Mekedatu ವಿಚಾರದಲ್ಲಿ ದೇವೇಗೌಡರ ಜತೆ ಖರ್ಗೆ ನಿಲ್ಲುತ್ತಾರ: ಎಚ್‌ಡಿಕೆ ಪ್ರಶ್ನೆ
ರಾಜ್ಯಸಭೆಯಲ್ಲಿ ಎಚ್‌ಡಿಡಿ ನಾಳೆ ಪ್ರಸ್ತಾಪ
Team Udayavani, Jul 28, 2024, 11:00 PM IST
ಮೈಸೂರು: ಕಾವೇರಿ ನೀರು ಹಂಚಿಕೆ ಹಾಗೂ ಮೇಕೆದಾಟು ಯೋಜನೆ ಕುರಿತಾಗಿ ಸೋಮವಾರ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಾತನಾಡಲಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಗೌಡರಿಗೆ ಜತೆಯಾಗಿ ಎದ್ದು ನಿಂತು ಬೆಂಬಲ ಸೂಚಿಸುತ್ತಾರ ಎಂದು ಕೇಂದ್ರದ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾವೇರಿ ವಿಚಾರವಾಗಿ ದೇವೇಗೌಡರು ಮಾತನಾಡುವಾಗ ಅದನ್ನು ವಿರೋಧಿಸಲು ತಮಿಳುನಾಡಿನ ಕನಿಷ್ಠ ಹತ್ತು ಸಂಸದರು ಎದ್ದು ನಿಲ್ಲುತ್ತಾರೆ. ನಮ್ಮ ರಾಜದವರೇ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು ಗೌಡರಿಗೆ ಬೆಂಬಲವಾಗಿ ನಿಲ್ಲುತ್ತಾರ, ರಾಜ್ಯದ ಎಷ್ಟು ಸಂಸದರು ಬೆಂಬಲಿಸುತ್ತಾರೆ ಎಂದು ಕೇಳಿದರು.
ಸಾರ್ವಜನಿಕ ಉದ್ದಿಮೆಗಳಿಗೆ ಮರುಬಂಡವಾಳ
ಹೂಡಿಕೆ ಮಾಡಿ ಪುನಶ್ಚೇತನ: ಎಚ್‌ಡಿಕೆ
ಮೈಸೂರು: ಈಗಾಗಲೇ ನಷ್ಟದ ಕಾರಣ ಒಡ್ಡಿ ಬಂಡವಾಳವನ್ನು ಹಿಂತೆಗೆದುಕೊಂಡಿರುವ ಸಾರ್ವಜನಿಕ ಉದ್ದಿಮೆಗಳಿಗೆ ಮರು ಹೂಡಿಕೆ ಮಾಡಿ ಅವುಗಳನ್ನು ಪುನಶ್ಚೇತನಗೊಳಿಸಿ, ಮರುಜೀವ ಒದಗಿಸಲು ಯೋಜನೆ ಸಿದ್ಧಪಡಿಸುತ್ತಿರುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂಗಿತ ವ್ಯಕ್ತಪಡಿಸಿದರು.
ಕಳೆದ 15 ದಿನದಿಂದ ಈ ವಿಚಾರವಾಗಿ ಅಧಿಕಾರಿಗಳ ಜತೆ ಹತ್ತಾರು ಪರಿಶೀಲನಾ ಸಭೆಯನ್ನು ನಡೆಸಲಾಗಿದೆ. ಯಾವುದಾರೂ ಒಂದು ಉದ್ಯಮವನ್ನು ಪೈಲೆಟ್ ಆಗಿ ತಗೆದುಕೊಂಡು, ಅದಕ್ಕೆ ಆರ್ಥಿಕ ಶಕ್ತಿ ತುಂಬಿ, ಅದನ್ನು ಲಾಭದ ಉದ್ಯಮವನ್ನಾಗಿ ಮಾಡಿದ ಮೇಲೆ ಆ ಮಾದರಿಯಲ್ಲೇ ಬೇರೆ ಉದ್ಯಮಗಳನ್ನು ಪುನಶ್ಚೇತನಗೊಳಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಎಂಟತ್ತು ತಿಂಗಳ ಕಾಲವಕಾಶ ಬೇಕು ಎಂದು ತಿಳಿಸಿದರು.
ಕರ್ನಾಟಕದ ಭದ್ರಾವತಿ ಉಕ್ಕು ಮತ್ತು ಕಬ್ಬಿನ ಕಾರ್ಖಾನೆ, ಎಚ್‌ಎಂಟಿ ಕಾರ್ಖಾನೆಗಳು ಸೇರಿ ದೇಶದ ಹಲವಾರು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ. ಎಚ್‌ಎಂಟಿ ಕಾರ್ಖಾನೆಯನ್ನು ಪರಿಶೀಲಿಸಲು ಹೋದ ಕಾರಣಕ್ಕೆ 42 ರೂಪಾಯಿ ಇದ್ದ ಷೇರು ಮೌಲ್ಯ 95 ರೂಪಾಯಿಗೆ ಹೋಗಿದೆ. ಇದರಿಂದಲೇ ತಿಳಿಯುತ್ತದೆ ಈ ಉದ್ಯಮಗಳಿಗೆ ಮರುಜೀವ ನೀಡಿದರೆ ಲಾಭ ದೊರೆಯುತ್ತದೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.