Future: ಮುಗಿಯದ ಮುಂದೇನು ಪ್ರಶ್ನೆ


Team Udayavani, Jul 27, 2024, 4:30 PM IST

10-uv-fusion

ಆರಂಭದ ನನ್ನ ಮತ್ತು ಬಸ್ಸಿನ ಪರಿಚಯ ನಾನು ಪುಟ್ಟ ಪುಟ್ಟ ಹೆಜ್ಜೆಯಿಡುತ್ತಿದ್ದಾಗ. ಹೌದು, ನಾನು ಒದುತ್ತಿದ್ದ  ಶಾಲೆ ಹತ್ತಿರದಲ್ಲಿದ್ದರು ಬಸ್ಸಿಲ್ಲದೆ ಹೋಗಲು ಸಾಧ್ಯವಿರಲಿಲ್ಲ. 2 ರೂ. ಕೊಟ್ಟರೆ 15 ನಿಮಿಷದಲ್ಲಿ ಶಾಲೆಗೆ ತಲುಪುತ್ತಿದ್ದೆ. ಆ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿ ವರೆಗೆ ಕಲಿತಾಯಿತು. ಸಂಜೆ ಮೂರು ಗಂಟೆಗೆ ಮನೆ ತಲುಪುತ್ತಿದ್ದ ದಿನಗಳವು.

ಮುಂದೆ ಪ್ರೌಢಶಾಲೆಗೆ ಬಂದಾಯಿತು. ಹೊಸತೇನೋ ಕಲಿಯಲು ಸಿಗುವ ಈ ಪ್ರೌಢಶಾಲೆ ಮೊದಲಿಗಿಂತಲು ದೂರದಲ್ಲಿದ್ದ ಕಾರಣ ಬೆಳಗ್ಗೆ ಏಳುವ ಸಮಯ ಸಹಿತ ಕೆಲವು ದಿನಚರಿ ಬದಲಾಯಿತು. ರಾತ್ರಿ ಮಲಗುವಾಗ ಹಿಂದಿನ ದಿನದ ತರಗತಿಯನ್ನು ಭಯದಿಂದ ಮನನ ಮಾಡಿಕೊಂಡು ನಿದ್ದೆಗೆ ಜಾರುತ್ತಿದ್ದ ದಿನಗಳವು. ಇಂದಿಗೂ ಅವುಗಳನ್ನು ನೆನೆದರೆ ಇಂಗ್ಲಿಷ್‌, ಗಣಿತ ತರಗತಿಗಳು, ಅಧ್ಯಾಪಕರು ನೆನಪಾಗುತ್ತಾರೆ.

ಪ್ರೌಢ ಎಂಬ ಹೆಸರಲ್ಲೇ ಇದೆ ಬದಲಾವಣೆ, ತಪ್ಪು – ತಿದ್ದುಗಳು ಆ ದಿನಗಳಲ್ಲೇ ಆಗಬೇಕಾದದ್ದೇ, ಹಾಗಾಗಿ ತಪ್ಪುಗಳನ್ನು ತಿದ್ದಿಕೊಳ್ಳಬೇಕಾದರೆ ಪೆಟ್ಟು ಕೊಡುವ ಶಿಕ್ಷಕರು ಬೇಕಲ್ಲವೇ. ಮತ್ತೆ ಮುಗಿತು ಎಂಬ ಖುಷಿಯೊಂದಿಗೆ ಮುಂದೇನೋ ಇದೆ ಅಲ್ಲವೇ. ಮುಂದೇನು ಎಂದಾಗ ಅಲ್ಲಿ ಕಣ್ಣಿಗೆ ಕಂಡಿದ್ದು ಮೂರು ಆಯ್ಕೆಗಳು. ಕಲಾ, ವಿಜ್ಞಾನ, ವಾಣಿಜ್ಯ. ಮೂರರಲ್ಲಿ ಒಂದನ್ನು ಆಯ್ಕೆ ಮಾಡಲೇಬೇಕು. ಎರಡು ವರ್ಷಗಳ ಪಿಯುಸಿ ಜೀವನ ನಮ್ಮ ಪಾಲಿಗೆ ಒಂದೂವರೆ ವರ್ಷವಾಗಿತ್ತು.

ಕೊರೋನಾ ಎಲ್ಲವನ್ನೂ ಅರ್ಧಕ್ಕೆ ಇಟ್ಟುಬಿಟ್ಟ ದಿನಗಳವು. ಗಡಿ ಈಚೆಗಿನ ಮನೆ, ಗಡಿ ಆಚೆಗಿನ ಕಾಲೇಜು. ಮನೆಯಲ್ಲಿ ಕಲಿತು ಪರೀಕ್ಷೆಗೆ ಮಾತ್ರ ಕಾಲೇಜಿಗೆ ಹೋದರೆ ಸಾಕು ಎಂದಿದ್ದರು. ಆದರೆ ಪರೀಕ್ಷೆಯೇ ಇರಲಿಲ್ಲವಲ್ಲ, ಪಾಸ್‌ ಅಂತು ಆದೆ. ಮತ್ತೆ ಬೆನ್ನತ್ತಲು ಪ್ರಾರಂಭಿಸಿತು ಮುಂದೇನು ಎಂಬ ಪ್ರಶ್ನೆ.

ಪಿಯುಸಿಯಲ್ಲಂತು  ಮೂರೇ ಆಯ್ಕೆ ಇದ್ದದ್ದು, ಆದರೆ ಇಲ್ಲಿ ಎಲ್ಲ ಕಡೆಗೂ ದೋಣಿಗಳಿವೆ. ಯಾವ ದೋಣಿ ಮೇಲೆ ಕಾಲಿಡಲಿ ಎಂದು ಆಲೋಚನೆ ಮಾಡುತ್ತಲೇ ಡಿಗ್ರಿ ಇಸ್‌ ಗೋಲ್ಡನ್‌ ಲೈಫ್ ಮತ್ತೇನು ಡಿಗ್ರಿ ಮಾಡುವೆ ಎಂದು ಕಾಲೇಜಿನಲ್ಲಿ ಅಡ್ಮಿಷನ್‌ಗೆ ಹೋದೆ. ನಾಲ್ಕು ಕಡೆಗಳಲ್ಲೂ ಅವರಿಸಿಕೊಂಡಿದ್ದ ಕಟ್ಟಡ ಕಂಡು ಮೊದಲು ನೆನಪಾದದ್ದೇ ಬಾಲ್ಯದ ಶಾಲೆ. ಕೆಲವೇ ವರ್ಷಗಳಲ್ಲಿ ಜೀವನ ಎಷ್ಟೊಂದು ಬದಲಾಗಿದೆಯಲ್ಲ ಎಂದು. ಹೀಗೆ ಕಾಲೇಜು ಕ್ಯಾಂಪಸ್‌ ಸುತ್ತ ಕಣ್ಣು ಹಾಯಿಸಿದೆ.

ಮೊದಲು ಹತ್ತು ಮಂದಿಯೊಂದಿಗೆ ಬಾಲ್ಯದ ಶಾಲೆ, ಮುಂದೆ ಇಪ್ಪತ್ತು -ಮೂವತ್ತು ಜನರ ಜತೆ ಬೆಳೆದ ನಾನು, ಈಗ ತರಗತಿಯ ಐವತ್ತು -ಅರವತ್ತು ವಿದ್ಯಾರ್ಥಿಗಳ ಪೈಕಿ ನಾನೂ ಒಬ್ಬಳು. ಯಾರ ಪರಿಚಯವನ್ನೂ ನಾನು ಮಾಡಿಕೊಂಡಿರಲಿಲ್ಲ, ಪರಿಚಯ ಮಾಡಿಕೊಳ್ಳುವ ಮನಸ್ಸೂ ನನಗಿರಲಿಲ್ಲ. ಆದರೆ ಕಲಿಕೆ ಕೊಂಚ ಭಿನ್ನವಾಗಿದ್ದರಿಂದ ಬೆರೆಯುವಿಕೆ ಅಗತ್ಯವೇ ಆಗಿತ್ತು. ಹತ್ತು ವಿಭಿನ್ನ ಮನಸ್ಸುಗಳು. ನನ್ನ ಮೌನ ಯಾರಿಗೆಲ್ಲ ಉದಾಸೀನತೆಯನ್ನು ಕೊಟ್ಟಿದೆಯೋ ನನಗರಿಯದು, ಆದರೆ ಡಿಗ್ರಿ ಎಂಬ ಮೂರು ವರ್ಷ ನೆನಪಿನ ಬುತ್ತಿಯೊಂದಿಗೆ ಕಲಿಯಬೇಕಾದದ್ದನ್ನು ಕಲಿಸಿಕೊಟ್ಟಿದೆ.  ಈಗ ಇದು ಕೂಡ ಮುಗಿಯಿತು, ಮತ್ತದೇ ಮುಂದೇನು ಪ್ರಶ್ನೆ?

ಪ್ರಶ್ನೆಯಂತೂ ಬೆನ್ನ ಹಿಂದೆ ಯಾವಾಗಲೂ ಇದ್ದೇ ಇರುತ್ತದೆ. ಈಗ ತಿಳಿದಿದ್ದೇನೆ ಬದುಕಿನಲ್ಲಿ ಪ್ರಶ್ನೆ, ಆ ಪ್ರಶ್ನೆಗೆ ಉತ್ತರ, ಇವೆರಡು ಇದ್ದರೆ ಬದುಕು ಸಾಗುವುದು ಎಂದು. ಮುಂದೇನು? ಎಂಬುದು ದಾರಿ ಹುಡುಕುತ್ತ ಹೋಗುವಂತದ್ದು.

-ಸುಮನಾ

ವಿವೇಕಾನಂದ ಮ.ವಿ.

(ಸ್ವಾಯತ್ತ ) ಕಾಲೇಜು ಪುತ್ತೂರು

ಟಾಪ್ ನ್ಯೂಸ್

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.