TT: 32ರ ಸುತ್ತಿಗೆ ಶ್ರೀಜಾ, ಮಣಿಕಾ; ಶರತ್ ಕಮಲ್ಗೆ ಸೋಲಿನ ಆಘಾತ
Team Udayavani, Jul 29, 2024, 12:36 AM IST
ಪ್ಯಾರಿಸ್: ಭಾರತದ ಅಗ್ರ ರ್ಯಾಂಕ್ನ ಟೇಬಲ್ ಟೆನಿಸ್ ಆಟಗಾರ್ತಿ ಶ್ರೀಜಾ ಅಕುಲಾ ಮತ್ತು ಮಣಿಕಾ ಬಾತ್ರಾ ಪ್ಯಾರಿಸ್ ಒಲಿಂಪಿಕ್ಸ್ ಮೊದಲ ಪಂದ್ಯವನ್ನು ಗೆದ್ದು 32ರ ಸುತ್ತು ಪ್ರವೇಶಿಸಿದ್ದಾರೆ. ಆದರೆ ಹಿರಿಯ ಆಟಗಾರ ಅಚಂತ ಶರತ್ ಕಮಲ್ ಮೊದಲ ಸುತ್ತಿನಲ್ಲೇ ಸೋತು ಆಘಾತ ಅನುಭವಿಸಿದರು.
ಶ್ರೀಜಾ ಅಕುಲಾ ಸ್ವೀಡನ್ನ ಕ್ರಿಸ್ಟಿನಾ ಕಾಲ್ಬರ್ಗ್ ವಿರುದ್ಧ 4-0 ಅಂತರದ ಗೆಲುವು ಸಾಧಿಸಿದರು (11-4, 11-9, 11-7, 11-8). ಮೊದಲ ಸೆಟ್ನಲ್ಲಿ ಶ್ರೀಜಾ ಸ್ವಲ್ಪ ಸಮಸ್ಯೆ ಎದುರಿಸಿದರು. ಆದರೂ ಇದನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು. ಮಣಿಕಾ ಬಾತ್ರಾ ಗ್ರೇಟ್ ಬ್ರಿಟನ್ನ 103ನೇ ರ್ಯಾಂಕಿಂಗ್ ಆಟಗಾರ್ತಿ ಅನ್ನಾ ಹರ್ಸಿ ವಿರುದ್ಧ 4-1ರಿಂದ ಗೆದ್ದು ಬಂದರು (11-8, 12-10, 11-9, 9-11, 11-5). ಆತಿಥೇಯ ಫ್ರಾನ್ಸ್ನ ಭಾರತೀಯ ಮೂಲದ ಆಟಗಾರ್ತಿ ಪ್ರತಿಕಾ ಪಾವಡೆ ವಿರುದ್ಧ ಮಣಿಕಾ ಮುಂದಿನ ಸುತ್ತಿನ ಪಂದ್ಯ ಆಡಲಿದ್ದಾರೆ.
ಶರತ್ ಶರಣಾಗತಿ
42 ವರ್ಷದ, ಈ ಒಲಿಂಪಿಕ್ಸ್ನಲ್ಲಿ ಧ್ವಜಧಾರಿಯ ಗೌರವ ಸಂಪಾದಿಸಿದ್ದ ಅಚಂತ ಶರತ್ ಕಮಲ್ ತಮಗಿಂತ 86 ಸ್ಥಾನದಷ್ಟು ಕೆಳ ಕ್ರಮಾಂಕದ ಆಟಗಾರ, ಸ್ಲೊವೇನಿಯಾದ ಡೆನಿ ಕೊಝುಲ್ ವಿರುದ್ಧ 2-4 ಅಂತರದ ಸೋಲನುಭವಿಸಿದರು (12-10, 9-11, 6-11, 7-11, 11-8, 10-12). 53 ನಿಮಿಷಗಳಲ್ಲಿ ಶರತ್ ಶರಣಾಗತಿ ಸಾರಿದರು. ಇದರೊಂದಿಗೆ ಅಚಂತ ಶರತ್ ಕಮಲ್ ಅವರ ಒಲಿಂಪಿಕ್ಸ್ ಸಿಂಗಲ್ಸ್ ಅಭಿಯಾನ ದುರಂತದಲ್ಲಿ ಕೊನೆಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್
Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್ ಧ್ವಜ
Paris: 2036ರ ಒಲಿಂಪಿಕ್ಸ್ ಭಾರತ ನಡೆಸಬಲ್ಲದು: ಫ್ರಾನ್ಸ್ ಅಧ್ಯಕ್ಷ
Paris Olympics 2024ಕ್ಕೆ ವರ್ಣರಂಜಿತ ವಿದಾಯ
IOA; ವಿನೀಶ್ ಫೋಗಾಟ್ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.