Heavy Rain: ಪ್ರವಾಹ ಪೀಡಿತ ಗ್ರಾಮಗಳಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ್ ಭೇಟಿ


Team Udayavani, Jul 28, 2024, 1:22 PM IST

7-

ಕುಡಚಿ: ಮಹಾರಾಷ್ಟ್ರದಲ್ಲಿ ಸುಮಾರು 7-8 ದಿಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ  ರಾಯಬಾಗ ತಾಲೂಕಿನ‌ ಕುಡಚಿ ಮತ ಕ್ಷೇತ್ರದಲ್ಲಿ  ಕುಡಚಿ, ಗುಂಡವಾಡ, ಶಿರಗೂರ ಹಾಗೂ ಖೇಮಲಾಪೂರ, ಸಿದ್ದಾಪುರ ಗ್ರಾಮಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮತ್ತು ಪರಮಾನಂದವಾಡಿ ಗ್ರಾಮದಲ್ಲಿ ಹಳ್ಳಕೊಳ್ಳಗಳ ಹಿನ್ನಿರ ಏರಿಕೆಯಾದ್ದರಿಂದ ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಹಾಗೂ ತಾಲೂಕಾಡಳಿತ ಅಧಿಕಾರಿ ಮತ್ತು ನೂಡಲ ಅಧಿಕಾರಿಗಳ ಸಮೇತ ಜು.28ರ ಭಾನುವಾರ ಭೇಟಿ ನೀಡಿದರು.

ಸಿದ್ದಾಪೂರ, ಖೇಮಲಾಪೂರ ಮತ್ತು  ಪರಮಾನಂದವಾಡಿ ಗ್ರಾಮಗಳಲ್ಲಿ  ಪ್ರವಾಹದ ಬಗ್ಗೆ ಜನರೊಂದಿಗೆ ಚರ್ಚಿಸಿದರು. ಕೆಲ ಗ್ರಾಮಗಳಲ್ಲಿ ಜನರು  ಪ್ರತಿ ವರ್ಷ ಪ್ರವಾಹ ಬಂದರೆ ತಮಗಾಗುವ ಸಮಸ್ಯಗಳ ಬಗ್ಗೆ ಶಾಸಕರ ಮುಂದೆ ಹೇಳಿಕೊಂಡು.

ಶಿರಗೂರ ಗ್ರಾಮದಲ್ಲಿ ದೋಣಿ ಬಳಸಿ ರಾಯಬಾಗದ ತಹಶೀಲ್ದಾರರ ಸುರೇಶ ಮುಂಜೆ ಹಾಗೂ ಪ್ರವಾಹಕ್ಕೆ ‌ಸಂಬಂಧಿಸಿದ ಅಧಿಕಾರಿಗಳೊಂದಿಗೆ ತೆರಳಿ‌ ನೀರಿನ ಮಟ್ಟ ವೀಕ್ಷಿಸಿದರು‌.

ಶಿರಗೂರ ಗ್ರಾಮದ  ಜನರು‌, ಪ್ರತಿ ವರ್ಷ ಈ‌ ಪ್ರವಾಹದಿಂದ ನಾವು ಬೇಸತ್ತಿದ್ದೇವೆ. ಆದ್ದರಿಂದ ನಮಗೆ ಇಲ್ಲಿಂದ ಬೇರೆ ಕಡೆಗೆ ಸ್ಥಳಾಂತರಿಸಿ‌ ಎಂದು ಶಾಸಕರನ್ನು  ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ನನ್ನದು‌ ಇನ್ನೂ 4 ವರ್ಷಗಳ ಅವಧಿ ಇದೆ. ಶಿರಗೂರ-ಗುಂಡವಾಡ ಗ್ರಾಮಗಳನ್ನು ಸ್ಥಳಾಂತರಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ನಂತರ ಕುಡಚಿ ಪಟ್ಟಣದ ಕೃಷ್ಣಾ ನದಿ ತಟದಲ್ಲಿರುವ ಜನರನ್ನು ಭೇಟಿ ಮಾಡಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಕೊಂಡಿಯಂತಿರುವ ಉಗಾರ ಮತ್ತು ಕುಡಚಿ  ಮಧ್ಯೆ ನದಿಗೆ ಕಟ್ಟದ ಮೂಳಗಿದ ಸೇತುವೆ ವೀಕ್ಷಿಸಿ, ಕುಡಚಿ ಪುರಸಭೆ ಸಬಾಭವನದಲ್ಲಿ ಪ್ರವಾಹದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಾಲೂಕಾಡಳಿತ  ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಕುಡಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಹಾಲ್ಗುಣಿ, ರಾಯಭಾಗ ತಹಶೀಲ್ದಾರ್ ಸುರೇಶ್ ಮುಂಜೆ, ಸಿಪಿಐ ರವಿಚಂದ್ರನ್ ಡಿಬಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅರುಣ ಮಾಚಕನೂರ, ವಾಸುದೇವ ಉಪ ನಿರ್ದೆಶಕ ಕೈಮಗ್ಗದ ಇಲಾಖೆ ಬೆಳಗಾವಿ ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ, ಎಸ್.ಎಮ್. ಪಾಟೀಲ, ತಾಲೂಕು ಮುಖ್ಯ ವೈದ್ಯಾಧಿಕಾರಿ, ಪಿಡಬ್ಲುಡಿ ಅಧಿಕಾರಿ ಆರ್.ಬಿ. ಮನೋವಡ್ಡರ, ಶಿಕ್ಷಣ ಅಧಿಕಾರಿ ಬಸವರಾಜ ಆರ್. ಮುಖಂಡರಾದ ಚನ್ನಗೌಡ ಪಾಟೀಲ ಸೇರಿದಂತೆ ಇನ್ನೂ ಅನೇಕ ಸಿಬ್ಬಂದಿಗಳು ರಾಜಕೀಯ ಮುಖಂಡರುಗಳು ಶಾಸಕರ ಅಭಿಮಾನಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Belagavi: ಗೆಳೆಯ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು

Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು

Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ

Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.