Belthangady: ಕಡಿರುದ್ಯಾವರ ಆನೆ ಸಂತ್ರಸ್ತ ಹೋರಾಟ ಸಮಿತಿ ಅಸ್ತಿತ್ವಕ್ಕೆ

ಮುಖ್ಯಮಂತ್ರಿ, ಪ್ರಧಾನಿ ಸಹಿತ ಪ್ರಮುಖರಿಗೆ ಪತ್ರ ಬರೆಯಲು ನಿರ್ಧಾರ

Team Udayavani, Jul 29, 2024, 6:10 AM IST

Ane-Santrastara-Sabe

ಬೆಳ್ತಂಗಡಿ: ಕಾಡಾನೆಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮತ್ತು ಸರಕಾರದಿಂದ ಪರಿಣಾಮಕಾರಿ ಕ್ರಮಗಳು ಆಗದ ಕಾರಣ ಆನೆ ದಾಳಿ ಸಂತ್ರಸ್ತರೆಲ್ಲರನ್ನೂ ಒಗ್ಗೂಡಿಸಿ “ಆನೆ ಸಂತ್ರಸ್ತರ ಹೋರಾಟ ಸಮಿತಿ ಕಡಿರುದ್ಯಾವರ’ ಎಂಬ ಸಮಿತಿಯನ್ನು ರಚಿಸಲಾಗಿದೆ ಎಂದು ಅಧ್ಯಕ್ಷ ಸಂತೋಷ್‌ ಗೌಡ ವಳಂಬ್ರ ಹೇಳಿದರು.

ಕಡಿರುದ್ಯಾವರ ಗ್ರಾಮದ ಹೇಡ್ಯಾದಲ್ಲಿ ಜು.27ರಂದು ಸಮಿತಿ ರಚನೆ ಹಾಗೂ ಅದರ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಆನೆ ದಾಳಿ ಸಂತ್ರಸ್ತರ ನೋವಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವುದು ಸಮಿತಿಯ ಉದ್ದೇಶವಾಗಿದೆ ಎಂದರು.

ಸಭೆಯಲ್ಲಿ ಕೈಗೊಂಡ ಹಕ್ಕೊತ್ತಾಯ ನಿರ್ಣಯಗಳು
ಕೃಷಿ ಭೂಮಿಗೆ ಆನೆ ದಾಳಿ ತಡೆಗಟ್ಟಲು ಸರಕಾರ ಶಾಶ್ವತ ಕ್ರಮ ಕೈಗೊಳ್ಳಬೇಕು. ಅವೈಜ್ಞಾನಿಕವಾಗಿ ಚಾರ್ಮಾಡಿ ಹಾಗೂ ಇತರ ಅರಣ್ಯ ವ್ಯಾಪ್ತಿಯ ಜಲವಿದ್ಯುತ್‌ ಮತ್ತು ಎತ್ತಿನಹೊಳೆ ಯೋಜನೆಯಿಂದ ಸಾವಿರಾರು ಎಕ್ರೆ ಕೃಷಿ ಭೂಮಿ ನಾಶವಾಗಿದೆ. ಇಂತಹ ಕಂಪೆನಿಗಳು ಸ್ಥಾಪನೆಗೊಳ್ಳುವ ಸಂದರ್ಭದಲ್ಲಿ ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕು. ಶಾಶ್ವತ ನಿಧಿ ಸ್ಥಾಪನೆ ಕುರಿತು ಯೋಜನೆ ರೂಪಿಸಬೇಕು.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳ ವ್ಯಾಪ್ತಿಯಲ್ಲಿ ಹೊಸದಾಗಿ ಕೋವಿ ಪರವಾನಿಗೆ ನೀಡಲು ಇರುವ ನಿಷೇಧವನ್ನು ರದ್ದುಪಡಿಸಬೇಕು. ಕಂಪೆನಿಗಳ ಸಿಎಸ್‌ಆರ್‌ ಫಂಡ್‌ಗಳನ್ನು ಪರಿಸರ ರಕ್ಷಣೆ ಹಾಗೂ ಕೃಷಿಕರಿಗೆ ಮೀಸಲಿಡಬೇಕು. ಅಗತ್ಯ ಸ್ಥಳಗಳಲ್ಲಿ ಆನೆ ಕಂದಕ ರಚಿಸಿ ಅದರ ಮೇಲೆ ಸೋಲಾರ್‌ ಮೇಲೆ ನಿರ್ಮಿಸಬೇಕು ಎಂಬಿತ್ಯಾದಿ ನಿರ್ಣಯ ಕೈಗೊಳ್ಳಲಾಯಿತು. ಈ ಬಗ್ಗೆ ಮುಖ್ಯಮಂತ್ರಿ, ಪ್ರಧಾನಿ ಸಹಿತ ಪ್ರಮುಖರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
ವಿಘ್ನೇಶ್‌ ಪ್ರಭು ಆಲಂತಡ್ಕ ಸ್ವಾಗತಿಸಿ, ರಾಘವೇಂದ್ರ ಪಟವರ್ಧನ್‌ ಪನಿಕಲ್ಲು ವಂದಿಸಿದರು.

ಸಮಿತಿ ಪುನರ್‌ ರಚನೆ
ಸಮಿತಿಯ ಅಧ್ಯಕ್ಷರಾಗಿ ಸಂತೋಷ್‌ ಗೌಡ ವಳಂಬ್ರ, ಪ್ರ. ಕಾರ್ಯದರ್ಶಿಯಾಗಿ ಪ್ರಸಾದ್‌ ಗೌಡ ಕುಚ್ಚಾರು, ಕಾರ್ಯದರ್ಶಿಯಾಗಿ ರಾಮಚಂದ್ರ ಗೌಡ ಪನಿಕಲ್ಲು, ಸಂಚಾಲಕರಾಗಿ ನೀಲಯ್ಯ ಗೌಡ ಕನಪ್ಪಾಡಿ, ಜಾರ್ಜ್‌ ಟಿ.ವಿ. ಮಲ್ಲಡ್ಕ, ಕಿರಣ್‌ ಹೆಬ್ಟಾರ್‌ ಶಿರಿಬೈಲು, ಶಶಿಧರ ಗೌಡ ಬರಮೇಲು, ವಿಘ್ನೇಶ್‌ ಪ್ರಭು ಆಲಂತಡ್ಕ, ಸಂತೋಷ್‌ ಹೇಡ್ಯ, ಪ್ರಸಾದ್‌ ಗೌಡ ವಳಂಬ್ರ, ಸೂರಜ್‌ ವಳಂಬ್ರ, ರಾಘವೇಂದ್ರ ಭಟ್‌ ಪನಿಕಲ್ಲು, ಉದಯಗೌಡ ಪನಿಕಲ್ಲು, ಮಂಜುನಾಥ ಗೌಡ ಕುಚ್ಚಾರು ಹೊಸ ಮನೆ, ಪ್ರಸಾದ್‌ ನಾಯ್ಕ ಕಂಚಲಗದ್ದೆ, ಗಣೇಶ್‌ ಗೌಡ ಕೆರೆಕೋಡಿ, ಅಕ್ಷಯ ಕೆರೆಕೋಡಿ, ಲಿಜೋ ಸ್ಕರಿಯ ಬಲ್ಲಾಲ್‌ ಬೆಟ್ಟು, ಕಾನೂನು ಸಲಹೆಗಾರಾಗಿ ಗಣೇಶ್‌ ಗೌಡ ಬರಮೇಲು, ಮಾಧ್ಯಮ ಸಂಚಾಲಕರಾಗಿ ಬಾಲಚಂದ್ರ ನಾಯಕ್‌ ಹೇಡ್ಯಾ ಅವರನ್ನು ಆಯ್ಕೆ ಮಾಡಲಾಯಿತು.

ಟಾಪ್ ನ್ಯೂಸ್

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

2-kambala

Moodbidri: ಜಿಲ್ಲಾ ಕಂಬಳ ಸಮಿತಿ ತುರ್ತು ಸಭೆ: ನಿಯಮ ಉಲ್ಲಂಘಿಸಿದರೆ ನಿಷೇಧ

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

1

Puttur: ನಳಿನ್‌ಗೆ ನಿಂದನೆ; ದೂರು ದಾಖಲು

1-asdaaasdasd

Kadaba; ಪ್ರೀತಿಸುವ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ:ಯುವಕ ಸೆರೆ

1aaaane

Sullia: ತೋಟದಲ್ಲಿ ಮೂರು ಕಾಡಾನೆ!

1-sedi

Puttur: ಕಂದಕಕ್ಕೆ ಉರುಳಿದ ಕಾರು:ಜೀವ ಉಳಿಸಿಕೊಂಡ ಐವರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

4-katapady

ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.