Paris Olympics; ಪಿ.ವಿ. ಸಿಂಧು ಗೆಲುವಿನ ಆರಂಭ
Team Udayavani, Jul 29, 2024, 12:19 AM IST
ಪ್ಯಾರಿಸ್: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಪ್ಯಾರಿಸ್ ಬ್ಯಾಡ್ಮಿಂಟನ್ನಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ. ರವಿವಾರದ “ಎಂ’ ಗ್ರೂಪ್ನ ಮೊದಲ ಸ್ಪರ್ಧೆ ಯಲ್ಲಿ ಅವರು ಮಾಲ್ಡೀವ್ಸ್ನ ಫಾತಿಮಾ ಶಬ್ದುಲ್ ರಜಾಕ್ ವಿರುದ್ಧ 21-9, 21-6 ಅಂತರದ ಸುಲಭ ಜಯ ಸಾಧಿಸಿದರು. ಕೇವಲ 29 ನಿಮಿಷ ಗಳಲ್ಲಿ ಇವರ ಸ್ಪರ್ಧೆ ಮುಗಿಯಿತು.
ಪ್ರಣಯ್ ಗೆಲುವು
ಮೊದಲ ಸಲ ಒಲಿಂಪಿಕ್ಸ್ ಸ್ಪರ್ಧೆಗೆ ಇಳಿದಿ ರುವ ಎಚ್.ಎಸ್. ಪ್ರಣಯ್ ಗೆಲುವಿನ ಆರಂಭ ಮಾಡಿದ್ದಾರೆ. “ಕೆ’ ವಿಭಾಗದ ಪಂದ್ಯದಲ್ಲಿ ಅವರು ಜರ್ಮನಿಯ ಫ್ಯಾಬಿಯನ್ ರೋತ್ ವಿರುದ್ಧ 21-18, 21-12 ಅಂತರದಿಂದ ಗೆದ್ದು ಬಂದರು. ಇವರ ಮುಂದಿನ ಎದುರಾಳಿ ವಿಯೆಟ್ನಾಮ್ನ ಲೆ ಡಕ್ ಫಾಟ್. ಈ ಪಂದ್ಯ ಬುಧವಾರ ನಡೆಯಲಿದೆ.ವಿಶ್ವದ 111ನೇ ರ್ಯಾಂಕಿಂಗ್ ಆಟಗಾರ್ತಿ ಯಾಗಿ ರುವ ಫಾತಿಮಾ ಭಾರತೀಯಳಿಗೆ ಯಾವುದೇ ರೀತಿ ಯಲ್ಲಿ ಸಾಟಿಯಾಗಲಿಲ್ಲ. ಅವರು ಮೊದಲ ಗೇಮನ್ನು ಕೇವಲ 13 ನಿಮಿಷಗಳಲ್ಲಿ ಕಳೆದುಕೊಂಡರು.
ಅಶ್ವಿನಿ-ತನಿಷಾ ಜೋಡಿಗೆ ಸೋಲು
ವನಿತಾ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ-ತನಿಷಾ ಕ್ರಾಸ್ಟೊ ಮೊದಲ ಪಂದ್ಯದಲ್ಲಿ ಪರಾಭವಗೊಂಡರು. “ಸಿ’ ವಿಭಾಗದ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಕಿಮ್ ಸೊ ಯೋಂಗ್-ಕಾಂಗ್ ಹೀ ಯಂಗ್ 21-18, 21-10 ಅಂತರದಿಂದ ಭಾರತದ ಜೋಡಿಗೆ ಸೋಲುಣಿಸಿದರು.
ಮೊದಲ ಗೇಮ್ನಲ್ಲಿ ಅಶ್ವಿನಿ-ತನಿಷಾ ಆಟ ಉತ್ತಮ ಮಟ್ಟದಲ್ಲಿತ್ತು. ಇದನ್ನು ಸಣ್ಣ ಅಂತರದಲ್ಲಿ ಕಳೆದುಕೊಂಡರು. ಆದರೆ ದ್ವಿತೀಯ ಗೇಮ್ನಲ್ಲಿ ಸಂಪೂರ್ಣ ಲಯ ತಪ್ಪಿದರು.
ಸೋಮವಾರದ ದ್ವಿತೀಯ ಪಂದ್ಯದಲ್ಲಿ ಇವರು ಜಪಾನ್ನ ಚಿಹರು ಶಿಡಾ-ನಾಮಿ ಮತ್ಸುಯಮಾ ಜೋಡಿಯನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್
Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್ ಧ್ವಜ
Paris: 2036ರ ಒಲಿಂಪಿಕ್ಸ್ ಭಾರತ ನಡೆಸಬಲ್ಲದು: ಫ್ರಾನ್ಸ್ ಅಧ್ಯಕ್ಷ
Paris Olympics 2024ಕ್ಕೆ ವರ್ಣರಂಜಿತ ವಿದಾಯ
IOA; ವಿನೀಶ್ ಫೋಗಾಟ್ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.