Mangaluru-Bengaluru Railway Track: 430 ಸಿಬಂದಿ, ಕಾರ್ಮಿಕರಿಂದ ಅಹೋರಾತ್ರಿ ಕೆಲಸ

ಸಮರೋಪಾದಿಯಲ್ಲಿ ದೋಣಿಗಲ್‌ ರೈಲು ಮಾರ್ಗ ದುರಸ್ತಿ ಕಾರ್ಯ

Team Udayavani, Jul 29, 2024, 7:15 AM IST

Edakumeri

ಮಂಗಳೂರು/ಸುಬ್ರಹ್ಮಣ್ಯ: ಮಂಗಳೂರು – ಬೆಂಗಳೂರು ರೈಲು ಮಾರ್ಗದ ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣ ಸಮೀಪದ ಎಡಕು ಮೇರಿ – ಕಡಗರವಳ್ಳಿ ನಡುವಿನ ದೋಣಿಗಲ್‌ನಲ್ಲಿ ಉಂಟಾಗಿರುವ ಗಂಭೀರ ಸ್ವರೂಪದ ಭೂ ಕುಸಿತ ದಿಂದ ಹಾನಿಗೀಡಾಗಿರುವ ರೈಲು ಮಾರ್ಗದ ದುರಸ್ತಿ ಕಾರ್ಯ ಹಗಲು ರಾತ್ರಿ ಸಮಾ ರೋಪಾದಿಯಲ್ಲಿ ನಡೆಯುತ್ತಿದೆ.

ನಿರಂತರ ಮಳೆಯ ಸವಾಲಿನ ನಡುವೆಯೂ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಅಗತ್ಯ ಸಲಕರಣೆಗಳೊಂದಿಗೆ ಒಟ್ಟು 430 ಸಿಬಂದಿ, ಕಾರ್ಮಿಕರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಗಲು ಪಾಳಿಯಲ್ಲಿ 200, ರಾತ್ರಿ ಪಾಳಿಯಲ್ಲಿ 120 ಹಾಗೂ ಇತರ 110 ಸಿಬಂದಿ ಯನ್ನು ನಿಯೋಜಿಸಲಾಗಿದೆ. ಸುರಕ್ಷೆಗೆ ಆದ್ಯತೆ ನೀಡಿ ಕಾಮಗಾರಿ ನಿರ್ವಹಿಸ ಲಾಗುತ್ತಿದೆ. ಶುಕ್ರವಾರ ಸಂಜೆ ವೇಳೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿ ರೈಲು ಹಳಿಗೆ ಅಪಾಯ ಉಂಟಾಗಿದೆ.

ಬಂಡೆ ಕಲ್ಲು, ಮರಳಿನ ಚೀಲ
ಆರು ಹಿಟಾಚಿ ಯಂತ್ರಗಳು, ಐದು ಪೋಕ್ಲೈನ್‌ ಯಂತ್ರಗಳೂ ಸ್ಥಳದಲ್ಲಿವೆ. ಒಟ್ಟು ಅಗತ್ಯವಿರುವ 3870 ಕ್ಯುಬಿಕ್‌ ಮೀಟರ್‌ನಷ್ಟು ಬಂಡೆ ಕಲ್ಲುಗಳ ಪೈಕಿ 670 ಕ್ಯು.ಮೀ. ಈಗಾಗಲೇ ಸ್ಥಳಕ್ಕೆ ತಲುಪಿದೆ. 20 ವ್ಯಾಗನ್‌ ದೊಡ್ಡ ಬಂಡೆಗಳು ಸುಬ್ರಹ್ಮಣ್ಯ ರೋಡ್‌ಗೆ ಬಂದು ತಲುಪಿದೆ. 50 ಕ್ಯು.ಮೀ. ಬಂಡೆ ಕಲ್ಲುಗಳು ಅಮರಾವತಿ ಕಾಲನಿಯಿಂದ ಹೊರಟಿದೆ. ಒಟ್ಟು 1 ಲಕ್ಷ ಮರಳಿನ ಚೀಲ ಅಗತ್ಯವಿದ್ದು, ಈಗಾಗಲೇ 15 ಸಾವಿರ ಚೀಲಗಳನ್ನು ವ್ಯವಸ್ಥೆ ಮಾಡಲಾಗಿದ್ದು, 35 ಸಾವಿರ ಮರಳು ಚೀಲಗಳು ಆಗಮಿಸುತ್ತಿವೆ.

ಆಹಾರ, ನೀರು, ಬೆಳಕಿನ ವ್ಯವಸ್ಥೆ
ಆಹಾರ ತಯಾರಿ, ಪೂರೈಕೆ ಹಾಗೂ ವೈದ್ಯಕೀಯ ತಂಡಗಳೂ ಸ್ಥಳದಲ್ಲಿವೆ. ಸುಬ್ರಹ್ಮಣ್ಯ ನಿಲ್ದಾಣದಿಂದ ಆಹಾರ, ನೀರು ಸರಬರಾಜು ಮಾಡಲಾಗುತ್ತಿದೆ. ದುರಸ್ತಿಗೆ ಬೇಕಾಗಿರುವ 8 ಜನರೇಟರ್‌ಗಳು, ಸಮರ್ಪಕ ಬೆಳಕಿನ ವ್ಯವಸ್ಥೆಯೊಂದಿಗೆ ಸಂಪರ್ಕ ನೆಟ್‌ವರ್ಕ್‌, ಇಂಟರ್‌ನೆಟ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಂವಹನ ವ್ಯವಸ್ಥೆಗಳಾದ ಆಟೋ ಫೋನ್‌ಗಳು, ಕಂಟ್ರೋಲ್‌ ಫೋನ್‌, ಸ್ಯಾಟಲೈಟ್‌ ಫೋನ್‌, ವಿಎಸ್‌ಟಿಎ ಸಂವಹನ (ಲೈವ್‌ ಸ್ಟ್ರೀಮಿಂಗ್‌ಗಾಗಿ) ವ್ಯವಸ್ಥೆಗಳನ್ನು ಬಳಸಲಾಗುತ್ತಿದ್ದು, ಹುಬ್ಬಳ್ಳಿಯ ಕೇಂದ್ರ ಕಚೇರಿಯ ವಾರ್‌ ರೂಮ್‌ನಿಂದ ಸಂವಹನ ನಡೆಸಲಾಗುತ್ತಿದೆ.

ಅಧಿಕಾರಿಗಳಿಂದ ಪರಿಶೀಲನೆ
ಮೈಸೂರಿನ ವಿಭಾಗೀಯ ರೈಲ್ವೇ ಪ್ರಬಂಧಕಿ ಶಿಲ್ಪಿ ಅಗರ್‌ವಾಲ್‌ ಮತ್ತು ಇತರ ಹಿರಿಯ ಅಧಿಕಾರಿ ಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ನೈಋತ್ಯ ರೈಲ್ವೇಯ ಮಹಾ ಪ್ರಬಂಧಕ ಅರವಿಂದ ಶ್ರೀವಾಸ್ತವ, ಉಪಮಹಾ ಪ್ರಬಂಧಕ ಕೆ.ಎಸ್‌.ಜೈನ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಕಾಮಗಾರಿ ಮಾಹಿತಿ ಪಡೆಯುತ್ತಿದ್ದಾರೆ. ದುರಸ್ತಿ ಪೂರ್ಣ ಗೊಳ್ಳಲು ಇನ್ನೂ 4-5 ದಿನ ಬೇಕಾ ದೀತು ಎನ್ನುತ್ತಾರೆ ಅಧಿಕಾರಿಗಳು.

ದುರಸ್ತಿ ಕಾರ್ಯ ಹೇಗೆ?
ಭೂಕುಸಿತವಾದ ಜಾಗದಲ್ಲಿ ಮಣ್ಣನ್ನು ಹಿಡಿದಿಡುವಂತೆ ತಡೆ ಯುವ ಕೆಲಸ ನಡೆಯುತ್ತಿದ್ದು, ಕಲ್ಲು ಬಂಡೆ, ಮರಳಿನ ಚೀಲ ಜೋಡಿ ಸಲಾಗುತ್ತದೆ. ಅದಕ್ಕೆ ಕಬ್ಬಿಣದ ನೆಟ್‌ (ಗೇಬಿಯನ್‌ಮೆಷ್‌) ಮೂಲಕ ತಡೆಗೋಡೆ ನಿರ್ಮಿಸ ಲಾಗುತ್ತಿದೆ. ಇದೇ ಮಾದ ರಿಯ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡ ತಜ್ಞರ ಅಭಿಪ್ರಾಯವನ್ನು ಪಡೆಯಲಾಗುತ್ತಿದೆ.

ರೈಲು ಸೇವೆ: ವ್ಯತ್ಯಯ
ಮಂಗಳೂರು: ನಂ.16511 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು ಎಕ್ಸ್‌ಪ್ರೆಸ್‌ ರೈಲನ್ನು ಜು.29ರಿಂದ ಆ.3ರ ವರೆಗೆ ಸಂರ್ಪೂವಾಗಿ ರದ್ದು ಮಾಡಲಾಗಿದೆ. ನಂ.16512 ಕಣ್ಣೂರು- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲನ್ನು ಜು.30ರಿಂದ ಆ.4ರ ವರೆಗೆ ರದ್ದುಪಡಿಸಲಾಗಿದೆ.

ನಂ.07378 ಮಂಗಳೂರು ಸೆಂಟ್ರಲ್‌- ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು ಜು.30ರಿಂದ ಆ.4 ವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ. ನಂ.07377 ವಿಜಯಪುರ- ಮಂಗಳೂರು ಸೆಂಟ್ರಲ್‌ ರೈಲನ್ನು ಜು. 29ರಿಂದ ಆ. 3ರ ವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ.

ನಂ.16585 ಎಸ್‌ಎಂವಿಟಿ ಬೆಂಗಳೂರು – ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲು ಜು. 29ರಿಂದ ಆ. 3ರ ವರೆಗೆ ಸಂಪೂರ್ಣ ರದ್ದಾಗಿದೆ. ನಂ.16586 ಮುರುಡೇಶ್ವರ – ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಜು.30ರಿಂದ ಆ. 4ರ ವರೆಗೆ ಸಂಪೂರ್ಣ ರದ್ದಾಗಿದೆ.
ನಂ.16595 ಕೆಎಸ್‌ಆರ್‌ ಬೆಂಗಳೂರು – ಕಾರವಾರ ವಿಶೇಷ ಎಕ್ಸ್‌ಪ್ರೆಸ್‌ ರೈಲು ಜು. 29 ರಿಂದ ಆ. 3ರ ವರೆಗೆ ಮತ್ತು ನಂ.16596 ಕಾರವಾರ -ಕೆಎಸ್‌ಆರ್‌ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು ಜು.30ರಿಂದ ಆ.4ರ ವರೆಗೆ ಸಂಪೂರ್ಣ ರದ್ದಾಗಿದೆ. ನಂ.16576 ಮಂಗಳೂರು ಜಂಕ್ಷನ್‌ – ಯಶವಂತಪುರ ಜಂಕ್ಷನ್‌ ಎಕ್ಸ್‌ ಪ್ರಸ್‌ ರೈಲನ್ನು ಜು. 30 ಮತ್ತು ಆ. 1ರಂದು ನಂ.16575 ಯಶವಂತಪುರ ಜಂಕ್ಷನ್‌-ಮಂಗಳೂರು ಜಂಕ್ಷನ್‌ ಆ. 31 ಮತ್ತು ಜು. 2ರಂದು ರದ್ದುಪಡಿಸಲಾಗಿದೆ.

ನಂ.16539 ಯಶವಂತಪುರ ಜಂಕ್ಷನ್‌ – ಮಂಗಳೂರು ಜಂಕ್ಷನ್‌ ಎಕ್ಸ್‌ ಪ್ರಸ್‌ ರೈಲನ್ನು ಆ.3ರಂದು ಮತ್ತು ನಂ.16540 ಮಂಗಳೂರು ಜಂಕ್ಷನ್‌ – ಯಶವಂತಪುರ ಜಂಕ್ಷನ್‌ ರೈಲನ್ನು ಆ.4ರಂದು ರದ್ದುಪಡಿಸಲಾಗಿದೆ.
ನಂ.16515 ಯಶವಂತಪುರ ಜಂಕ್ಷನ್‌- ಕಾರವಾರ ಎಕ್ಸ್‌ಪ್ರೆಸ್‌ ರೈಲನ್ನು ಜು. 29, 31 ಮತ್ತು ಆ.2ರಂದು ರದ್ದುಪಡಿಸಲಾಗಿದೆ. ನಂ.16516 ಕಾರವಾರ -ಯಶವಂತಪುರ ಜಂಕ್ಷನ್‌ ರೈಲನ್ನು ಜು. 30, ಆ. 1 ಮತ್ತು ಆ.3ರಂದು ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ಪಾಲಕ್ಕಾಡ್‌ ವಿಭಾಗದ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Lokayukta

Kinnigoli: ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ,ಜೂನಿಯರ್‌ ಇಂಜಿನಿಯರ್‌ ಲೋಕಾಯಕ್ತ ಬಲೆಗೆ

10

Puttur: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು

1

Puttur: ವಿದ್ಯುತ್‌ ಉಪಕರಣದಲ್ಲಿ ಬೆಂಕಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.