಿನಗಳ ಮುನ್ನ ಬೆಂಗಳೂರಿನಲ್ಲಿ ಅಭಿಷೇಕ್ ಬಾಡಿಗೆ ಮನೆ ಮಾಡಿದ್ದ. ಈ ಬಾಡಿಗೆ ಮನೆಗೆ ಪ್ರೇಯಸಿಯನ್ನೂ ಕರೆಸಿ ಆಕೆಯ ಜೊತೆಯಲ್ಲಿದ್ದ. ಇದು ಅಭಿಷೇಕ್ ಪ್ರೇಯಸಿಗೆ ಇಷ್ಟವಿರಲಿಲ್ಲ. ಇಲ್ಲಿಂದ ಕರೆದುಕೊಂಡು ಹೋಗುವಂತೆ ಗೆಳತಿ ಕೃತಿ ಕುಮಾರಿಗೆ ಆಕೆ ಹೇಳಿದ್ದಳು. ಅದರಂತೆ ಕೃತಿ ಕುಮಾರಿ ತನ್ನ ಸ್ನೇಹಿತರೊಂದಿಗೆ ತೆರಳಿ ಗೆಳತಿಯನ್ನು ತನ್ನ ಪಿಜಿಗೆ ಕರೆತಂದಿದ್ದಳು.
ಇದು ಅಭಿಷೇಕ್ ಗಮನಕ್ಕೆ ಬರುತ್ತಿದ್ದಂತೆ ಆತ ಆಕ್ರೋಶಗೊಂಡಿದ್ದ. ಮಂಗಳವಾರ ರಾತ್ರಿ 11.30ರ ಸುಮಾರಿಗೆ ಪಿಜಿ ಬಂದು ಒಳ ಹೋಗಿ ಕೃತಿ ಕುಮಾರಿ ಇದ್ದ ಕೋಣೆ ಬಾಗಿಲು ತಟ್ಟಿದ್ದ. ಕೃತಿ ಕುಮಾರಿ ಬಾಗಿಲು ತೆಗೆಯುತ್ತಿದ್ದಂತೆ ಆಕೆಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.
ಆರೋಪಿ ಅಭಿಷೇಕ್ ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಯು ಪ್ರೇಯಸಿಯನ್ನು ಕೂಡಿ ಹಾಕಿರುವ ಆರೋಪವೂ ಕೇಳಿ ಬಂದಿದ್ದು, ನಂತರ ಸಮಯ ನೋಡಿ ಗೆಳತಿಯನ್ನು ಮನೆಯಿಂದ ಪಿಜಿಗೆ ಕೃತಿ ಕುಮಾರಿ ಕರೆತಂದಿದ್ದಳು ಎನ್ನಲಾಗುತ್ತಿದೆ.
ಸಹಾಯಕ್ಕೆ ಬಾರದ ಪಿಜಿ ಯುವತಿಯರು
ಆರೋಪಿಯು ಕೃತಿ ಕುಮಾರಿಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ದೃಶ್ಯಗಳು ಕೃತ್ಯ ನಡೆದ ಪಿಜಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆರೋಪಿ ಅಭಿಷೇಕ್ ಮೊದಲು ಪಿಜಿ ರೂಮಿನ ಬಾಗಿಲು ಬಡಿದಿದ್ದಾನೆ. ಆಕೆ ಬಾಗಿಲು ತೆರೆಯುತ್ತಿದ್ದಂತೆ ರೂಂನ ಒಳಹೋಗಿದ್ದಾನೆ. ನಂತರ ಕೆಲವು ಸೆಕೆಂಡ್ ನಲ್ಲಿ ಕೃತಿ ಕುಮಾರಿ ಆತನಿಂದ ಪಾರಾಗಲು ಹೊರಗೆ ಬಂದಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಯು ಕೃತಿ ಕುಮಾರಿಯ ಕತ್ತನ್ನು ಹಿಡಿದು ಕಾರಿಡಾರ್‌ನಲ್ಲೇ ಮನಬಂದಂತೆ ಕತ್ತು, ಎದೆ, ಹೊಟ್ಟೆ ಭಾಗ ಸೇರಿ ಹಲವು ಕಡೆ ಚೂರಿಯಿಂದ ಇರಿದಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಕೃತಿ ಕುಮಾರಿ ಒದ್ದಾಡುತ್ತಿದ್ದಳು. ರಕ್ತದ ಮಡುವಿನಲ್ಲಿದ್ದ ಕೃತಿ ಕುಮಾರಿಯನ್ನ ನೋಡಿದ ಪಿಜಿಯ ಮೂವರು ಯುವತಿಯರು ಆತಂಕಕ್ಕೆ ಒಳಗಾಗಿ ಯಾರಿಗೋ ಕರೆ ಮಾಡಲು ಮುಂದಾಗುತ್ತಾರೆ. ಆ ವೇಳೆ ತನ್ನ ಸಹಾಯಕ್ಕೆ ಬರುವಂತೆ ಕೃತಿ ಕುಮಾರಿ ಅಂಗಲಾಚಿದರೂ ಪಿಜಿಯಲ್ಲಿದ್ದ ಮೂವರು ಯುವತಿಯರು ಮಾತ್ರ ಹತ್ತಿರ ಬಂದಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.